ಬೆಂಗಳೂರಿನಲ್ಲಿ ಕೊರೊನಾ ಮಾರಿಗೆ ಮೂವರು ಬಲಿ, ಮೈದಾನದಲ್ಲೇ ಅನಾಥ ಶವ 

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.9- ಕೊರೊನಾ ಮಹಾಮಾರಿಗೆ ಮತ್ತೆ ಮೂವರು ಮಹಿಳೆಯರು ಬಲಿಯಾಗಿದ್ದಾರೆ. ವಿಕ್ಟೋರಿಯಾ, ಇಎಸ್‍ಐ ಹಾಗೂ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಮಹಿಳೆಯರು ಚಿಕಿತ್ಸೆ  ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ.

ಕೊರೊನಾ ಸೋಂಕು ಕಾಣಿಸಿಕೊಂಡು ಜು.3ರಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 54 ವರ್ಷದ ಮಹಿಳೆ ನಿನ್ನೆ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಹಾಲಕ್ಷ್ಮಿ ಬಡಾವಣೆಯ 55 ವರ್ಷದ ಮಹಿಳೆ ಇಎಸ್‍ಐ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮೃತಪಟ್ಟಿದ್ದಾರೆ.

ಅದೇ ರೀತಿ ಕೆಸಿ ಜನರಲ್ ಆಸ್ಪತ್ರೆಯಲ್ಲೂ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಅನಾಥ ಮೃತದೇಹ: ಬಸವೇಶ್ವರನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮಲಗಿದ್ದ ವ್ಯಕ್ತಿಯೊಬ್ಬ ಮಲಗಿದ್ದಲ್ಲೇ ಸಾವನ್ನಪ್ಪಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

ಅನಾಥ ಶವವನ್ನು ಕಂಡ ಸ್ಥಳೀಯರು ಆ್ಯಂಬುಲೆನ್ಸ್‍ಗೆ ಕರೆ ಮಾಡಿ ನಾಲ್ಕು ಗಂಟೆ ಕಳೆದರೂ ಆ್ಯಂಬುಲೆನ್ಸ್ ಬರಲಿಲ್ಲ. ಆತನ ಸಾವಿಗೆ ಕಾರಣ ಏನೆಂದು ತಿಳಿಯದ ಹಿನ್ನೆಲೆಯಲ್ಲಿ ಶವದ ಬಳಿಗೆ ಯಾರೊಬ್ಬರೂ ತೆರಳದಿದ್ದರಿಂದ ಸುಮಾರು ಗಂಟೆಗಳ ಕಾಲ ಶವ ಅನಾಥವಾಗಿಯೇ ಬಿದ್ದಿತ್ತು. ಸುಮಾರು ಐದು ಗಂಟೆಗಳ ನಂತರ ಸ್ಥಳಕ್ಕೆ ಆಗಮಿಸಿದ ಆ್ಯಂಬುಲೆನ್ಸ್ ಶವವನ್ನು ಸಾಗಿಸಿದರು.

Facebook Comments