ಕೊರೊನಾ ಹೆಮ್ಮಾರಿ 2ನೇ ದಾಳಿ : ವಿಶ್ವದಾದ್ಯಂತ 4.5 ಕೋಟಿ ಮಂದಿಗೆ ಸೋಂಕು, 11.87 ಲಕ್ಷ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ವಾಷ್ಟಿಂಗ್ಟನ್, ಅ.30-ಕೆಲವು ದೇಶಗಳಲ್ಲಿ ಕೊರೊನಾ ವೈರಸ್ ದಾಳಿಯ ಎರಡನೇ ಅಲೆಯ ಆತಂಕ ಮತ್ತು ಕಣ ನಿರ್ಬಂಧಗಳ ನಡುವೆಯೇ ವಿಶ್ವಾದ್ಯಂತ ಡೆಡ್ಲಿ ಕೋವಿಡ್-19 ವೈರಸ್ ಪ್ರಹಾರ ಮುಂದುವರಿದಿದ್ದು, ಸೋಂಕಿತರ ಪ್ರಮಾಣ 4.53 ಕೋಟಿ ಹಾಗೂ ಮೃತರ ಸಂಖ್ಯೆ 11.87 ಲಕ್ಷ ದಾಟಿರುವುದು ಆತಂಕಕಾರಿ ಸಂಗತಿಯಾಗಿದೆ.

ಲೋಕಕಂಟಕವಾಗಿ ಪರಿಣಮಿಸಿರುವ ಪೆಡಂಭೂತದ ಹಾವಳಿಯಿಂದ ಪ್ರತಿನಿತ್ಯ ಸೋಂಕು ಮತ್ತು ಸಾವು ಪ್ರಕರಣಗಳು ವರದಿಯಾಗುತ್ತಲೇ ಇವೆ. ಅನೇಕ ರಾಷ್ಟ್ರಗಳಲ್ಲಿ ಈ ಪಿಡುಗಿನ ಏರಿಳಿತದ ಆಟ ಮುಂದುವರಿದಿದ್ದು, ಈ ಬಾಧೆಯಿಂದ ಹೈರಾಣಾಗಿರುವ ವಿಶ್ವದ ಜನತೆ ಮಹಾಮಾರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಇವುಗಳ ನಡುವೆಯೂ ವಿಶ್ವದಲ್ಲಿ ಈವರೆಗೆ 3.30 ಕೋಟಿಗೂ ಅಧಿಕ ರೋಗಿಗಳು ಗುಣಮುಖರಾಗಿರುವುದು ತುಸು ಸಮಾಧಾನಕರ ಸಂಗತಿ. ಆದರೆ ಇನ್ನೂ 1.02 ಕೋಟಿಗೂ ಅಧಿಕ ಸಕ್ರಿಯ ಪ್ರಕರಣಗಳು ವರದಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ವಿಶ್ವವ್ಯಾಪಿ ನಿನ್ನೆ ಮಧ್ಯರಾತ್ರಿವರೆಗೆ 11,59,200 ಮಂದಿ ಸಾವಿಗೀಡಾಗಿದ್ದು, 4,33,55,159 ಸೋಂಕು ಪ್ರಕರಣಗಳು ವರದಿಯಾಗಿತ್ತು. ಇಂದು ಬೆಳಗ್ಗೆ ಲಭಿಸಿದ ಮಾಹಿತಿ ಪ್ರಕಾರ, ಸೋಂಕಿತರ ಪ್ರಮಾಣ 4.34 ಹಾಗೂ ಮೃತರ ಸಂಖ್ಯೆ 11.60 ಲಕ್ಷ ದಾಟಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 1,02,88,098 ದಾಟಿದೆ. ಅಲ್ಲದೇ ಇನ್ನೂ 77,790 ಹೆಚ್ಚು ರೋಗಿಗಳ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುವ ಆತಂಕವಿದೆ. ವ್ಯಾಪಕ ಸಾವು-ನೋವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಮಧ್ಯೆ ರೋಗಿಗಳ ಚೇತರಿಕೆ/ಗುಣಮುಖ ಪ್ರಮಾಣದಲ್ಲೂ ವೃದ್ದಿ ಕಂಡುಬಂದಿದೆ.
ವಿಶ್ವದಲ್ಲಿ ಈವರೆಗೆ 3,19,07,861 ಮಂದಿ ರೋಗಿಗಳು ಚೇತರಿಸಿಕೊಂಡಿದ್ದಾರೆ ಅಥವಾ ಗುಣಮುಖರಾಗಿದ್ದಾರೆ.

ಅಮೆರಿಕ, ಭಾರತ, ಬ್ರೆಜಿಲ್, ರಷ್ಯಾ, ಫ್ರಾನ್ಸ್, ಸ್ಪೇನ್, ಅರ್ಜೆಂಟಿನಾ, ಕೊಲಂಬಿಯಾ, ಮೆಕ್ಸಿಕೋ ಮತ್ತು ಪೆರು ಕೊರೊನಾ ಕೇಸ್‍ಗಳಲ್ಲಿ ವಿಶ್ವದ ಟಾಪ್ 10 ದೇಶಗಳಾಗಿವೆ. ಇದರ ನಡುವೆಯೂ ಕೆಲವು ರಾಷ್ಟ್ರಗಳಲ್ಲಿ ಕೊರೊನಾ ಹೆಮ್ಮಾರಿಯ ಪ್ರಕೋಪ ಕ್ಷೀಣಿಸುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಸೇರಿದಂತೆ ಕೆಲವು ದೇಶಗಳಲ್ಲಿ ಕೊರೊನಾದ ಎರಡನೇ ತೀವ್ರವಾಗಿದ್ದು, ಸೋಂಕು ಸಾವು ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದೆ.ಅಮೆರಿಕದಲ್ಲಿ ಕೊಂಚ ನಿಯಂತ್ರಣದಲ್ಲಿದ್ದ ಕೋವಿಡ್-19 ಮತ್ತ್ತೆ ಏರುಗತಿಯತ್ತ ಸಾಗಿದೆ. ಹೊಸ ಮತ್ತು ಸಕ್ರಿಯ ಪ್ರಕರನಗಳಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ.

ಅಮೆರಿಕ : 63.89 ಲಕ್ಷ ಮಂದಿಗೆ ಕೋವಿಡ್ ಪಾಸಿಟಿವ್ ರಿಯೋ-ಡಿ-ಜನೈರೋ, ಸೆ.5-ಕಿಲ್ಲರ್ ಕೊರೊನಾ ವೈರಸ್ ದಾಳಿಯಿಂದ ವಿಶ್ವದಲ್ಲಿ ತೀವ್ರ ಬಾಧೆಗೆ ಒಳಗಾಗಿರುವ ಅಮೆರಿಕ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಮೃತರ ಸಂಖ್ಯೆ 1.92 ಲಕ್ಷ ದಾಟಿದೆ ಹಾಗೂ ರೋಗ ಪೀಡಿತರ ಪ್ರಮಾಣ 63.89 ಲಕ್ಷ ಮೀರಿದೆ.. ಅಲ್ಲದೇ ವಿಶ್ವದ ಸೂಪರ್ ಪವರ್ ರಾಷ್ಟ್ರದಲ್ಲಿ ಈಗಲೂ 25.61 ಲಕ್ಷ ಸಕ್ರಿಯ ಪ್ರಕರಣಗಳು ದಾಖಲಾಗಿರುವುದು ಆತಂಕದ ಸಂಗತಿ.

ನಿನ್ನೆ ಮಧ್ಯರಾತ್ರಿವರೆಗೆ ಲಭಿಸಿದ ಮಾಹಿತಿ ಪ್ರಕಾರ ಅಮೆರಿಕದಲ್ಲಿ ಈವರೆಗೆ 1,92,111 ಮಂದಿ ಮೃತಪಟ್ಟಿದ್ದು, 63,89,057 ಜನರು ಸಾಂಕ್ರಾಮಿಕ ರೋಗ ಪೀಡಿತರಾಗಿದ್ದಾರೆ. ಇವರಲ್ಲಿ ಸುಮಾರು 15,000ಕ್ಕೂ ಹೆಚ್ಚು ರೋಗಿಗಳ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವೂ ಇದೆ. ಅಮೆರಿಕದಲ್ಲಿ ಈವರೆಗೆ ಸುಮಾರು 36,35,854 ಕೊರೊನಾ ಸೋಂಕು ರೋಗಿಗಳು ಚೇತರಿಸಿಕೊಂಡಿದ್ದಾರೆ/ ಗುಣಮುಖರಾಗಿದ್ದಾರೆ.

ಅಮೆರಿಕದಲ್ಲಿ ಈಗಲೂ 25,61,093 ಸಕ್ರಿಯ ಪ್ರಕರಣಗಳು ದಾಖಲಾಗಿರುವುದು ಆತಂಕಕಾರಿಯಾಗಿದೆ. ಸಾವು ಮತ್ತು ಸೋಂಕಿನಲ್ಲಿ ಬ್ರೆಜಿಲ್ ಎರಡನೇ ಸ್ಥಾನ ಸಾಂಬಾ ನಾಡಿಯಲ್ಲಿ ಮೃತರ ಸಂಖ್ಯೆ 1.25 ಲಕ್ಷ ದಾಟಿದ್ದು, 40.91 ಲಕ್ಷಕ್ಕೂ ಅದಿಕ ಮಂದಿ ಸಾಂಕ್ರಾಮಿಕ ರೋಗ ಪೀಡಿತರಾಗಿದ್ದಾರೆ. ಅಧಿಕೃತ ಮಾಹಿತಿ ಪ್ರಕಾರ ಬ್ರೆಜಿಲ್‍ನಲ್ಲಿ ಈವರೆಗೆ 1,25,584 ಮಂದಿಯನ್ನು ಹೆಮ್ಮಾರಿ ಬಲಿ ತೆಗೆದುಕೊಂಡಿದೆ. ಅಲ್ಲಿ ಈಗಲೂ 40,91,808 ಮಂದಿ ಮಾರಕ ಸೋಂಕಿನಿಂದ ನರಳುತ್ತಿದ್ದಾರೆ. ಅಮೆರಿಕ ಮತ್ತು ಬ್ರೆಜಿಲ್ ನಂತರದ ಸ್ಥಾನಗಳಲ್ಲಿ ಭಾರತ, ರಷ್ಯಾ, ಮತ್ತು ಪೆರು ದೇಶಗಳಿವೆ.

ಭಾರತ ದೇಶದ ಅರ್ಧದಷ್ಟು ಜಿಲ್ಲೆಗಳಲ್ಲಿ 500+ ಕೋವಿಡ್ ಕೇಸ್
ಭಾರತದಲ್ಲಿ ಕೊರೊನಾ ವೈರಸ್ ಗಂಡಾಂತರದ ನಡುವೆ ರೋಗಿಗಳ ಚೇತರಿಕೆ ಪ್ರಮಾಣದಲ್ಲಿಯೂ ನಿರಂತರ ಗಮನಾರ್ಹ ವೃದ್ಧಿ ಕಂಡುಬಂದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ನಿನ್ನೆ ಮಧ್ಯರಾತ್ರಿವರೆಗೆ ಭಾರತದಲ್ಲಿ 4.67 ಲಕ್ಷಕ್ಕೂ ಅಧಿಕ ಆಕ್ಟೀವ್ ಕೇಸ್‍ಗಳು ಹಾಗೂ 8.85 ಲಕ್ಷಕ್ಕೂ ಹೆಚ್ಚು ರಿಕವರಿ ರೇಟ್ (ಶೇ.63.92) ವರದಿಯಾಗಿದೆ.

ಕೊರೊನಾ ವೈರಸ್ ಸೋಂಕಿನ ರೋಗಿಗಳ ಚೇತರಿಕೆ ಪ್ರಕರಣಗಳ ಸಂಖ್ಯೆ 8.86 ಲಕ್ಷ ಸನಿಹದಲ್ಲಿರುವುದು ಸಮಾಧಾನದ ಸಂಗತಿ. ನಿನ್ನೆ ಮಧ್ಯರಾತ್ರಿವರೆಗೆ 8,85,576 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 4,67,888 ಮಂದಿಯಲ್ಲಿ ಸಕ್ರಿಯ ಸೋಂಕು ಕಾಣಿಸಿಕೊಂಡಿದೆ.

ದೇಶದಲ್ಲಿ ವೈರಾಣು ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಶೇ.63.92ರಷ್ಟು ವೃದ್ದಿ ಕಂಡುಬಂದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.ಈ ಮಧ್ಯೆ, ದೇಶದಲ್ಲಿ ಸಾಂಕ್ರಾಮಿಕ ರೋಗ ಪತ್ತೆಗಾಗಿ ಸ್ಯಾಂಪಲ್ ಪರೀಕ್ಷಾ ಸಾಮಥ್ರ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈವರೆಗೆ ಸುಮಾರು 1.63 ಕೋಟಿ ಜನರ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಕೋವಿಡ್ ವೈರಸ್ ನಿಗ್ರಹಕ್ಕೆ ಹೋರಾಟ ಮುಂದುವರಿದಿದೆ.

 

Facebook Comments