ಕೊರೋನಾ ಬುಲೆಟಿನ್ : ರಾಜ್ಯದಲ್ಲಿ ಇಂದು 3,693 ಮಂದಿಗೆ‌ ಪಾಸಿಟಿವ್, 115 ಸಾವು..! ಬೆಂಗಳೂರು ಸ್ಥಿತಿ ಭಯಾನಕ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಜೊತೆಗೆ‌ ಜೊತೆಗೆ ಸಾವಿನ ಪ್ರಮಾಣವೂ ಏರಿಕೆ ಆಗುತ್ತಿದೆ. ‌ಇಂದು ಒಂದೇ ದಿನ 3,693 ಹೊಸ‌ ಪಾಸಿಟಿವ್ ಪ್ರಕರಗಳು ಪತ್ತೆಯಾಗಿದ್ದರೆ, 115 ಮಂದಿ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿಕೊರೊನಾ ಸೋಂಕಿತರ ಸಂಖ್ಯೆ 55,115ಕ್ಕೆ ಏರಿಕೆಯಾಗಿದ್ದು,ಇದುವರೆಗೆ ಕೊರೊನಾದಿಂದ 1147 ಜನ ಕೊನೆಯುಸಿರೆಳೆದಿದ್ದಾರೆ.

ಇದರಲ್ಲಿ ಬೆಂಗಳೂರಿನಲ್ಲೇ ಒಂದೇ ದಿನಕ್ಕೆ 2,208 ಜನರಿಗೆ ಸೋಂಕು ತಗುಲಿದೆ. ಜೊತೆಗೆ ಬೆಂಗಳೂರಿನಲ್ಲಿ ಇಂದು ಒಂದೇ ದಿನ ಕೊರೊನಾ ಸೋಂಕಿಗೆ 75 ಜನ ಬಲಿಯಾಗಿದ್ದು, ಒಟ್ಟಾರೆಯಾಗಿ ಬೆಂಗಳೂರು ಒಂದರಲ್ಲೆ 582 ಜನ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.

ಇಂದು 1,028 ಮಂದಿ ಗುಣಮುಖರಾಗಿದ್ದು, ಈವರೆಗೆ 20,757 ಮಂದಿ ಚೇತರಿಸಿಕೊಂಡಿದ್ದಾರೆ.‌ ಸಕ್ರಿಯ 33,205 ಪ್ರಕರಣಗಳಿದ್ದು, ನಿಗದಿತ ಕೋವಿಡ್ ಆಸ್ಪತ್ರೆಗಳಲ್ಲಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಶುಕ್ರವಾರ 24,700 ಜನಕ್ಕೆ ಕೊರೊನಾ‌ ಪರೀಕ್ಷೆ ಮಾಡಿದ್ದು, 3,693 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಈವರೆಗೆ ಕೊರೊನಾ ಪರೀಕ್ಷೆಯನ್ನ 9,50,177 ಮಂದಿ ಮಾಡಿಸಿಕೊಂಡಿದ್ದಾರೆ.

ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರ ಪ್ರಮಾಣ ಶೇಕಡಾ 37. 66 ರಷ್ಟು ಇದ್ದರೆ, ಸಾವಿನ ಪ್ರಮಾಣ 2.05 % ಇದೆ. ರಾಜಧಾನಿಯಲ್ಲಿ ಲಾಕ್‌ಡೌನ್‌ ಹೇರಲಾಗಿದ್ದರೂ ಸಹ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

Facebook Comments

Sri Raghav

Admin