ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 46,232 ಮಂದಿಗೆ ಕೊರೋನಾ ಸೋಂಕು ದೃಢ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.21-ದೇಶದಲ್ಲಿ 46,232 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು , ಒಟ್ಟು ಸೋಂಕಿತರ ಸಂಖ್ಯೆ 90.50 ಲಕ್ಷ ದಾಟಿದೆ. ಸಾವಿನ ಸಂಖ್ಯೆ 1.32 ಲಕ್ಷ ಮೀರಿದೆ. ಕೇಂದ್ರ ಆರೋಗ್ಯ ಇಲಾಖೆ ಶನಿವಾರ ಬೆಳಗ್ಗೆ ಬಿಡುಗಡೆ ಮಾಡಿರುವ ಮಾಹಿತಿಯ ಅಂಕಿಅಂಶಗಳ ಪ್ರಕಾರ ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ಶೇ.93.67ರಷ್ಟಿದೆ. ಈವರೆಗೆ 84.78 ಲಕ್ಷ ಮಂದಿ ಕೊರೊನಾಗೆ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ.

ಈವರೆಗೂ ಒಟ್ಟು 90,50,597 ಲಕ್ಷ ಮಂದಿಗೆ ಸೋಂಕು ತಗುಲಿದೆ. ನಿನ್ನೆ ಒಂದೇ ದಿನ 46 ಲಕ್ಷ ಮಂದಿ ಕೊರೊನಾ ಸೋಂಕಿಗೆ ಸಿಲುಕಿದ್ದಾರೆ.
564 ಮಂದಿ ಸಾವನ್ನಪ್ಪಿದ್ದು , ಈವರೆಗೂ ಸೋಂಕಿನಿಂದ ಮೃತಪಟ್ಟವರ ಪ್ರಮಾಣ 1,32,726ರಷ್ಟಿದೆ. ದೇಶದಲ್ಲಿ ಈಗಲೂ 5 ಲಕ್ಷ ಸಕ್ರಿಯ ಪ್ರಕರಣಗಳಿವೆ.

ಕಳೆದ 11 ದಿನಗಳಿಂದ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ಒಟ್ಟು ಸಾವಿನ ಪ್ರಮಾಣ ಶೇ.1.47ರಷ್ಟಿದ್ದು ಇದನ್ನು ಶೇ.1ರ ಪ್ರಮಾಣದಲ್ಲಿ ನಿಯಂತ್ರಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಆಗಸ್ಟ್‍ವರೆಗೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 20 ಲಕ್ಷ ದಾಟಿದ್ದು , ಆ.23ರ ವೇಳೆಗೆ 7.30 ಲಕ್ಷ ಮಂದಿ ಹೆಚ್ಚುವರಿಯಾಗಿ ಸೇರ್ಪಡೆಯಾದರು.

ಸೆ.5ರವೇಳೆಗೆ ಸೋಂಕಿತರ ಸಂಖ್ಯೆ 40ಲಕ್ಷಕ್ಕೆ ತಲುಪಿತ್ತು. ಸೆ.16ಕ್ಕೆ 50 ಲಕ್ಷ, ಸೆ.28ಕ್ಕೆ 60 ಲಕ್ಷ, ಅ.11ಕ್ಕೆ 70 ಲಕ್ಷ, ಅ.29ಕ್ಕೆ 80 ಲಕ್ಷ ಸೋಂಕಿತರಾಗಿದ್ದಾರೆ.
ಕಳೆದ ನವೆಂಬರ್ 20ರವರೆಗೆ ದೇಶದಲ್ಲಿ 13.06 ಕೋಟಿ ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ನಿನ್ನೆ 10,66,022 ಮಂದಿಯನ್ನು ಪರೀಕ್ಷೆ ನಡೆಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಸಾವಿನ ಪ್ರಮಾಣದ ಪೈಕಿ ಯಥಾ ಪ್ರಕಾರ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಅಲ್ಲಿ 155 ಮಂದಿ ಜೀವ ಕಳೆದುಕೊಂಡಿದ್ದಾರೆ. ದೆಹಲಿಯಲ್ಲಿ 118, ಪಶ್ಚಿಮ ಬಂಗಾಳದಲ್ಲಿ 50, ಕೇರಳದಲ್ಲಿ 28, ಹರಿಯಾಣದಲ್ಲಿ 25, ಉತ್ತರಪ್ರದೇಶದಲ್ಲಿ 20 ಮಂದಿಯ ಜೀವ ಹಾನಿಯಾಗಿದೆ.

ಈವರೆಗಿನ ಒಟ್ಟು ಸಾವಿನ ಪ್ರಕರಣಗಳ ಪೈಕಿ ಮಹಾರಾಷ್ಟ್ರದಲ್ಲಿ 46,511 , ಕರ್ನಾಟಕದಲ್ಲಿ 11,621, ತಮಿಳುನಾಡಿನಲ್ಲಿ 11,568, ದೆಹಲಿಯಲ್ಲಿ 8,159, ಪಶ್ಚಿಮ ಬಂಗಾಳದಲ್ಲಿ 7,923, ಉತ್ತರಪ್ರದೇಶದಲ್ಲಿ 7,500 , ಆಂಧ್ರಪ್ರದೇಶದಲ್ಲಿ 6,920, ಪಂಜಾಬ್‍ನಲ್ಲಿ 4,572, ಗುಜರಾತ್‍ನಲ್ಲಿ 3,837 ಮಂದಿ ಜೀವ ಕಳೆದುಕೊಂಡಿದ್ದಾರೆ. ಇದರಲ್ಲಿ ಶೇ.70ರಷ್ಟು ಸಾವುಗಳು ಜೀವನ ಶೈಲಿಯ ಆರೋಗ್ಯ ಸಮಸ್ಯೆಗಳನ್ನು ಒಳಗೊಂಡಿದ್ದವು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Facebook Comments