ಕೊರೊನಾ ವಿರುದ್ಧದ ಹೋರಾಟದಲ್ಲಿ ಸ್ವಯಂಸೇವಕರಾಗಲು ಇಲ್ಲಿದೆ ಅವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಮೇ 4-ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂಬ ಆಸೆ ನಿಮಗಿದೆಯೇ ಹಾಗಾದರೆ ಅಂತಹ ಒಂದು ಅವಕಾಶವನ್ನು ಇಂಟರ್ನ್‍ಶಾಲಾ ಕಲ್ಪಿಸಿಕೊಟ್ಟಿದೆ. ದೇಶದ್ಯಾಂತ 10 ಸಾವಿರಕ್ಕೂ ಹೆಚ್ಚು ಯುವ ಸಮುದಾಯವನ್ನು ಸ್ವಯಂಸೇವಕರನ್ನಾಗಿ ನೇಮಕ ಮಾಡಿಕೊಂಡು ಕೊರೊನಾ ವಿರುದ್ಧದ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ತರಬೇತಿ ನೀಡಲು ಸಂಸ್ಥೆ ತೀರ್ಮಾನಿಸಿದೆ.

ಸ್ವಯಂಸೇವಕರಾಗಲು ಇಚ್ಚಿಸುವ ವಿದ್ಯಾರ್ಥಿ ಸಮುದಾಯ ಮೇ.13ರೊಳಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.
ಇಡಿ ದೇಶವನ್ನೇ ಕೊರೊನಾ ಮಹಾಮಾರಿ ಕಾಡುತ್ತಿರುವ ಸಂದರ್ಭದಲ್ಲಿ ಸೋಂಕಿಗೆ ತುತ್ತಾಗಿ ಅಗತ್ಯ ಸೌಲಭ್ಯ ಸಿಗದೆ ಪರದಾಡುತ್ತಿರುವವರ ಸೇವೆ ಮಾಡಬೇಕು ಎಂಬ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಸಂಸ್ಥೆಯ ಸಿಇಒ ಸರ್ವೇಶ್ ಅಗರ್‍ವಾಲಾ ತಿಳಿಸಿದ್ದಾರೆ.

Facebook Comments

Sri Raghav

Admin