ಕೊರೋನಾ ಬುಲೆಟಿನ್ : ರಾಜ್ಯದಲ್ಲಿ ಇಂದು 1498 ಮಂದಿಗೆ ಪಾಸಿಟಿವ್, 15 ಮಂದಿ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ರಾಜ್ಯದಲ್ಲಿ ಇಂದು ಕೋವಿಡ್-19 ಸೋಂಕು 1478 ಜನರ ದೇಹ ಪ್ರವೇಶಿಸಿದ್ದು, ಬರೋಬ್ಬರಿ 15 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 26,815ಕ್ಕೆ ಏರಿಕೆಯಾಗಿದೆ.

ಕೊರೋನಾ ವೈರಸ್ ನಿಂದಾಗಿ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ.ರಾಜ್ಯದಲ್ಲಿ ಇಲ್ಲಿಯವರೆಗೂ ಕೊರೋನಾಗೆ ಒಟ್ಟು 416 ಮಂದಿ ಬಲಿಯಾಗಿದ್ದಾರೆ.

ಇಂದು ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 800 ಪ್ರಕರಣಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 1498 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ.

ಬೀದರ್ ನಲ್ಲಿ ಐವರು ಸೋಂಕಿತರು ಮರಣ ಹೊಂದಿದ್ದರೆ, ಬಾಗಲಕೋಟೆ, ದಕ್ಷಿಣ ಕನ್ನಡ, ಮಂಡ್ಯ ಜಿಲ್ಲೆಗಳಲ್ಲಿ ತಲಾ ಓರ್ವ ಸೋಂಕಿತ ಸಾವನ್ನಪ್ಪಿದ್ದಾರೆ. ಇದುವರೆಗೆ ರಾಜ್ಯದಲ್ಲಿ 416 ಮಂದಿ ಕೋವಿಡ್ ಸೋಂಕಿತರು ಅಸುನೀಗಿದ್ದಾರೆ.

ಬೆಂಗಳೂರು ನಗರವೊಂದರಲ್ಲೇ 800 ಮಂದಿಗೆ ಕೊರೊನಾವೈರಸ್ ಸೋಂಕು ದೃಢಪಟ್ಟಿದೆ. ಉಳಿದಂತೆ ದಕ್ಷಿಣ ಕನ್ನಡ 83, ಧಾರವಾಡ 57, ಕಲಬುರಗಿ 51, ಬೀದರ್ 51, ಮೈಸೂರು 49, ಬಳ್ಳಾರಿ 45, ರಾಮನಗರ 37, ಉತ್ತರ ಕನ್ನಡ 35, ಶಿವಮೊಗ್ಗ 33, ಮಂಡ್ಯ 29, ಉಡುಪಿ 28, ಹಾಸನ 26, ಬಾಗಲಕೋಟೆ 26, ರಾಯಚೂರು 23, ವಿಜಯಪುರ 20,

ತುಮಕೂರು 16, ಕೊಡಗು 14, ಯಾದಗಿರಿ 10 ಮಂದಿಗೆ ಹಾಗೂ ದಾವಣಗೆರ, ಹಾವೇರಿ, ಕೋಲಾರ, ಚಾಮರಾಜನಗರ, ಚಿಕ್ಕಮಗಳೂರಿನಲ್ಲಿ ತಲಾ 6 ಮಂದಿಗೆ ಮಹಾಮಾರಿ ಅಂಟಿಕೊಂಡಿರುವುದು ದೃಢಪಟ್ಟಿದೆ.

ಸದ್ಯಕ್ಕೆ ರಾಜ್ಯದಲ್ಲಿ 14,385 ಸಕ್ರಿಯ ಪ್ರಕರಣಗಳಿದ್ದು, ಶೇ.1 ರಷ್ಟು ಮಾತ್ರ ಐಸಿಯುನಲ್ಲಿದ್ದಾರೆ. ಅಂದರೆ 143 ಜನ ಮಾತ್ರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದುವರೆಗೂ 10,527 ಜನ ಸಂಪೂರ್ಣ ಗುಣಮುಖರಾಗಿದ್ದಾರೆ. 25,317 ಕೊರೊನಾ ಸೋಂಕಿತರ ಪೈಕಿ 14,385 ಸಕ್ರಿಯ ಪ್ರಕರಣಗಳಿಗೆ. ರಾಷ್ಟ್ರೀಯ ಮರಣ ಪ್ರಮಾಣ ಶೇ.2.79 ರಷ್ಟಿದ್ದು, ಬೆಂಗಳೂರಿನಲ್ಲಿ ಶೇ.1.46 ರಷ್ಟಿದೆ.

 

Facebook Comments

Sri Raghav

Admin