ಭಾರತದಲ್ಲಿ ಕಳೆದ 7 ತಿಂಗಳಲ್ಲೇ ಅತ್ಯಂತ ಕಡಿಮೆ ಕೊರೊನ ಕೇಸ್ ದಾಖಲು
ನವದೆಹಲಿ, ಜ.19- ಕಳೆದ ಜೂನ್ ಎರಡನೇ ವಾರದ ನಂತರ ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಪ್ರಮಾಣದ ಕೊರೊನಾ ಸೋಂಕಿನ ಪ್ರಕರಣಗಳು ದೇಶದಲ್ಲಿ ದಾಖಲಾಗಿವೆ. ಕಳೆದ 24 ಗಂಟೆಯಲ್ಲಿ ನಡೆದಿರುವ ಪರೀಕ್ಷೆಯ ಪ್ರಕಾರ 10,064 ಪ್ರಕರಣಗಳು ಪತ್ತೆಯಾಗಿವೆ. ಕೋವಿಡ್ ಸೋಂಕು ಕಾಣಿಸಿಕೊಂಡ ಬಳಿಕ ಜೂನ್ವರೆಗೂ ನಿಧಾನವಾಗಿ ಹರಡುತ್ತಿದ್ದ ಸೋಂಕು ಜೂನ್ ಬಳಿಕ ಏಕಾಏಕಿ ಲಕ್ಷಗಳ ಸಂಖ್ಯೆಯಲ್ಲಿ ಹೆಚ್ಚಾಗಿತ್ತು.
ಕಳೆದ 10 ದಿನಗಳಿಂದೀಚೆಗೆ 20ಸಾವಿರದೊಳಗೆ ಸೋಂಕು ನಿಯಂತ್ರಣದಲ್ಲಿತ್ತು. ನಿನ್ನೆ ಕೇವಲ 10,064 ಮಂದಿಗೆ ಮಾತ್ರ ಸೋಂಕು ತಗುಲಿರುವುದು ಸಮಾಧಾನ ತಂದಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,05,81,837 ಮಂದಿಗೆ ಸೋಂಕು ತಗುಲಿದೆ. ನಿನ್ನೆ ಕೇರಳದಲ್ಲಿ 3346 ಮಂದಿ, ಮಾರಾಷ್ಟ್ರದಲ್ಲಿ 1924 ಮಂದಿಗೆ ಸೋಂಕು ತಗುಲಿದೆ.
ಉಳಿದಂತೆ ಬೇರೆ ರಾಜ್ಯಗಳಲ್ಲಿ ಸೋಂಕಿತರ ಪ್ರಮಾಣ ನಿಯಂತ್ರಣ ದಲ್ಲಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಪ್ರಮಾಣಕ್ಕಿಂತಲೂ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈವರೆಗೂ 1,02,28,753 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಪ್ರಸ್ತುತ ದೇಶದಲ್ಲಿ 2,00,528 ಮಂದಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಸೋಂಕಿನಿಂತ ಮೃತಪಟ್ಟಿರುವವರ ಪ್ರಮಾಣ 1,52,556ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ 137 ಮಂದಿ ಸಾವನ್ನಪ್ಪಿದ್ದಾರೆ.