ರಾಜ್ಯದಲ್ಲಿ ಕೊರೋನಾ ಕೇಕೆ : ಇಂದು ಬರೋಬ್ಬರಿ 7,833 ಮಂದಿಗೆ ಪಾಸಿಟಿವ್, 113 ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ರಾಜ್ಯದಲ್ಲಿ ಇಂದು 7,833 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 7,034 ಮಂದಿ ಗುಣಮುಖರಾಗಿದ್ದಾರೆ ಹಾಗೂ 113 ಜನ ಸಾವಿ‌ಗೀಡಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 7,883 ಕೊರೋನಾ ಸೋಂಕು ಪತ್ತೆಯಾಗಿದ್ದು ಒಟ್ಟಾರೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,96,494ಕ್ಕೆ ಏರಿಕೆಯಾಗಿದೆ.

ಬೆಂಗಳೂರು ನಗರದಲ್ಲಿ 2,802 ಹೊಸ ಪ್ರಕರಣಗಳು ಇಂದು ದಾಖಲಾಗಿವೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 79,840ಕ್ಕೆ ಏರಿಕೆಯಾಗಿದೆ.

ಒಟ್ಟು 1,96,494 ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 1,12,633 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಪ್ರಸ್ತುತ 80,343 ಸಕ್ರಿಯ ಪ್ರಕರಣಗಳಿದ್ದು, ಸೋಂಕಿನಿಂದ ಈವರೆಗೂ 3,510 ಜನ ಮೃತಪಟ್ಟಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಬುಧವಾರ ಬೆಂಗಳೂರು ನಗರದಲ್ಲಿ 2802, ಬಳ್ಳಾರಿಯಲ್ಲಿ 635, ಮೈಸೂರಿನಲ್ಲಿ 544, ಬೆಳಗಾವಿಯಲ್ಲಿ 314, ಧಾರವಾಡದಲ್ಲಿ 269, ಉಡುಪಿಯಲ್ಲಿ 263, ಹಾಸನದಲ್ಲಿ 258, ದಾ ವಣಗೆರೆ,239,ದಕ್ಷಿಣ ಕನ್ನಡದಲ್ಲಿ 229 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ.

Facebook Comments

Sri Raghav

Admin