ಭಾರತದಲ್ಲಿ ಕೊರೊನಾ ರೋಗಿಗಳ ಸಂಖ್ಯೆ 91 ಲಕ್ಷ ಸನಿಹ, ಚೇತರಿಕೆ ಪ್ರಮಾಣ ಶೇ.93.69

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ನ.22-ದೇಶಾದ್ಯಂತ ಕಿಲ್ಲರ್ ಕೊರೊನಾ ಹೆಮ್ಮಾರಿಯ ಹಾವಳಿ ಏರುಗತಿಯಲ್ಲೇ ಸಾಗಿದ್ದು, ಜನರಲ್ಲಿ ಭಯಾಂತಕ ಮುಂದುವರಿದಿದೆ.  ಭಾರತದ ವಿವಿಧ ನಗರಗಳಲ್ಲಿ ದಿನನಿತ್ಯದ ಪಾಸಿಟಿವ್ ಮತ್ತು ಸಾವು ಪ್ರಕರಣಗಳಲ್ಲಿ ಏರಿಕೆಯಾಗಿದ್ದು, ಮಹಾಮಾರಿಯ ಪಿಡುಗು ಯಥಾಸ್ಥಿತಿಯಲ್ಲೇ ಮುಂದುವರಿದು ಆತಂಕ ಮತ್ತೆ ಎದುರಾಗಿದೆ.

ದಿನನಿತ್ಯದ ಹೊಸ ಪ್ರಕರಣಗಳು 50,000ದತ್ತ ತಲುಪುತ್ತಿದ್ದು, ಡೆತ್ ಕೇಸ್‍ಗಳು 500ಕ್ಕಿಂತ ಹೆಚ್ಚಾಗುತ್ತಿದೆ. ಅಲ್ಲದೇ ಒಟ್ಟು ರೋಗಿಗಳ ಸಂಖ್ಯೆ 91 ಲಕ್ಷ ಮತ್ತು ಒಟ್ಟು ಮರಣ ಪ್ರಮಾಣ 1.34 ಲಕ್ಷ ಸಮೀಪದಲ್ಲಿದ್ದು, ಜನರು ಮತ್ತೆ ಆತಂಕಕ್ಕೆ ಒಳಗಾಗುವಂತಾಗಿದೆ.  ಸಕ್ರಿಯ ಪ್ರಕರಣಗಳಲ್ಲಿ ಸತತ 12 ದಿನ 5 ಲಕ್ಷಕ್ಕಿಂತ ಕಡಿಮೆಗೆ ಇಳಿದಿದೆ.

ಸಮಾಧಾನಕರ ಸಂಗತಿ ಎಂದರೆ 85.21 ಲಕ್ಷಕ್ಕೂ ಹೆಚ್ಚು ರೋಗಿಗಳು ಗುಣಮುಖರಾಗಿ/ಚೇತರಿಸಿಕೊಂಡು ಸಾವಿನ ಬಲೆಯಿಂದ ಪಾರಾಗಿದ್ದಾರೆ.
ಇಂದು ಬೆಳಗ್ಗೆ ಕೊನೆಗೊಂಡ 24 ತಾಸುಗಳ ಅವಯಲ್ಲಿ 45,209 ದಿನನಿತ್ಯ ಸೋಂಕು ಪ್ರಕರಣಗಳು ವರದಿಯಾಗಿದೆ. ದಿನನಿತ್ಯದ ಸಾವು ಪ್ರಕರಣದಲ್ಲೂ ಏರಿಕೆ ಕಂಡುಬಂದಿದ್ದು, 24 ತಾಸುಗಳ ಅವಯಲ್ಲಿ 501 ರೋಗಿಗಳು ಸಾವಿಗೀಡಾಗಿದ್ದಾರೆ.

ಇವುಗಳ ನಡುವೆಯೂ ದೇಶದಲ್ಲಿ ಸೋಂಕಿತರ ಪ್ರಮಾಣ 90.95 ಲಕ್ಷ ದಾಟಿರುವುದು ಜನರಲ್ಲಿ ಆತಂಕ ಮುಂದುವರಿಯುವಂತೆ ಮಾಡಿದೆ.
ಈವರೆಗೆ ಗುಣಮುಖರಾದ ರೋಗಿಗಳ ಸಂಖ್ಯೆ 85.21 ಲಕ್ಷ ದಾಟಿದೆ. ಚೇತರಿಕೆ ಪ್ರಮಾಣ ಶೇ.93.69ರಷ್ಟು ಏರಿಕೆ ಮತ್ತು ಸಾವಿನ ಪ್ರಮಾಣ ಶೇ.1.46ರಷ್ಟು ತಗ್ಗಿದ್ದು, ಜನರಲ್ಲಿ ನಿರಾಳತೆ ಮೂಡಿಸಿದೆ..

ದೇಶದಲ್ಲಿ ಮೃತರ ಸಂಖ್ಯೆ 1,33,228 ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಭಾರತದಲ್ಲಿ ಒಟ್ಟು ರೋಗಿಗಳ ಸಂಖ್ಯೆ 90,95,806ರಷ್ಟಿದ್ದು, ನಾಳೆ ವೇಳೆಗೆ 91 ಲಕ್ಷ ದಾಟಲಿದೆ.  ಆಗಸ್ಟ್ 7ರಂದು 20 ಲಕ್ಷ ಇದ್ದ ಪಾಸಿಟಿವ್ ಪ್ರಕರಣಗಳು ಆ.23ಕ್ಕೆ 30 ಲಕ್ಷಕ್ಕೇರಿತ್ತು.

ನಂತರ ಸೆಪ್ಟೆಂಬರ್ 5ರಂದು 40 ಲಕ್ಷ ದಾಟಿತ್ತು. ಕೇವಲ 11 ದಿನಗಳಲ್ಲಿ ಅಂದರೆ ಸೆ.16ರಂದು 50 ಲಕ್ಷ ದಾಟಿದೆ. ಸೆ.28ರಂದು 60 ಲಕ್ಷ ಮೀರಿದೆ. ಅ.11ರಂದು 70 ಲಕ್ಷ ತಲುಪಿದೆ. ಅ.29ರಂದು 80 ಲಕ್ಷ ಮುಟ್ಟಿದೆ ಕೇವಲ 21 ದಿನಗಳಲ್ಲಿ ಅಂದರೆ ನ.20ರಂದು 90 ಲಕ್ಷ ದಾಟಿದೆ
ಸಕ್ರಿಯ ಪ್ರಕರಣಗಳಲ್ಲಿ ನಿರಂತರ ಇಳಿಕೆ ಕಂಡುಬಂದಿದ್ದು, ಸತತ 12ನೇ ದಿನ 5 ಲಕ್ಷಕ್ಕಿಂತ ಕಡಿಮೆ ಆಕ್ಟೀವ್ ಕೇಸ್‍ಗಳು ವರದಿಯಾಗಿವೆ. 24 ತಾಸುಗಳಲ್ಲಿ 4,40,962ರಷ್ಟು ಇಳಿದಿದೆ.

ಇಂದು ಬೆಳಗ್ಗೆಯಿಂದ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲಿವೆ. ಆದರೂ ಚೇತರಿಕೆ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ರಾಜಧಾನಿ ದೆಹಲಿಯಲ್ಲಿ ಕೊರೊನಾ ಆರ್ಭಟ ಆತಂಕಕಾರಿ ಮಟ್ಟದಲ್ಲಿದೆ. ದೆಹಲಿ ಸೇರಿದಂತೆ ದೇಶದ ಹಲವೆಡೆ ಕೊರೊನಾ ದಾಳಿಯ ಎರಡನೇ ಅಲೆಯ ಆತಂಕ ಜನರನ್ನು ಮತ್ತಷ್ಟು ಭಯಭೀತಗೊಳಿಸಿದೆ.

ಮುಂದಿನ ಎರಡು ತಿಂಗಳು ಅತ್ಯಂತ ನಿರ್ಣಾಯಕವಾಗಿದ್ದು, ಜನರು ಎಚ್ಚೆತ್ತುಕೊಂಡು ಕೊರೊನಾ ನಿಯಂತ್ರಣ ನಿಯಮಗಳನ್ನು ಪಾಲಿಸಿದರೆ ಪೀಡೆಯನ್ನು ದೇಶದಿಂದ ನಿರ್ಮೂಲನೆ ಮಾಡಬಹುದಾಗಿದೆ.  ಈ ಮಧ್ಯೆ ಐಸಿಎಂಆರ್ ದೇಶಾದ್ಯಂತ ನಿನ್ನೆ 10.75 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೊನಾ ವೈರಸ್ ಸೋಂಕು ತಪಾಸಣೆ ನಡೆಸಿದ್ದು, ಈವರೆಗೆ 13.17 ಕೋಟಿಗೂ ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಈ ಮಧ್ಯೆ ಡಿಸೆಂಬರ್ ವೇಳೆಗೆ ಭಾರತದಲ್ಲಿ ಆಕ್ಸ್‍ಫರ್ಡ್ ಲಸಿಕೆ ಭಾರತೀಯರಿಗೆ ಲಭ್ಯವಾಗಲಿದೆ.  ಕೊರೊನಾ ನಿಯಂತ್ರಣ ಲಸಿಕೆ ಲಭ್ಯವಾಗುವ ತನಕ ಜನರು ಎಚ್ಚರಿಕೆಯಿಂದ ಇರಬೇಕಾದ ಪರಿಸ್ಥಿತಿ ಹಿಂದಿಗಿಂತಲೂ ಈಗ ಅತ್ಯಂತ ಅನಿವಾರ್ಯವಾಗಿದೆ.

Facebook Comments