ವಿಶ್ವದಲ್ಲಿ 71.56 ಲಕ್ಷ ಆಕ್ಟಿವ್ ಕೊರೋನಾ ಕೇಸ್, 2.05 ಕೋಟಿ ಮಂದಿ ಗುಣಮುಖ

ಈ ಸುದ್ದಿಯನ್ನು ಶೇರ್ ಮಾಡಿ

ವಾಷ್ಟಿಂಗ್ಟನ್, ಸೆ.12- ಜಗತ್ತಿನ ಬಹುತೇಕ ದೇಶಗಳ ಮೇಲೆ ಡೆಡ್ಲಿ ಕೋವಿಡ್-19 ವೈರಸ್ ಪ್ರಹಾರ ಮುಂದುವರಿದಿದೆ. ಲೋಕಕಂಟಕವಾಗಿ ಪರಿಣಮಿಸಿರುವ ಪೆಡಂಭೂತದ ಹಾವಳಿಯಿಂದ ಪ್ರತಿನಿತ್ಯ ಸೋಂಕು ಮತ್ತು ಸಾವು ಪ್ರಕರಣಗಳು ವರದಿಯಾಗುತ್ತಲೇ ಇವೆ. ಅಲ್ಲದೇ ಸಕ್ರಿಯ ಪ್ರಕರಣಗಳೊಂದಿಗ ಚೇತರಿಕೆ ಪ್ರಮಾಣದಲ್ಲೂ ಹೆಚ್ಚಳ ಕಂಡುಬಂದಿದೆ.

ಜಗತ್ತಿನಾದ್ಯಂತ ರೋಗಪೀಡಿತರ ಸಂಖ್ಯೆ 2.86 ಕೋಟಿ ಮತ್ತು ಒಟ್ಟು ಸಾವಿನ ಸಂಖ್ಯೆ 9.19 ಲಕ್ಷ ದಾಟಿದೆ. ಇದರ ನಡುವೆಯೂ ವಿಶ್ವದಲ್ಲಿ ಈವರೆಗೆ 2.05 ಕೋಟಿಗೂ ಅಧಿಕ ರೋಗಿಗಳು ಗುಣಮುಖರಾಗಿರುವುದು ತುಸು ಸಮಾಧಾನಕರ ಸಂಗತಿಯಾಗಿದೆ. ಆದರೆ ಇನ್ನೂ 71.56 ಲಕ್ಷ ಸಕ್ರಿಯ ಪ್ರಕರಣಗಳು ವರದಿಯಾಗಿರುವುದು ಆತಂಕದ ಸಂಗತಿಯಾಗಿದೆ.

ವಿಶ್ವವ್ಯಾಪಿ ನಿನ್ನೆ ಮಧ್ಯರಾತ್ರಿವರೆಗೆ 9,19,807 ಮಂದಿ ಸಾವಿಗೀಡಾಗಿದ್ದು, 2,86,64,416 ಸೋಂಕು ಪ್ರಕರಣಗಳು ವರದಿಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 71,56,629 ದಾಟಿದೆ. ಅಲ್ಲದೆ, ಇನ್ನೂ 60,900ಕ್ಕೂ ಹೆಚ್ಚು ರೋಗಿಗಳ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುವ ಆತಂಕವಿದೆ.

ನಾಳೆ ವೇಳೆಗೆ ಸಾವಿನ ಸಂಖ್ಯೆ 10 ಲಕ್ಷ ಮತ್ತು ಸಾಂಕ್ರಾಮಿಕ ರೋಗಿಗಳ ಪ್ರಮಾಣ 2.90 ಕೋಟಿ ದಾಟುವ ಆತಂಕವಿದೆ. ವ್ಯಾಪಕ ಸಾವು-ನೋವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಮಧ್ಯೆ ರೋಗಿಗಳ ಚೇತರಿಕೆ/ಗುಣಮುಖ ಪ್ರಮಾಣದಲ್ಲೂ ವೃದ್ದಿ ಕಂಡುಬಂದಿದೆ. ವಿಶ್ವದಲ್ಲಿ ಈವರೆಗೆ 2,05,87,985 ಮಂದಿ ರೋಗಿಗಳು ಚೇತರಿಸಿಕೊಂಡಿದ್ದಾರೆ ಮತ್ತು ಗುಣಮುಖರಾಗಿದ್ದಾರೆ.

ಅಮೆರಿಕ, ಭಾರತ, ಬ್ರೆಜಿಲ್, ರಷ್ಯಾ, ಮತ್ತು ಪೆರು ಕೊರೊನಾ ಕೇಸ್‍ಗಳಲ್ಲಿ ವಿಶ್ವದ ಟಾಪ್ ಫೈವ್ ದೇಶಗಳಾಗಿವೆ ಇದರ ನಡುವೆಯೂ ಕೆಲವು ರಾಷ್ಟ್ರಗಳಲ್ಲಿ ಕೊರೊನಾ ಹೆಮ್ಮಾರಿಯ ಪ್ರಕೋಪ ಕ್ಷೀಣಿಸುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ.

Facebook Comments