ಕೊರೊನಾ ವಿರುದ್ಧ ಹಗಲಿರುಳು ಹೋರಾಡುತ್ತಿರುವ ವೈದ್ಯರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಮಹಾಮಾರಿ ಕೊರೊನಾ ಸಾಂಕ್ರಾಮಿಕ ರೋಗ ನಿವಾರಣೆಗಾಗಿ ಹಗಲಿರುಳು ದುಡಿಯುತ್ತಿರುವ ಗುತ್ತಿಗೆ ವೈದ್ಯರ ಸಂಬಳವನ್ನು ಗಣನೀಯವಾಗಿ ಹೆಚ್ವಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಗುರುವಾರ ವಿಧಾನಸೌಧದಲ್ಲಿ ಸಿಎಂ ಬಿಎಸ್‌ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಈ ಮಹತ್ವದ ನಿರ್ಧಾರಕ್ಕೆ ಬರಲಾಯಿತು.

ಇದರ ಜೊತೆಗೆ ಗುತ್ತಿಗೆ ನೌಕರರ ವೇತನವನ್ನು ಹಂತ ಹಂತವಾಗಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳಕ್ಕೆ ಸಂಬಂಧ ಪಟ್ಟ ಇಲಾಖೆಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಖಾಯಂಗೂ ಕ್ರಮಕ್ಕೆ ಮುಂದಾಗುವಂತೆ ಸಿ.ಎಂ.ಯಡಿಯೂರಪ್ಪ ಅವರು,ಸೂಚನೆ ನೀಡಿದ್ದಾರೆ.

ಗುತ್ತಿಗೆ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರನ್ನು ಖಾಯಂ ಮಾಡಿಕೊಳ್ಳಲು ಕಾನೂನಿನಲ್ಲಿ ತೊಡಕಿದೆ ಎಂಬ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ, ಕಾನೂನು ತೊಡಕನ್ನು ನಿವಾರಣೆ ಮಾಡಿ, ಖಾಯಂಗೆ ಅನುಕೂಲ ಮಾಡಿಕೊಡುವಂತೆ ಸೂಚನೆ ನೀಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಗುತ್ತಿಗೆ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರಿಗೆ ಕೊರೋನಾ ಕಂಟಕದ ಸಂದರ್ಭದಲ್ಲಿಯೇ ವೇತನ ಹೆಚ್ಚಳ, ಖಾಯಂಗೆ ಸೂಚನೆ ನೀಡಿ, ಗುತ್ತಿಗೆ ವೈದ್ಯರಿಗೆ ಸಿಹಿಸುದ್ದಿ ನೀಡಿದ್ದಾರೆ.

ಕುಡಿಯುವ ನೀರಿಗೆ ಸಂಬಂಧಿಸಿದಂತೆ ಎಲ್ಲೆಲ್ಲಿ ನೀರಿನ ಅಭಾವವಿದೆಯೋ ಅಲ್ಲೆಲ್ಲ ತುರ್ತಾಗಿ ನೀರಿನ‌ ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ‌ ನೀಡಲಾಯಿತು.  ಅದರಲ್ಲೂ ಕೋವಿಡ್ ಭೀತಿ ಇರುವುದರಿಂದ ಗುಣಮಟ್ಟದ ನೀರನ್ನು ಸರಬರಾಜು ಮಾಡುವಂತೆ ನಿದೇರ್ಶನ ಕೊಡಲಾಗಿದೆ. ಕೋವಿಡ್ ಬಗ್ಗೆ ಗ್ರಾಮ ಮಟ್ಟದಲ್ಲಿ ಟಾಸ್ಟ್ ಪೋರ್ಸ್ ರಚನೆ‌ ಮಾಡಲಾಗಿದ್ದು ಅದನ್ನು ಇನ್ನಷ್ಟು ಚುರುಕುಗೊಳಿಸಬೇಕು.

ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಅಣೆಕಟ್ಟುಗಳಲ್ಲಿ  ಹೆಚ್ಚು ನೀರು‌ ಸಂಗ್ರಹವಾಗಿದ್ದಾರೆ ಅದನ್ನು ರೈತರ ಬೆಳೆಗಳಿಗೆ‌‌ ಮತ್ತು‌ ಕುಡಿಯುವ ನೀರಿಗೆ ಹರಿಸಲು ಸೂಚನೆ‌ ನೀಡಿದರು. ಕಳೆದ ವರ್ಷ ಆದ ಅನಾಹುತ ಮತ್ತೆ‌‌ ಮರುಕಳಿಸದಂತೆ ಡ್ಯಾಮ್ ಗಳಲ್ಲಿ ಪ್ರತಿನಿತ್ಯ ಲಭ್ಯವಿರುವ ನೀರಿನ‌ ಮಾಹಿತಿಯನ್ನು‌ ಪಡೆಯಲು  ಮುಂದಾಗುವಂತೆ ತಾಕೀತು ಮಾಡಿದರು. ರೈತರು ಬೆಳೆದ ತರಕಾರಿಗಳು ಕೋವಿಡ್ನಿಂದಾಗಿ ಬೆಲೆ‌ ಕಳೆದುಕೊಂಡಿದ್ದು ಅದನ್ನು ನಾವೇ ಕೊಂಡುಕೊಂಡು ಕೋಲ್ಟ್ ಸ್ಟೋರೇಜ್ ನಲ್ಲಿ ಇಟ್ಟು ತದ‌ನಂತರ‌ ಮಾರಾಟ ಮಾಡಬೇಕು.

ಹೆಚ್ಚುದಿನ‌ ಇಡುವುದಕ್ಕೆ ಸಾದ್ಯವಾಗದ ತರಕಾರಿಗಳು ಹಣ್ಣುಗಳು ಸೇರಿದಂತೆ ರೈತರು‌ ಬೆಳೆಯುವ ಬೆಳೆಗಳನ್ನು ಇತರೆ ರಾಜ್ಯಗಳಿಗೆ ಮತ್ತು ಹೊರದೇಶಗಳಿಗೆ ಕಳುಹಿಸಿ‌ ಮಾರಾಟ‌‌ ಮಾಡುವಂತೆ ಸೂಚನೆ‌‌ ನೀಡಿದರು.  ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಕೋವಿಡ್ ನಿಂದಾಗಿ ಅಂತರಾಷ್ಟ್ರೀಯ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿರುವುದರಿಂದ ದೇಶಿಯ ಪ್ರವಾಸಿಗರನ್ನು ಆಕರ್ಷಣೆ‌ ಮಾಡುವತ್ತ ಗಮನ ಹರಿಸಬೇಕು.ಇದರ ಜೊತೆಗೆ ಅಲ್ಲಿ ಕೋವಿಡ್ ಇಲ್ಲ ಅನ್ನೋದನ್ನು‌ ಪ್ರವಾಸಿಗರಿಗೆ‌ ಹೆಚ್ಚು ಹೆಚ್ಚು ಪ್ರಚಾರ ಮಾಡಬೇಕು
ಎಂದು ಸೂಚಿಸಿದ್ದಾರೆ.

ನಗರಗಳಲ್ಲಿ ವಿವಿಧ ಸಂಘ ಸಂಸ್ಥೆಗಳು ಸರ್ಕಾರಿ‌ ಜಾಗವನ್ನು ಲೀಸ್ ಗೆ ಪಡೆದು ಇದುವರೆಗು ಕೆಲಸ ಶುರು‌ ಮಾಡದೆ ಷರತ್ತುಗಳನ್ನು ಉಲ್ಲಂಘನೆ‌ ಮಾಡಿದ ಜಾಗಗಳನ್ನು ಸರ್ಕಾರಕ್ಕೆ ವಾಪಸ್ ಪಡೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ
ತಾಕೀತು ಮಾಡಿದರು.

ಲಾಕ್ ಡೌನ್ ಪರಿಣಾಮ ರಾಜ್ಯ ಸಾರಿಗೆ ಸಂಸ್ಥೆಯೂ ನೂರಾರು ಕೋಟಿ ನಷ್ಟ ದಲ್ಲಿದೆ.ಹೀಗಾಗಿ ಬಸ್ ಗಳನ್ನ ಗೂಡ್ಸ್ ಸಾರಿಗೆಯಾಗಿ ಬಳಸಿಕೊಂಡು ಅದರ ಮೂಲಕ ಆದಾಯ ಪಡೆಯಬೇಕು. ಖಾಸಗಿ ಕಂಪನಿಗಳಿಗೆ ಬಸ್ ಗಳನ್ನು ಗುತ್ತಿಗೆ ಆಧಾರದ ಮೇಲೆ ನೀಡಲು ತೀರ್ಮಾನ‌ ಮಾಡಲಾಗಿದೆ.

ಇದೇ ವೇಳೆ ಕೇಂದ್ರ ಸಚಿವರಾದ ಸದಾನಂದಗೌಡ ರಿಗೆ ಕರೆ‌ಮಾಡಿ ಗೊಬ್ಬರಕ್ಕೆ ಸಂಬಂಧಿಸಿದಂತೆ ಮಾಹಿತಿ‌ ಪಡೆದ ,ಯಡಿಯೂರಪ್ಪ ಅವರು, ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ‌‌ ಕಡಿಮೆ‌ ಇರೋದರಿಂದ ಇರುವ ಬೆಲೆಗಿಂತ ರೈತರಿಗೆ ಕಡಿಮೆ ಬೆಲೆಗೆ ಗೊಬ್ಬರು ಮಾರಾಟ ಮಾಡಲಾಗುವುದು ಅನ್ನೋದನ್ನ ಕೇಂದ್ರ ಸಚಿವರು ಮನದಟ್ಟು‌ ಮಾಡಿದರು.

ಇದನ್ನು ರೈತರಿಗೆ ಮನವರಿಕೆ ಮಾಡಿ ಆತಂಕ ದೂರು ಮಾಡಲು ಸೂಚನೆ‌ ನೀಡಲಾಯಿತು. ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಆನ್ ಲೈನ್ ತರಭೇತಿ ನೀಡುವುದರ ಜೊತೆಗೆದೂರದರ್ಶನದ ಮೂಲಕ ಮಕ್ಕಳಿಗೆ ಪಾಠ ಸೇರಿದಂತೆ ಇತರೆ ಚಟುವಟಿಕೆ ಗಳನ್ನು ಶಾಲೆ ತೆರೆಯುವವರೆಗೂ ಮಕ್ಕಳಿಗೆ ನೀಡಲು ನಿದೇರ್ಶನ ನೀಡಿದರು.

ಕಲ್ಯಾಣ ಕರ್ನಾಟಕ ಮತ್ತು ಇತರೆ ಅಭಿವೃದ್ಧಿ ಮಂಡಳಿಗೆಳ ಭಾಗದಲ್ಲಿ ಭಾಗದಲ್ಲಿ ತುರ್ತಾಗಿ ಆಗಬೇಕಾಗಿರೋ ಕೆಲಸ ಕಾರ್ಯಗಳನ್ನು ಮಾಡಲು ಸೂಚನೆ ನೀಡಲಾಯಿತು. (ಆಸ್ಪತ್ರೆ ಶಿಕ್ಷಣ ಕುಡಿಯುವ ನೀರು ಇತರೆ)

Facebook Comments

Sri Raghav

Admin