ಭಾರದಲ್ಲಿ ಕಳೆದ 24 ಗಂಟೆಯಲ್ಲಿ 24,010 ಮಂದಿಗೆ ಕೊರೋನಾ ಪಾಸಿಟಿವ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.17- ಕಳೆದ ಒಂದು ತಿಂಗಳಿನಿಂದ ಇಳಿಮುಖವಾಗಿಯೇ ಇರುವ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆ ಮತ್ತಷ್ಟು ಕಡಿಮೆಯಾಗಿದೆ.  ಇಂದು ಬೆಳಗ್ಗೆ ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೇಟಿನ್ ಪ್ರಕಾರ ಬುಧವಾರ ದೇಶದಲ್ಲಿ ಸೋಂಕಿತರ ಪ್ರಮಾಣ 24,010ರಷ್ಟಿದ್ದು, 355 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ದೇಶದಲ್ಲಿ ಕೊರೊನಾ 99,56,558 ಮಂದಿಗೆ ತಗುಲಿದ್ದು, ಅವರಲ್ಲಿ ನಿನ್ನೆ ಒಂದೇ ದಿನ 33,291 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಈ ಮೂಲಕ 94,89,740 ಮಂದಿ ಚಿಕಿತ್ಸೆ ಪಡೆದು ಹುಷಾರಾಗಿದ್ದಾರೆ. ಈ ಪ್ರಮಾಣ ಶೇ.95.31ರಷ್ಟಿದೆ. ಸದ್ಯಕ್ಕೆ 3,22,366 ಮಂದಿ ಆಸ್ಪತ್ರೆಯಲ್ಲಿದ್ದಾರೆ.

ಸಾವನ್ನಪ್ಪಿದವರ ಒಟ್ಟು ಸಂಖ್ಯೆ 1,44,451ಯಾಗಿದೆ. ಐಸಿಎಂಆರ್ ಪ್ರಕಾರ 15,78,05,240 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ನಿನ್ನೆ ಒಂದೇ ದಿನ 11,58,960 ಮಂದಿಯನ್ನು ಪರೀಕ್ಷೆ ನಡೆಸಿದ್ದು ಅವರಲ್ಲಿ 24,010 ಮಂದಿಗೆ ಸೋಂಕಿರುವುದು ಪತ್ತೆಯಾಗಿದೆ.

Facebook Comments