ಬ್ರೆಜಿಲ್‍ನಲ್ಲಿ ಕೊರೋನಾಗೆ 1,150ಕ್ಕೂ ಹೆಚ್ಚು ಮಂದಿ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬ್ರೆಸಿಲಿಯಾ, ಏ.11- ಏಷ್ಯಾ, ಯುರೋಪ್, ಅಮೆರಿಕದಲ್ಲಿ ಭಾರೀ ಸಾವು-ನೋವು ಮತ್ತು ವ್ಯಾಪಕ ಸೋಂಕಿಗೆ ಕಾರಣವಾಗಿ ಆರ್ಥಿಕ ವ್ಯವಸ್ಥೆಯನ್ನೇ ಅಲ್ಲೋಲ-ಕಲ್ಲೋಲ ಮಾಡಿರುವ ಕಿಲ್ಲರ್ ಕೊರೊನಾ ಆರ್ಭಟ ಲ್ಯಾಟಿನ್ ಆಮೆರಿಕ ರಾಷ್ಟ್ರಗಳಲ್ಲಿಯೂ ಮತ್ತಷ್ಟು ತೀವ್ರಗೊಂಡಿದೆ.

ಅತ್ಯಂತ ಪ್ರಬಲ ಲ್ಯಾಟಿನ್ ಅಮೆರಿಕ ದೇಶ ಬ್ರೆಜಿಲ್‍ನಲ್ಲಿ ಮಾರಕ ಕೋವಿಡ್-19 ದಾಳಿಯಲ್ಲಿ ಈವರೆಗೆ 1,150ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ದೇಶದ ವಿವಿಧ ರಾಜ್ಯಗಳಲ್ಲಿನ ಸುಮಾರು 20,000 ಜನರಿಗೆ ಮಾರಕ ಸೋಂಕು ತಗುಲಿದ್ದು, ಅವರಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದೆ.

ಇದರಿಂದಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ಬ್ರೆಜಿಲ್‍ನಲ್ಲಿ 1,156 ಮಂದಿಯನ್ನು ಕೋವಿಡ್-19 ವೈರಾಣು ಬಲಿ ತೆಗೆದುಕೊಂಡಿದೆ. 19,938 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ದೇಶದಲ್ಲಿ ಸೋಂಕು ಮತ್ತಷ್ಟು ವ್ಯಾಪಿಸುವ ಆತಂಕವಿದ್ದು, ವೈರಸ್‍ಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಹರಸಾಹಸ ಮಾಡುತ್ತಿದೆ.

Facebook Comments

Sri Raghav

Admin