ವಿಶ್ವದಾದ್ಯಂತ 11,000 ಜನರನ್ನು ಬಲಿಪಡೆದು ಕೊರೋನಾ ವೈರಸ್ ಅಟ್ಟಹಾಸ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್/ಇಂಗ್ಲೆಂಡ್/ಮಿಲಾನ್, ಮಾ.21-ಜಗತ್ತಿನಾದ್ಯಂತ ಯಮಸ್ವರೂಪಿ ಕೊರೊನಾ (ಕೋವಿಡ್-19) ವೈರಾಣುವಿನ ಅಟ್ಟಹಾಸ ಮತ್ತಷ್ಟು ತೀವ್ರಗೊಂಡಿದ್ದು, ವಿಶ್ವದಲ್ಲಿ ಈವರೆಗೆ ಸುಮಾರು 11,000 ಮಂದಿ ಈ ಹೆಮ್ಮಾರಿಗೆ ಬಲಿಯಾಗಿದ್ದಾರೆ. ಅಲ್ಲದೇ ಸೋಂಕು ಪೀಡಿತರ ಸಂಖ್ಯೆ 2.50 ಲಕ್ಷಕ್ಕೇರಿದೆ.

ಕೊರೊನಾ ಬಾಧೆಯಿಂದ ತತ್ತರಿಸಿರುವ ಇಟಲಿಯಲ್ಲಿ ಕಳೆದ 24 ತಾಸುಗಳ ಅವಧಿಯಲ್ಲಿ ಮತ್ತೆ 647 ಮಂದಿ ಬಲಿಯಾಗಿದ್ದು, ಸತ್ತವರ ಸಂಖ್ಯೆ 4,000ಕ್ಕೇರಿದೆ. ಅಲ್ಲದೇ ಸುಮಾರು 36,000 ಮಂದಿಗೆ ಸೋಂಕು ತಗುಲಿದ್ದು, ಕಳವಳಕಾರಿಯಾಗಿದೆ.

ಅಮೆರಿಕದಲ್ಲಿ ಕೊರೊನಾ ಸಾವಿನ ಸಂಖ್ಯೆ 210ಕ್ಕೇರಿದ್ದು, ದೇಶದ ಎಲ್ಲ 50 ರಾಜ್ಯಗಳಿಗೂ ವ್ಯಾಪಿಸಿದ್ದು. ಈ ಪ್ರಾಂತ್ಯಗಳಲ್ಲಿ ಸುಮಾರು 14,000 ಪ್ರಕರಣಗಳು ಪತ್ತೆಯಾಗುತ್ತಿವೆ. ಇರಾನ್ ಮತ್ತು ಸ್ಪೇನ್‍ನಲ್ಲೂ ಈ ಹೆಮ್ಮಾರಿಯ ಅಟ್ಟಹಾಸಕ್ಕೆ ಮತ್ತೆ ಸಾವು ನೋವಿನ ವರದಿಗಳಿವೆ.  ಪಾಕಿಸ್ತಾನದಲ್ಲಿ ಕೋವಿಡ್-19 ಸೋಂಕಿಗೆ ಮೂವರು ಮೃತಪಟ್ಟು, 350ಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಾರಣಿಸಿಕೊಂಡಿದೆ.

ಜಗತ್ತಿನ 160ಕ್ಕೂ ಹೆಚ್ಚು ದೇಶಗಳಲ್ಲಿ ಈ ಹೊಸ ವೈರಾಣು ಸೋಂಕಿನಿಂದ ಲಕ್ಷಾಂತರ ಮಂದಿ ಬಾಧಿತರಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ಆತಂಕ ವ್ಯಕ್ತಪಡಿಸಿದೆ.

Facebook Comments