ಭಾರತದಲ್ಲಿ ಮತ್ತೆ ಏರುಗತಿಯ ಹಾದಿ ಹಿಡಿದ ಹೆಮ್ಮಾರಿ ಕೊರೋನಾ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ,ನ.5-ದೇಶದಲ್ಲಿ ಡೆಡ್ಲಿ ಕೊರೊನಾ ವೈರಸ್ ಹೆಮ್ಮಾರಿಯ ಏರುಗತಿ ಅಬ್ಬರದಿಂದಾಗಿ ಜನರು ಮತ್ತೆ ಹೆದರಿಕಂಗಲಾಗುವಂತಾಗಿದೆ. ಕಳೆದ ಎರಡು ದಿನಗಳ ಹಿಂದೆಭಾರೀ ಸಂಖ್ಯೆಯಲ್ಲಿ ಇಳಿಕೆಯಾಗಿದ್ದ ದಿನಿನಿತ್ಯದ ಸೋಂಕು ಮತ್ತು ಸಾವು ಪ್ರಕರಣಗಳಲ್ಲಿ ಮತ್ತೆ ಏರಿಕೆಯಾಗಿದೆ. ಅಲ್ಲದೇ ದಿನಂಪ್ರತಿ ಪಾಸಿಟಿವ್ ಕೇಸ್ ಮತ್ತೆ 50,000 ದಾಟಿರುವುದು ಆತಂಕಕ್ಕೆ ಕಾರಣವಾಗಿದೆ.

ಚಳಿಗಾಲ ಮತ್ತು ಹಬ್ಬದಋತುವಿನಲ್ಲಿಡೆಡ್ಲಿಕೊರೊನಾ ವೈರಸ್ ಏರಿಳಿತದ ಆಟ ಮುಂದುವರಿದಿದೆ. ಆದಾಗ್ಯೂ ಸತತಏಳನೇ ದಿನ ಸಕ್ರಿಯ ಸೋಂಕು ಪ್ರಕರಣಗಳು 6 ಲಕ್ಷಕ್ಕಿಂತ ಕಡಿಮೆಯಾಗಿದ್ದು, 77.11ಲಕ್ಷ ರೋಗಿಗಳು ಕೊರೊನಾ ಸಾವಿನ ದವಡೆಯಿಂದ ಪಾರಾಗಿದ್ದಾರೆ.  ದೇಶದಲ್ಲಿಒಟ್ಟು ಸೋಂಕು ಪ್ರಕರಣಗಳು 83.64 ಲಕ್ಷದಾಟಿದ್ದು, ಸಾವಿನ ಸಂಖ್ಯೆ 1.25 ಲಕ್ಷ ಸನಿಹದಲ್ಲಿದೆ.

ಇಂದು ಬೆಳಗ್ಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 50,210 ಪಾಸಿಟಿವ್ ಕೇಸ್‍ಗಳು ವರದಿಯಾಗಿವೆ. ಮೊನ್ನೆ ಇದೇ ಅವಧಿಯಲ್ಲಿ46,253 ಸೋಂಕು ಪ್ರಕರಣಗಳು ಕಂಡುಬಂದಿತ್ತು.ಸತತ18ನೇ ದಿನ 60,000ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಪಾಸಿಟಿವ್ ಕೇಸ್‍ಗಳು ವರದಿಯಾಗಿದೆ. ಅಲ್ಲದೇ ಸತತ 20ನೇ ದಿನವೂ ಸಕ್ರಿಯ ಸೋಂಕು ಪ್ರಕರಣಗಳು 8 ಲಕ್ಷಕ್ಕಿಂತ ಕಡಿಮೆ ಮಟ್ಟದಲ್ಲಿ ಇಳಿಮುಖದತ್ತ ಸಾಗಿದೆ.

ಈ ತಿಂಗಳಲ್ಲಿ ಸತತ ನಾಲ್ಕು ದಿನಗಳಿಂದ ಹೊಸ ಸೋಂಕು ಪ್ರಕರಣಗಳು 50,000ಕ್ಕೂ ಕೆಳ ಮಟ್ಟದಲ್ಲೇ ಮುಂದುವರಿದಿತ್ತು. ಆದರೆ ನಿನ್ನೆ ಮತ್ತೆ 50,000 ದಾಟಿರುವುದುಚಿಂತಿಗೀಡು ಮಾಡುವ ಸಂಗತಿಯಾಗಿದೆ.  ದಿನನಿತ್ಯದ ಸಾವು ಪ್ರಕರಣಗಳಲ್ಲೂ ಏರಿಕೆ ಕಂಡುಬಂದಿದ್ದು, 24 ತಾಸುಗಳ ಅವಧಿಯಲ್ಲಿ 704ಮಂದಿ ಸಾವಿಗೀಡಾಗಿದ್ದಾರೆ. ಮೊನ್ನೆ514ರೋಗಿಗಳು ಬಲಿಯಾಗಿದ್ದರು.

ಇವುಗಳ ನಡುವೆಯೂ ದೇಶದಲ್ಲಿ ಸೋಂಕಿತರ ಪ್ರಮಾಣ83.64ಲಕ್ಷದಾಟುತ್ತಿರುವುದು ಜನರಲ್ಲಿ ಆತಂಕ ಮುಂದುವರಿಯುವಂತೆ ಮಾಡಿದೆ.  ಈವರೆಗೆ ಗುಣಮುಖರಾದ ರೋಗಿಗಳ ಸಂಖ್ಯೆ77.11ಲಕ್ಷ ದಾಟಿದೆ. ಚೇತರಿಕೆ ಪ್ರಮಾಣ ಶೇ.92.20ರಷ್ಟು ಏರಿಕೆ ಮತ್ತು ಸಾವಿನ ಪ್ರಮಾಣ ಶೇ.1.49ರಷ್ಟುತಗ್ಗಿದ್ದು, ಜನರಲ್ಲಿ ನಿರಾಳತೆ ಮೂಡಿದಿದೆ.

ದೇಶದಲ್ಲಿ ಮೃತರ ಸಂಖ್ಯೆ1,24,315ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ನಾಳೆ ವೇಳೆಗೆ 1.25 ಲಕ್ಷದಾಟುವ ಸಾಧ್ಯತೆ ಇದೆ.  ಭಾರತದಲ್ಲಿ ಒಟ್ಟು ರೋಗಿಗಳ ಸಂಖ್ಯೆ83,64,686ರಷ್ಟಿದ್ದು, ನಾಳೆ ವೇಳೆಗೆ 84 ಲಕ್ಷದಾಟುವ ಸಾಧ್ಯತೆ ಇದೆ.  ಆಗಸ್ಟ್ 7ರಂದು 20 ಲಕ್ಷಇದ್ದ ಪಾಸಿಟಿವ್ ಪ್ರಕರಣಗಳು ಆ.23ಕ್ಕೆ 30 ಲಕ್ಷಕ್ಕೇರಿತ್ತು. ನಂತರ ಸೆಪ್ಟೆಂಬರ್ 5ರಂದು 40 ಲಕ್ಷದಾಟಿತ್ತು. ಕೇವಲ 11 ದಿನಗಳಲ್ಲಿ ಅಂದರೆ ಸೆ.16ರಂದು 50 ಲಕ್ಷದಾಟಿದೆ. ಸೆ.28ರಂದು 60 ಲಕ್ಷ ಮೀರಿದೆ.

ಅ.11ರಂದು 70 ಲಕ್ಷತಲುಪಿದೆ. ಅ.29ರಂದು 80 ಲಕ್ಷಮುಟ್ಟಿದೆ ಸಕ್ರಿಯ ಪ್ರಕರಣಗಳಲ್ಲಿ ನಿರಂತರ ಇಳಿಕೆ ಕಂಡುಬಂದಿದ್ದು, ಮೊನ್ನೆ5,33,787 ದಾಖಲಾಗಿದ್ದ ಪ್ರಕರಣನಿನ್ನೆ5,27,902ಕ್ಕೆ ಇಳಿದಿದೆ.  ಇಂದು ಬೆಳಗ್ಗೆಯಿಂದ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲಿವೆ. ಆದರೂ ಚೇತರಿಕೆ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಮಹಾರಾಷ್ಟ್ರರಾಜ್ಯವು ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ.

ರಾಜಧಾನಿ ನವದೆಹಲಿ ಮತ್ತು ಕೇರಳದಲ್ಲಿ ನಿಯಂತ್ರಣದಲ್ಲಿದ್ದ ಕೋವಿಡ್-19 ವೈರಸ್ ಸೋಂಕುಗಳು ಮತ್ತೆ ತೀವ್ರಗತಿಯಲ್ಲಿ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.  ದೆಹಲಿಯಲ್ಲಿ ಸತತ ಎಂಟು ದಿನಗಳಿಂದ ದಿನನಿತ್ಯ 5,000ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗುತ್ತಲೇ ಇವೆ.

ರಾಜಧಾನಿಯಲ್ಲಿ ಕೊರೊನಾ ಹೆಮ್ಮಾರಿಯ ಮೂರನೇ ಅಲೆ ಕಾಣಿಸಿಕೊಂಡಿರುವ ಬಗ್ಗೆ ಮುಖ್ಯಮಂತ್ರಿ ಅರವಿಂದ್‍ಕೇಜ್ರಿವಾಲ್ ಅವರೇ ಆತಂಕ ವ್ಯಕ್ತಪಡಿಸಿದ್ಧಾರೆ. ಮುಂದಿನ ಎರಡು ತಿಂಗಳು ಅತ್ಯಂತ ನಿರ್ಣಾಯಕವಾಗಿದ್ದು, ಜನರು ಎಚ್ಚೆತ್ತುಕೊಂಡು ಕೊರೊನಾ ನಿಯಂತ್ರಣ ನಿಯಮಗಳನ್ನು ಪಾಲಿಸಿದರೆ ಪೀಡೆಯನ್ನು ದೇಶದಿಂದ ಹೊರಗೆ ದಬ್ಬಬಹುದಾಗಿದೆ.

ಈ ಮಧ್ಯೆ ಐಸಿಎಂಆರ್ ದೇಶಾದ್ಯಂತ ನಿನ್ನೆ11.42 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೊನಾ ವೈರಸ್ ಸೋಂಕು ತಪಾಸಣೆ ನಡೆಸಿದ್ದು, ಈವರೆಗೆಸುಮಾರು 12.11ಕೋಟಿಜನರನ್ನು ಕೋವಿಡ್-19 ಸ್ಯಾಂಪಲ್‍ಟೆಸ್ಟ್‍ಗೆ ಒಳಪಡಿಸಲಾಗಿದೆ.

ಈ ಮಧ್ಯೆ ಡಿಸೆಂಬರ್ ಅಂತ್ಯಅಥವಾ ಹೊಸ ವರ್ಷದಾರಂಭದಲ್ಲಿ ಕೊರೊನಾ ನಿಯಂತ್ರಣ ಲಸಿಕೆ ದೇಶದ ಜನರಿಗೆ ಲಭಿಸುವ ನಿರೀಕ್ಷೆ ಇದೆ. ಕೊರೊನಾ ನಿಯಂತ್ರಣ ಲಸಿಕೆ ಲಭ್ಯವಾಗುವತನಕ ಜನರು ಎಚ್ಚರಿಕೆಯಿಂದ ಇರಬೇಕಾದ ಪರಿಸ್ಥಿತಿ ಹಿಂದಿಗಿಂತಲೂ ಈಗ ಅತ್ಯಂತ ಅನಿವಾರ್ಯವಾಗಿದೆ.

Facebook Comments