ಭಾರತದಲ್ಲಿ ಈವರೆಗೆ 121090 ಮಂದಿ ಮಹಾಮಾರಿ ಕೊರೋನಾಗೆ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ,ಅ.30- ದೇಶಾದ್ಯಂತ ಮಾರಕಕೊರೊನಾ ವೈರಸ್‍ನಹಾವಳಿ ಇಳಿಮುಖವಾಗುವ ಮುನ್ಸೂಚನೆ ನಡುವೆಯೇ ಮತ್ತೆ ಸೋಂಕು ಮತ್ತು ಸಾವು ಪ್ರಕರಣಗಳಲ್ಲಿ ಏರಿಳಿತ ಕಂಡಿರುವುದುಜನರಲ್ಲಿ ಪುನಃ ಕಳವಳಕ್ಕೆ ಕಾರಣವಾಗಿದೆ. ಗರಿಷ್ಠಕೇರಿ ಇಳಿಮುಖದತ್ತ ಸಾಗುತ್ತಿದ್ದ ಮಹಾಮಾರಿ ಬಗ್ಗೆ ಜನರು ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಧೋರಣೆ ಅನುಸರಿಸಿದ ಪರಿಣಾಮ ಮತ್ತೆ ಸೋಂಕು ಪ್ರಕರಣಗಳು ಏರತೊಡಗಿದೆ.

ದೇಶದಲ್ಲಿಒಟ್ಟು ಸೋಂಕು ಪ್ರಕರಣಗಳು 81 ಲಕ್ಷಸನಿಹದಲ್ಲಿದ್ದು, ಸಾವಿನ ಸಂಖ್ಯೆ 1.21 ಲಕ್ಷದಾಟಿದೆ.  ಹೆಮ್ಮಾರಿಯ ಆರ್ಭಟಗರಿಷ್ಠಕ್ಕೇರಿ ಇಳಿಮುಖದ ಹಾದಿಯಲ್ಲಿಸಾಗುತ್ತಿದ್ದ ಸಂದರ್ಭದಲ್ಲಿ ಜನರು ಮುನ್ನೆಚ್ಚರಿಕೆವಹಿಸದ ಪರಿಣಾಮ ದಿನಿನಿತ್ಯ ಪಾಸಿಟಿವ್ ಕೇಸ್ ಮತ್ತೆ 50,000ದತ್ತ ತಲುಪುತ್ತಿದೆ.

101 ದಿನಗಳ ಬಳಿಕ ದಿನನಿತ್ಯದ ಸೋಂಕು ಪ್ರಕರಣಸೋಮವಾರ ಮೊದಲ ಬಾರಿಗೆ 37,000ಕ್ಕಿಂತ ಕಡಿಮೆಯಾಗಿತ್ತು.ಆದರೆ ನಂತರ ಮತ್ತೆ ಸೋಂಕು ಏರುಗತಿಯತ್ತ ಮರಳಿದೆ ನಿನ್ನೆ 48,648 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಮೊನ್ನೆಇದು 49,881ಕ್ಕೇರಿತ್ತು. ಮೊನ್ನೆಗಿಂತ ನಿನ್ನೆ ಪ್ರಕರಣಗಳು ಇಳಿಕೆಯಾಗಿದ್ದರೂ ಆತಂಕದ ಪರಿಸ್ಥಿತಿ ಮುಂದುವರಿದಿದೆ

ಸತತ 12ನೇ ದಿನ 60,000ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಪಾಸಿಟಿವ್ ಕೇಸ್‍ಗಳು ವರದಿಯಾಗಿದೆ.ಅಲ್ಲದೇ ಸತತ14ನೇ ದಿನವೂ ಸಕ್ರಿಯ ಸೋಂಕು ಪ್ರಕರಣಗಳು 8 ಲಕ್ಷಕ್ಕಿಂತ ಕಡಿಮೆ ಮಟ್ಟದಲ್ಲಿ ಇಳಿಮುಖದತ್ತ ಸಾಗಿದೆ. ಇದಲ್ಲದೇ ಎರಡು ತಿಂಗಳ ಬಳಿಕ ಆಕ್ಟಿವ್ ಕೇಸ್‍ಗಳು ಕಳೆದ ಒಂಭತ್ತು ದಿನಗಳಿಂದ 7 ಲಕ್ಷಕ್ಕಿಂತ ಕಡಿಮೆಗೆ ಇಳಿದಿದೆ. 80 ದಿನಗಳ ತರುವಾಯ ಇದು 6 ಲಕ್ಷಕ್ಕಿಂತ ಕಡಿಮೆ ಇಳಿದಿದೆ. ಈ ತಿಂಗಳಲ್ಲಿ ಏಳನೆ ಬಾರಿ 50,000ಕ್ಕಿಂತ ಕಡಿಮೆ ಪಾಸಿಟಿವ್ ಪ್ರಕರಣ ವರದಿಯಾಗಿದೆ.

ಇದೇ ವೇಳೆ ದಿನನಿತ್ಯದ ಸಾವು ಪ್ರಕರಣಗಳಲ್ಲೂ ಕೊಂಚ ಏರಿಕೆಕಂಡು ಬಂದಿದ್ದು, 24 ತಾಸುಗಳ ಅವಧಿಯಲ್ಲಿ563 ಮಂದಿ ಸಾವಿಗೀಡಾಗಿದ್ದಾರೆ. ಮೊನ್ನೆ517 ರೋಗಿಗಳು ಬಲಿಯಾಗಿದ್ದರು. ಇವುಗಳ ನಡುವೆಯೂದೇಶದಲ್ಲಿಸೋಂಕಿತರ ಪ್ರಮಾಣ 81 ಲಕ್ಷದಾಟುತ್ತಿರುವುದು ಜನರಲ್ಲಿ ಆತಂಕ ಮುಂದುವರಿಯುವಂತೆ ಮಾಡಿದೆ. ಈವರೆಗೆ ಗುಣಮುಖರಾದ ಸೋಂಕಿತರ ಸಂಖ್ಯೆ73.73ಲಕ್ಷದಾಟಿದೆ. ಚೇತರಿಕೆ ಪ್ರಮಾಣ ಶೇ.91.15ರಷ್ಟುಏರಿಕೆ ಮತ್ತು ಸಾವಿನ ಪ್ರಮಾಣ ಶೇ.1.50ರಷ್ಟುತಗ್ಗಿದ್ದು,ಜನರಲ್ಲಿ ನಿರಾಳತೆ ಮೂಡಿದಿದೆ. ದೇಶದಲ್ಲಿ ಮೃತರಸಂಖ್ಯೆ1,21,090ದಾಟಿದೆಎಂದುಕೇಂದ್ರಆರೋಗ್ಯ ಮತ್ತುಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಭಾರತದಲ್ಲಿಒಟ್ಟು ರೋಗಿಗಳ ಸಂಖ್ಯೆ80,88,851ರಷ್ಟಿದ್ದು,ನಾಳೆ ವೇಳೆಗೆ 81 ಲಕ್ಷದಾಟುವ ಸಾಧ್ಯತೆ ಇದೆ. ಆಗಸ್ಟ್ 7ರಂದು 20 ಲಕ್ಷಇದ್ದ ಪಾಸಿಟಿವ್ ಪ್ರಕರಣಗಳು ಆ.23ಕ್ಕೆ 30 ಲಕ್ಷಕ್ಕೇರಿತ್ತು. ನಂತರ ಸೆಪ್ಟೆಂಬರ್ 5ರಂದು 40 ಲಕ್ಷದಾಟಿತ್ತು. ಕೇವಲ 11 ದಿನಗಳಲ್ಲಿ ಅಂದರೆ ಸೆ.16ರಂದು 50 ಲಕ್ಷದಾಟಿದೆ. ಸೆ.28ರಂದು 60 ಲಕ್ಷ ಮೀರಿದೆ. ಅ.11ರಂದು 70 ಲಕ್ಷತಲುಪಿದೆ. ಅ.28ರಂದು 80 ಲಕ್ಷಮುಟ್ಟಿದೆ.

45 ದಿನಗಳ ಬಳಿಕಕಳೆದ 12ದಿನಗಳಿಂದ ಆಕ್ಟಿವ್ ಕೇಸ್‍ಗಳು 8 ಲಕ್ಷಕ್ಕಿಂತ ಕಡಿಮೆ ಇಳಿದಿದ್ದು,ಕಳೆದ ಏಳು ದಿನಗಳಿಂದಲೂ ಏಳು ಲಕ್ಷಕ್ಕಿಂತ ಕಡಿಮೆ ಮಟ್ಟದಲ್ಲಿ ಸಾಗಿದೆ. ಮೊನ್ನೆ6,03,687ದಾಖಲಾಗಿದ್ದ ಪ್ರಕರಣಇಂದು5,94,386 ಲಕ್ಷಕ್ಕೆ ಇಳಿದಿದೆ. ಇಂದು ಬೆಳಗ್ಗೆಯಿಂದ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲಿವೆ. ಆದರೂ ಚೇತರಿಕೆ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಮಹಾರಾಷ್ಟ್ರ ರಾಜ್ಯವು ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ.

ಮುಂದಿನ ಎರಡು ತಿಂಗಳು ಅತ್ಯಂತ ನಿರ್ಣಾಯಕವಾಗಿದ್ದು, ಜನರು ಎಚ್ಚೆತ್ತುಕೊಂಡು ಕೊರೊನಾ ನಿಯಂತ್ರಣ ನಿಯಮಗಳನ್ನು ಪಾಲಿಸಿದರೆ ಪೀಡೆಯನ್ನುದೇಶದಿಂದ ಹೊರಗೆದಬ್ಬಬಹುದಾಗಿದೆ.

ಈ ಮಧ್ಯೆ ಐಸಿಎಂಆರ್ ದೇಶಾದ್ಯಂತ ನಿನ್ನೆ11.64ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೊನಾ ವೈರಸ್ ಸೋಂಕು ತಪಾಸಣೆ ನಡೆಸಿದ್ದು, ಈವರೆಗೆ10.77 ಕೋಟಿಗೂ ಹೆಚ್ಚು ಜನರನ್ನು ಕೋವಿಡ್-19 ಸ್ಯಾಂಪಲ್‍ಟೆಸ್ಟ್‍ಗೆ ಒಳಪಡಿಸಲಾಗಿದೆ.

Facebook Comments