ವಿಶ್ವಾದ್ಯಂತ 4 ಕೋಟಿ ಜನರಿಗೆ ಕೊರೊನಾ ಸೋಂಕು, 11.15 ಲಕ್ಷ ಮರಣ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷ್ಟಿಂಗ್ಟನ್, ಅ.18-ಕೆಲವು ದೇಶಗಳಲ್ಲಿ ಕೊರೊನಾ ವೈರಸ್ ದಾಳಿಯ ಎರಡನೇ ಅಲೆಯ ಆತಂಕದ ನಡುವೆಯೇ ವಿಶ್ವಾದ್ಯಂತ ಡೆಡ್ಲಿ ಕೋವಿಡ್-19 ವೈರಸ್ ಪ್ರಹಾರ ಮುಂದುವರಿದಿದ್ದು, ಸೋಂಕಿತರ ಪ್ರಮಾಣ ನಾಲ್ಕು ಕೋಟಿ ಹಾಗೂ ಮೃತರ ಸಂಖ್ಯೆ11.15ಲಕ್ಷದಾಟಿರುವುದು ಆತಂಕಕಾರಿ ಸಂಗತಿಯಾಗಿದೆ.

ಲೋಕ ಕಂಟಕವಾಗಿ ಪರಿಣಮಿಸಿರುವ ಪೆಡಂಭೂತದ ಹಾವಳಿಯಿಂದ ಪ್ರತಿನಿತ್ಯ ಸೋಂಕು ಮತ್ತು ಸಾವು ಪ್ರಕರಣಗಳು ವರದಿಯಾಗುತ್ತಲೇ ಇವೆ. ಅನೇಕ ರಾಷ್ಟ್ರಗಳಲ್ಲಿ ಈ ಪಿಡುಗಿನ ಏರಿಳಿತದ ಆಟ ಮುಂದುವರಿದಿದ್ದು, ಈ ಬಾಧೆಯಿಂದ ಹೈರಾಣಾಗಿರುವ ವಿಶ್ವದಜನತೆ ಮಹಾಮಾರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಇವುಗಳ ನಡುವೆಯೂ ವಿಶ್ವದಲ್ಲಿ ಈವರೆಗೆ2.98 ಕೋಟಿಗೂ ಅಧಿಕ ರೋಗಿಗಳು ಗುಣಮುಖರಾಗಿರುವುದು ತುಸು ಸಮಾಧಾನಕರ ಸಂಗತಿಯಾಗಿದೆ. ಆದರೆ ಇನ್ನೂ 89.54ಲಕ್ಷ ಸಕ್ರಿಯ ಪ್ರಕರಣಗಳು ವರದಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.  ವಿಶ್ವವ್ಯಾಪಿ ನಿನ್ನೆ ಮಧ್ಯರಾತ್ರಿವರೆಗೆ11,14,636ಮಂದಿ ಸಾವಿಗೀಡಾಗಿದ್ದು, 3,99,59,651 ಸೋಂಕು ಪ್ರಕರಣಗಳು ವರದಿಯಾಗಿತ್ತು. ಇಂದು ಬೆಳಗ್ಗೆ ಲಭಿಸಿದ ಮಾಹಿತಿ ಪ್ರಕಾರ, ಸೋಂಕಿತರ ಪ್ರಮಾಣ ನಾಲ್ಕು ಕೋಟಿ ಹಾಗೂ ಮೃತರ ಸಂಖ್ಯೆ 11.15 ಲಕ್ಷದಾಟಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ89,54,637ದಾಟಿದೆ.ಅಲ್ಲದೇಇನ್ನೂ71,926ಕ್ಕೂ ಹೆಚ್ಚುರೋಗಿಗಳ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುವ ಆತಂಕವಿದೆ.  ವ್ಯಾಪಕ ಸಾವು-ನೋವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಮಧ್ಯೆ ರೋಗಿಗಳ ಚೇತರಿಕೆ/ಗುಣಮುಖ ಪ್ರಮಾಣದಲ್ಲೂ ವೃದ್ದಿ ಕಂಡುಬಂದಿದೆ.

ವಿಶ್ವದಲ್ಲಿ ಈವರೆಗೆ 2,98,90,384 ಮಂದಿ ರೋಗಿಗಳು ಚೇತರಿಸಿಕೊಂಡಿದ್ದಾರೆ ಅಥವಾ ಗುಣಮುಖರಾಗಿದ್ದಾರೆ. ಅಮೆರಿಕ, ಭಾರತ, ಬ್ರೆಜಿಲ್, ರಷ್ಯಾ ಹಾಗೂ ಸ್ಪೇನ್ ಕೊರೊನಾ ಕೇಸ್‍ಗಳಲ್ಲಿ ವಿಶ್ವದಟಾಪ್ ಫೈವ್ ದೇಶಗಳಾಗಿವೆ.

ಇದರ ನಡುವೆಯೂ ಕೆಲವು ರಾಷ್ಟ್ರಗಳಲ್ಲಿ ಕೊರೊನಾ ಹೆಮ್ಮಾರಿಯ ಪ್ರಕೋಪಕ್ಷೀಣಿಸುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ ಆದg Éಪೆರು, ಅರ್ಜೆಂಟಿನಾ, ಮೆಕ್ಸಿಕೋ, ಫ್ರಾನ್ಸ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಸೇರಿದಂತೆಕೆಲವು ದೇಶಗಳಲ್ಲಿ ಕೊರೊನಾದ ಎರಡನೇ ತೀವ್ರವಾಗಿದ್ದು, ಸೋಂಕು ಸಾವು ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದೆ.
ಅಮೆರಿಕದಲ್ಲಿ ಕೊಂಚ ನಿಯಂತ್ರಣದಲ್ಲಿದ್ದ ಕೋವಿಡ್-19 ಮತ್ತೆ ಏರುಗತಿಯತ್ತ ಸಾಗಿದೆ. ಹೊಸ ಮತ್ತು ಸಕ್ರಿಯ ಪ್ರಕರಣಗಳಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ.

Facebook Comments