ವಿಶ್ವವನ್ನೇ ತಲ್ಲಣಗೊಳಿಸಿರುವ ಸೋಂಕಿಗೆ ಚೀನಿಯರ ಸರ್ವಪ್ರಾಣಿ ಭಕ್ಷಣೆಯೇ ಕಾರಣ…!?

ಈ ಸುದ್ದಿಯನ್ನು ಶೇರ್ ಮಾಡಿ

ಬೀಜಿಂಗ್,/ವೊಹಾನ್,ಜ.24- ವಿಶ್ವದ ಪ್ರಬಲ ಆರ್ಥಿಕ ಸಾಮಥ್ರ್ಯದ ದೇಶಗಳಲ್ಲಿ ಒಂದಾದ ಚೀನಾದಲ್ಲಿ ಕೊರೊನ ವೈರಸ್ ಸೋಂಕಿನಿಂದ ಸಾವುನೋವು ವ್ಯಾಪಕವಾಗಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಇದರ ಮೂಲ ಪತ್ತೆ ಮಾಡುವ ತ್ವರಿತ ಸಂಶೋಧನೆಗಳು ಸಹ ನಡೆಯುತ್ತಿವೆ.

ಚೀನಾದರಲ್ಲಿ ಹರಡಿರುವ ಕೊರೊನ ವೈರಾಣು ಹಾವುಗಳಿಂದ ತಗುಲಿರಬಹುದೆಂದು ಹೊಸ ಅಧ್ಯಯನವೊಂದು ಹೇಳಿದೆ. 11 ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆ ವೊಹಾನ್ ನಗರಿಯಲ್ಲಿ ಸಮುದ್ರ ಆಹಾರಗಳು ಮತ್ತು ಇತರ ಪ್ರಾಣಿಪಕ್ಷಿಗಳನ್ನು ಮಾರಾಟ ಮಾಡುವ ಬೃಹತ್ ಮಾರುಕಟ್ಟೆ.  ಇಲ್ಲಿ ಸರ್ಪಗಳು, ಬಾವಲಿಗಳು, ಇಲಿಗಳು, ಹೆಗ್ಗಣಗಳು, ದಂಶಕಗಳು, ಮೊಲಗಳು, ಮುಳ್ಳುಹಂದಿಗಳು, ಕಪ್ಪೆಗಳು ಮತ್ತು ಇತರ ಪ್ರಾಣಿ, ಪಕ್ಷಿಗಳನ್ನು ಆಹಾರಕ್ಕಾಗಿ ಮಾರಾಟ ಮಾಡಲಾಗುತ್ತದೆ.

ಈ ಪ್ರಾಣಿಗಳನ್ನು ಸುರಕ್ಷಿತವಲ್ಲದ ಸ್ಥಳದಲ್ಲಿರಿಸುವುದರಿಂದ ಮತ್ತು ಸ್ವಚ್ಛತೆಯ ಕೊರತೆಯಿಂದಾಗಿ ಮಾರಕ ಸೋಂಕುರೋಗುಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಈ ಬಾರಿ ಅದು ಸಾರ್ಸ್(ಸಿವಿಯರ್ ಆಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್) ಎಂಬ ಮಾದರಿಯ ಮಾರಕ ಕೊರೊನ ವೈರಸ್ ರೂಪದಲ್ಲಿ ಕಾಣಿಸಿಕೊಂಡಿರುವು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

Facebook Comments