ನವೆಂಬರ್ ನಲ್ಲಿ ಕೊರೋನಾ 3ನೇ ಅಲೆ ಅಪ್ಪಳಿಸುವ ಸಾಧ್ಯತೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಮೇ.7-ಎರಡನೆ ಅಲೆಗೆ ತರಗೆಲೆಯಾಗಿರುವ ಭಾರತದಲ್ಲಿ ಮೂರನೆ ಅಲೆ ದಾಂಗುಡಿ ಇಡುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈಗಾಗಲೇ ಕೆಲ ರಾಷ್ಟ್ರಗಳು ನಾಲ್ಕನೆ ಆಲೆಗೆ ತುತ್ತಾಗಿ ಚೇತರಿಸಿಕೊಳ್ಳುತ್ತಿವೆ. ಆದರೆ, ಭಾರತ ಮಾತ್ರ ಇನ್ನು ಎರಡನೆ ಅಲೆಯಿಂದ ಚೇತರಿಸಿಕೊಳ್ಳಲು ತಡಕಾಡುತ್ತಿರುವ ಸಂದರ್ಭದಲ್ಲೇ ಮೂರನೆ ಅಲೆ ಆಘಾತ ಎದುರಿಸಲು ಸನ್ನದ್ದವಾಗಬೇಕಿದೆ.

ಮುಂದಿನ ನವಂಬರ್ ಅಂತ್ಯ ಇಲ್ಲವೆ ಡಿಸಂಬರ್ ಆರಂಭದಲ್ಲಿ ಮೂರನೆ ಅಲೆ ಅಪ್ಪಳಿಸುವ ಸಾಧ್ಯತೆಗಳಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮೂರನೆ ಅಲೆ ಯುವ ಸಮುದಾಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಅಂತಹ ಅಪಾಯದಿಂದ ಪಾರಾಗಬೇಕಾದರೆ ನವಂಬರ್ ತಿಂಗಳೊಳಗೆ ಎಲ್ಲರಿಗೂ ಲಸಿಕೆ ಹಾಕುವುದೊಂದೆ ಇರುವ ಏಕೈಕ ಮಾರ್ಗ ಎಂದು ಡಾ.ಗಿರಿಧರ್ ಬಾಬು ಅಭಿಪ್ರಾಯಪಟ್ಟಿದ್ದಾರೆ.

ಎರಡನೆ ಅಲೆಯಲ್ಲಿ ಯಾರಿಗೆಲ್ಲಾ ರೋಗ ಲಕ್ಷಣ ಕಾಣಿಸಿಕೊಂಡಿಲ್ಲವೋ ಅಂತವರಿಗೆ ಮೂರನೆ ಅಲೆ ಮಾರಕವಾಗುವ ಸಾಧ್ಯತೆಗಳಿವೆಯಂತೆ. ಎರಡನೆ ಅಲೆ ಸಂದಭದಲ್ಲಿ ಯಾರಿಗೆ ರೋಗ ಲಕ್ಷಣ ಕಂಡು ಬರುವುದಿಲ್ಲವೋ ಅವರ ರೋಗನಿರೋಧಕ ಶಕ್ತಿ ಆರು ತಿಂಗಳ ಕಾಲ ಇರುತ್ತದೆ. ಆರು ತಿಂಗಳ ನಂತರ ಅವರ ರೋಗನಿರೋಧಕ ಶಕ್ತಿ ಕುಂದಲಿದೆ.

ಆಗ ಅವರಿಗೆ ಮೂರನೆ ಅಲೆ ಘಾತಕವಾಗುವ ಸಾಧ್ಯತೆಗಳಿವೆ. ಹೀಗಾಗಿ ಮೂರನೆ ಅಲೆ 18 ವರ್ಷದೊಳಗಿನ ವಯಸ್ಸಿನವರಿಗೆ ಮಾರಕವಾಗಿ ಪರಿಣಮಿಸುವ ಸಾಧ್ಯತೆ ಇರುವುದರಿಂದ ನವಂಬರ್ ತಿಂಗಳ ಒಳಗೆ ಮಕ್ಕಳು ಸೇರಿದಂತೆ ಪ್ರತಿಯೊಬ್ಬರಿಗೂ ಲಸಿಕೆ ಲಭ್ಯವಾಗುವಂತೆ ನೋಡಿಕೊಳ್ಳಬೇಕಿದೆ.

Facebook Comments

Sri Raghav

Admin