ಒಂದು ಚಮಚದಷ್ಟು ಕೊರೊನಾ ವೈರಸ್‍ನಿಂದ 5.65 ಕೋಟಿ ಮಂದಿಗೆ ರೋಗ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷ್ಟಿಂಗ್ಟನ್, ನ.19-ಇಡೀ ಲೋಕಕ್ಕೆ ಕಂಟಕವಾಗಿ ಪರಿಣಮಿಸಿರುವ ವಿಶ್ವದ ಕೊರೊನಾ ವೈರಸ್ ಪ್ರಮಾಣ ಕೇವಲ 6 ರಿಂದ 8 ಮಿಲಿ ಮೀಟರ್‍ಗಳಷ್ಟು. ಅಂದರೆ ಇದು ಒಂದು ಚಹಾ ಚಮಚದಷ್ಟು ಪ್ರಮಾಣಕ್ಕೆ ಸರಿಸಮ.  ಅಧ್ಯಯನವೊಂದು ಈ ಅಂಶವನ್ನು ತಿಳಿಸಿದೆ. ಕೊರೊನಾ ಪ್ರಮಾಣ ಲವಲೇಶವಾದರೂ ಇದರಿಂದ ಉಂಟಾಗಿರುವ ಸಾವು-ನೋವು ಮತ್ತು ಹಾನಿ-ನಷ್ಟ ಅಗಾಧವಾದುದು.

ಆದರೆ ಒಂದು ಚಮಚದಷ್ಟು ಕೊರೊನಾ ವೈರಸ್‍ನಿಂದ ಜಗತ್ತಿನಲ್ಲಿ ಈವರೆಗೆ 5.65 ಕೋಟಿ ರೋಗಿಗಳು ಸೋಂಕಿನಿಂದ ನರಳುವಂತಾಗಿದ್ದು, ಒಟ್ಟು 13.55 ಲಕ್ಷಜನರ ಜೀವಗಳನ್ನು ಈ ಅಗೋಚರ ಹೆಮ್ಮಾರಿ ನುಂಗಿ ಹಾಕಿದೆ. ಕೆಲವು ದೇಶಗಳಲ್ಲಿ ಕೊರೊನಾ ವೈರಸ್ ದಾಳಿಯ ಎರಡನೇ ಅಲೆಯ ದಾಳಿ ಮತ್ತು ಲಾಕ್‍ಡೌನ್ ನಡುವೆಯೂ ವಿಶ್ವಾದ್ಯಂತ ಡೆಡ್ಲಿ ಕೋವಿಡ್-19 ವೈರಸ್ ಪ್ರಹಾರಮುಂದುವರಿದಿದ್ದು,ಸೋಂಕು ಮತ್ತು ಸಾವಿನ ಸಂಖ್ಯೆಆಘಾತಕಾರಿ ಮಟ್ಟದಲ್ಲೇ ಏರುತ್ತಿದೆ. ಸೋಂಕಿತರ ಪ್ರಮಾಣ 5.65ಕೋಟಿ ಹಾಗೂ ಮೃತರ ಸಂಖ್ಯೆ13.55 ಲಕ್ಷದಾಟಿರುವುದು ಆತಂಕಕಾರಿ ಸಂಗತಿಯಾಗಿದೆ.

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಮತ್ತು ಫಲಿತಾಂಶ ಸಂದರ್ಭದಲ್ಲೇ, ಪಿಡುಗಿನ ಆರ್ಭಟತಿ ೀವ್ರವಾಗಿದೆ. ನಿನ್ನೆಒಂದೇ ದಿನ ಸುಮಾರು1.50 ಲಕ್ಷಕ್ಕೂ ಅಧಿಕ ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. ಬ್ರೆಜಿಲ್, ರಷ್ಯಾ, ಫ್ರಾನ್ಸ್, ಸ್ಪೇನ್ ಮೊದಲಾದ ದೇಶಗಳಲ್ಲಿ ಕೊರೊನಾಎ ರಡನೇ ಆಲೆ ಆರ್ಭಟ ಜೋರಾಗಿದ್ದು, ಕಠಿಣ ನಿರ್ಬಂಧಗಳನ್ನು ಜÁರಿಗೊಳಿಸಲಾಗಿದೆ.

ಲೋಕಕಂಟಕವಾಗಿ ಪರಿಣಮಿಸಿರುವ ಪೆಡಂಭೂತದ ಹಾವಳಿಯಿಂದ ಪ್ರತಿನಿತ್ಯ ಸೋಂಕು ಮತ್ತು ಸಾವು ಪ್ರಕರಣಗಳುವರದಿಯಾಗುತ್ತಲೇ ಇವೆ. ಅನೇಕ ರಾಷ್ಟ್ರಗಳಲ್ಲಿ ಈ ಪಿಡುಗಿನ ಏರಿಳಿತದ ಆಟ ಮುಂದುವರಿದಿದ್ದು, ಈ ಬಾಧೆಯಿಂದ ಹೈರಾಣಾಗಿರುವ ವಿಶ್ವದಜನತೆ ಮಹಾಮಾರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಇವುಗಳನಡುವೆಯೂವಿಶ್ವದಲ್ಲಿಈವರೆಗೆ3.93 ಕೋಟಿಗೂ ಅಧಿಕ ರೋಗಿಗಳು ಗುಣಮುಖರಾಗಿರುವುದು ತುಸು ಸಮಾಧಾನಕರ ಸಂಗತಿಯಾಗಿದೆ. ಆದರೆ, ಇನ್ನೂ 1.58ಕೋಟಿಗೂ ಅಧಿಕ ಸಕ್ರಿಯ ಪ್ರಕರಣಗಳು ವರದಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ವಿಶ್ವವ್ಯಾಪಿ ನಿನ್ನೆ ಮಧ್ಯರಾತ್ರಿವರೆಗೆ13,55,147ಮಂದಿ ಸಾವಿಗೀಡಾಗಿದ್ದು, 5,65,83,050 ಸೋಂಕು ಪ್ರಕರಣಗಳು ವರದಿಯಾಗಿತ್ತು. ಇಂದು ಬೆಳಗ್ಗೆ ಲಭಿಸಿದ ಮಾಹಿತಿ ಪ್ರಕಾರ, ಸೋಂಕಿತರ ಪ್ರಮಾಣ 5.66ಕೋಟಿಹಾಗೂ ಮೃತರ ಸಂಖ್ಯೆ13,56ಲಕ್ಷದಾಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ1,58,36,918 ದಾಟಿದೆ.ಅಲ್ಲದೇಇನ್ನೂ1,01,432ಕ್ಕೂ ಹೆಚ್ಚುರೋಗಿಗಳ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುವ ಆತಂಕವಿದೆ.

ವ್ಯಾಪಕ ಸಾವು-ನೋವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಮಧ್ಯೆ ರೋಗಿಗಳ ಚೇತರಿಕೆ/ಗುಣಮುಖ ಪ್ರಮಾಣದಲ್ಲೂ ವೃದ್ದಿ ಕಂಡುಬಂದಿದೆ. ವಿಶ್ವದಲ್ಲಿ ಈವರೆಗೆ 3,93,70,786ಮಂದಿ ರೋಗಿಗಳು ಚೇತರಿಸಿಕೊಂಡಿದ್ದಾರೆ ಅಥವಾ ಣಮುಖರಾಗಿದ್ದಾರೆ. ಅಮೆರಿಕ, ಭಾರತ, ಬ್ರೆಜಿಲ್, ರಷ್ಯಾ, ಫ್ರಾನ್ಸ್, ಸ್ಪೇನ್, ಅರ್ಜೆಂಟಿನಾ, ಕೊಲಂಬಿಯಾ, ಮೆಕ್ಸಿಕೋ ಮತ್ತು ಪೆರುಕೊರೊನಾ ಕೇಸ್‍ಗಳಲ್ಲಿ ವಿಶ್ವದಟಾಪ್ 10 ದೇಶಗಳಾಗಿವೆ

ಇದರ ನಡುವೆಯೂ ಕೆಲವು ರಾಷ್ಟ್ರಗಳಲ್ಲಿ ಕೊರೊನಾ ಹೆಮ್ಮಾರಿಯ ಪ್ರಕೋಪ ಕ್ಷೀಣಿಸುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಸೇರಿದಂತೆಕೆಲವು ದೇಶಗಳಲ್ಲಿ ಕೊರೊನಾದ ಎರಡನೇ ತೀವ್ರವಾಗಿದ್ದು, ಸೋಂಕು ಸಾವು ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದೆ. ಅಮೆರಿಕದಲ್ಲಿ ಕೊಂಚ ನಿಯಂತ್ರಣದಲ್ಲಿದ್ದ ಕೋವಿಡ್-19 ಮತ್ತ್ತೆಏರುಗತಿಯತ್ತ ಸಾಗಿದೆ. ಹೊಸ ಮತ್ತು ಸಕ್ರಿಯ ಪ್ರಕರಣಗಳಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ.

Facebook Comments