ಚೀನಾ ರಾಯಭಾರಿ ಕಚೇರಿಯಲ್ಲಿ ಗಣರಾಜೋತ್ಸವ ರದ್ದು

ಈ ಸುದ್ದಿಯನ್ನು ಶೇರ್ ಮಾಡಿ

ಬೀಜಿಂಗ್, ಜ.24- ಚೀನಾವನ್ನು ಭಾರೀ ಆತಂಕಕ್ಕೀಡು ಮಾಡಿರುವ ಮಾರಕ ಕೊರೊನಾ ವೈರಾಣು ಸೋಂಕಿನಿಂದಾಗಿ ರಾಜಧಾನಿ ಬೀಜಿಂಗ್‍ನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಜ.26ರ ಗಣರಾಜ್ಯೋತ್ಸವ ಆಚರಣೆಯನ್ನು ರದ್ದುಗೊಳಿಸಲಾಗಿದೆ. ಭಾನುವಾರ ಬೀಜಿಂಗ್‍ನ ಇಂಡಿಯನ್ ಎಂಬೆಸ್ಸಿಯಲ್ಲಿ ನಡೆಯಬೇಕಿದ್ದ ಗಣತಂತ್ರ ದಿನ ಆಚರಣೆಯನ್ನು ವೈರಸ್ ಸೋಂಕು ವ್ಯಾಪಕವಾಗಿ ಹಬ್ಬಿರುವ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ ಎಂದು ಭಾರತೀಯ ರಾಜಭಾರಿ ಕಚೇರಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಚೀನಾ ಸರ್ಕಾರ ಮತ್ತು ಭಾರತೀಯ ರಾಯಭಾರಿ ಕಚೇರಿ ಈ ಬಗ್ಗೆ ಚರ್ಚಿಸಿ ರಿಪಬ್ಲಿಕ್ ಡೇ ಸಮಾರಂಭವನ್ನು ರದ್ದುಗೊಳಿಸಲು ನಿರ್ಧರಿಸಿದೆ.  ಈಗಿನ ವರದಿ ಪ್ರಕಾರ ಚೀನಾದ ವುಹಾನ್ ನಗರ ಸೇರಿದಂತೆ ವಿವಿಧೆಡೆ ಈ ಕೊರೊನಾ ವೈರಾಣು ಸೋಂಕಿಗೆ 28 ಮಂದಿ ಬಲಿಯಾಗಿದ್ದು, 1,000ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಕೆಲವರ ಸ್ಥಿತಿ ಶೋಚನೀಯವಾಗಿದೆ.

ಈ ಮಧ್ಯೆ ವುಹಾನ್ ನಗರದಲ್ಲಿ 25ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದು ಅವರ ನೆರವಿಗಾಗಿ ಇಂಡಿಯನ್ ಎಂಬೆಸಿ ಸಹಾಯವಾಣಿಯನ್ನು ಆರಂಭಿಸಿದೆ. ಭಾರತೀಯರ ಕುಟುಂಬದೊಂದಿಗೆ ಸಂಪರ್ಕ ಸಾಧಿಸಿ ಅವರ ಸ್ಥಿತಿ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

Facebook Comments