ಕೊರೋನಾ ಮಹಾಸ್ಪೋಟ : ಒಂದೇ ದಿನ 1.52 ಲಕ್ಷ ಮಂದಿಗೆ ಸೋಂಕು, 839 ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.12- ದೇಶದಲ್ಲಿ ದಿನೇ ದಿನೇ ಕೊರೊನಾ ಸೋಟಗೊಳ್ಳುತ್ತಿದೆ. ನಿನ್ನೆ ಒಂದೇ ದಿನ 1,52,879 ಮಂದಿಗೆ ಸೋಂಕು ತಗುಲಿದ್ದು, 839 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,33,58,805ರಷ್ಟಾಗಿದೆ. ಇದರ ನಡುವೆ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿರುವವರ ಪ್ರಮಾಣ ಕೂಡ ಉತ್ತಮವಾಗಿದೆ.

1,20,81,443 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ, ಗುಣಮುಖರಾದವರ ಪ್ರಮಾಣ ಶೇ.90.44ರಷ್ಟಿದೆ. 11,08,087 ಸಕ್ರಿಯ ಪ್ರಕರಣಗಳಿದ್ದು, ಇದು ಒಟ್ಟು ಸೋಂಕಿತರ ಸಂಖ್ಯೆಯಲ್ಲಿ ಶೇ.8.29ರಷ್ಟಿದೆ. ಸಾವಿನ ಪ್ರಮಾಣದಲ್ಲೂ ಗಣನೀಯ ಏರಿಕೆಯಾಗಿದೆ.

ನಿನ್ನೆ ಒಂದೇ ದಿನ 839 ಮಂದಿ ಸಾವನ್ನಪ್ಪಿದ್ದು, ಈವರೆಗೂ 1,69,275 ಮಂದಿ ಮೃತಪಟ್ಟಿದ್ದಾರೆ. ಇದರ ಒಟ್ಟು ಪ್ರಮಾಣ ಶೇ.1.27ರಷ್ಟಿದೆ. 14,12,047 ಮಂದಿಯನ್ನು ನಿನ್ನೆ ಪರೀಕ್ಷೆಗೆ ಒಳಪಡಿಸಲಾಗಿದೆ.

ಒಂದೆಡೆ ಸೋಂಕು ಏರಿಕೆಯಾಗುತ್ತಿದ್ದರೆ ಮತ್ತೊಂದೆಡೆ ಕೇಂದ್ರ ಸರ್ಕಾರ ಲಸಿಕಾ ಆಂದೋಲನವನ್ನು ಹೆಚ್ಚಳ ಮಾಡಿದೆ. ನಿನ್ನೆ 35,19,987 ಮಂದಿಯೂ ಸೇರಿದಂತೆ ಈವರೆಗೂ ಒಟ್ಟು 10,15,95,147 ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ತಿಳಿಸಿದೆ.

Facebook Comments

Sri Raghav

Admin