ಬಿಗ್ ಬ್ರೇಕಿಂಗ್ : ಕರ್ನಾಟಕದಲ್ಲಿ ಕೊರೋನಾ ರಣಕೇಕೆ, ಇಂದು 3176 ಮಂದಿಗೆ ಪಾಸಿಟಿವ್, 87 ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು ಜು,15 : ರಾಜ್ಯದಲ್ಲಿಂದು ಕೋರೋನಾ ಅಟ್ಟಹಾಸ ಮುಂದುವರೆದಿದ್ದು ಕಳೆದ 24 ಗಂಟೆಗಳಲ್ಲಿ 3176 ಜನರಲ್ಲಿ ಕೋವಿಡ್ -19 ವೈರಸ್ ಇರುವುದು ಪತ್ತೆಯಾಗಿದೆ.

ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ರಾಜ್ಯದಲ್ಲಿ 3000 ಕ್ಕೂ ಹೆಚ್ಚು ಮಂದಿಗೆ ಕೊರೋನಾ ತಗುಲಿದ್ದಿ, ಸಾವಿನಲ್ಲೂ ಕೂಡ ಕೊರೋನಾ ದಾಖಲೆ ಬರೆದಿದೆ, ರಾಜ್ಯದಲ್ಲಿ ಇಂದು ಮಹಾಮಾರಿಗೆ ಬರೋಬ್ಬರಿ 87 ಮಂದಿ ಜೀವ ಚೆಲ್ಲಿದ್ದಾರೆ, ಈ ಮೂಲಕ ಕರ್ನಾಟಕದಲ್ಲಿ ಕೊರೋನಾ ಸಾವಿನ ಸಂಖ್ಯೆ 928 ಕ್ಕೇರಿದೆ.

ಬೆಂಗಳೂರಿನಲ್ಲಿ ಇಂದು 60 ಕೊರೋನಾ ಸೋಂಕಿತರು ಕಿಲ್ಲರ್ ಕೊರೋನಾಗೆ ಬಲಿಯಾಗಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 437 ಕ್ಕೆ ಏರಿಕೆಯಾಗಿದೆ.

ಬೆಂಗಳೂರು ಸೇರಿದಂತೆ ಆರಕ್ಕೂ ಹೆಚ್ಚು ಜಿಲ್ಲೆಗಳು ಹಾಗೂ ರಾಜ್ಯದ ವಿವಿಧೆಡೆ ಲಾಕ್ ಡೌನ್ ಜಾರಿಯಾದ ಮೊದಲ ದಿನವೇ ಭಾರಿ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗಿದ್ದು ಆತಂಕ ಮೂಡಿಸಿದೆ.

ಮತ್ತೊಮ್ಮೆ ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಾಗಿದ್ದು ಇಂದು ಮಹಾನಗರಿಯಲ್ಲಿ 1975 ಮಂದಿಗೆ ಕೊರೋನಾ ದೃಢಪಟ್ಟಿದೆ. ಆತಂಕಕಾರಿ ವಿಷಯವೆಂದರೆ ಶಿವಮೊಗ್ಗ ಮೂಲದ ಸ್ವಾಮೀಜಿಯೊಬ್ಬರೂ ಸಹ ಕರುನಾಗೆ ಬಲಿಯಾಗಿದ್ದಾರೆ.

ಇಂದು 1076 ಮಂದಿ ಕೊರೋನಾ ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 18466 ಮಂದಿ ಕಿಲ್ಲರ್ ಕೊರೋನಾದಿಂದ ಪಾರಾಗಿದ್ದಾರೆ, ಇನ್ನು 597 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದಲ್ಲಿ ಒಟ್ಟು 27853 ಆಕ್ಟಿವ್ ಕೇಸ್ ಗಳಿದ್ದು, ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 47253 ಕ್ಕೆ ಏರಿಕೆಯಾಗಿದೆ.

Facebook Comments

Sri Raghav

Admin