24 ಗಂಟೆಯಲ್ಲಿ ಕೇವಲ 13,596 ಮಂದಿಗೆ ಕೊರೋನಾ, 166 ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಅ.18-ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೇವಲ 13,596 ಹೊಸ ಕೊರೊನಾ ಸೋಂಕು ಪ್ರಕರಣಗಳು ಕಾಣಿಸಿಕೊಂಡಿವೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 3,40,81,315 ಕೋಟಿಗೆ ಏರಿಕೆಯಾಗಿದೆ.

ನಿನ್ನೆಯಿಂದ ಕೊರೊನಾ ಮಹಾಮಾರಿಗೆ 166 ಮಂದಿ ಬಲಿಯಾಗಿರುವುದರಿಂದ ಇದುವರೆಗೂ ಸೋಂಕಿನಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆ 4,52,290 ಲಕ್ಷಕ್ಕೆ ಹೆಚ್ಚಳಗೊಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕಳೆದ 24 ದಿನಗಳಿಂದ ಕೊರೊನಾ ಸೋಂಕಿನ ಪ್ರಮಾಣ 30 ಸಾವಿರದೊಳಗೆ ದಾಖಲಾಗುತ್ತಿರುವುದು ವಿಶೇಷ. ಇದರ ಜೊತೆಗೆ ರಾಷ್ಟ್ರೀಯ ಕೊರೊನಾ ಚೇತರಿಕೆ ಪ್ರಮಾಣ ಶೇ.98.12 ಕ್ಕೆ ಏರಿಕೆಯಾಗಿರುವುದರಿಂದ ಸಕ್ರೀಯ ಸೋಂಕು ಪ್ರಮಾಣ 1,89 ಲಕ್ಷಕ್ಕೆ ಕುಸಿದಿದೆ.

24 ಗಂಟೆಯೊಳಗೆ ಕೊರೊನಾ ಸೋಂಕು ಪ್ರಮಾಣ 6152 ರಷ್ಟು ಕಡಿಮೆಯಾಗಿರುವುದರಿಂದ ಸೋಂಕಿನ ಪ್ರಮಾಣ ಕ್ಷೀಣಿಸುತ್ತಿರುವುದು ಕಂಡು ಬಂದಿದೆ. ಕಳೆದ ಮೇ ತಿಂಗಳಿನಲ್ಲಿ ಎರಡು ಕೋಟಿಯಷ್ಟಿದ್ದ ಸೋಂಕಿತರ ಸಂಖ್ಯೆ ಜೂ.23 ರ ವೇಳೆಗೆ ಮೂರು ಕೋಟಿ ಗಡಿ ದಾಟಿತ್ತು. ಇದೀಗ ನಾಲ್ಕು ತಿಂಗಳು ಕಳೆದರೂ ಸೋಂಕಿನ ಸಂಖ್ಯೆ 3,50 ಕೋಟಿ ಗಡಿ ದಾಟಿಲ್ಲ.

Facebook Comments