ರಾಜ್ಯದಲ್ಲಿ ಕೊರೋನಾ ಮರಣಮೃದಂಗ, ಇಂದು 139 ಮಂದಿ ಸಾವು, 7665 ಜನರಿಗೆ ಪಾಸಿಟಿವ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ರಾಜ್ಯದಲ್ಲಿ ಇಂದು ಕೂಡ ಕೊರೋನಾ ಮರಣ ಮೃದಂಗ ಮುಂದುವರೆದಿದ್ದಿ, ಆತು ಹೆಚ್ಚು ಅಂದರೆ 139 ಮಂದಿ ಮಹಾಮಾರಿಗೆ ಬಲಿಯಾದರೆ, ಇಂದು 7665 ಮಂದಿಗೆ ಪಾರಿಸಿವೆ ವರದಿ ಬಂದಿದೆ.
ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 240948 ಕ್ಕೇರಿಕೆಯಾದರೆ, ಒಟ್ಟು ಸಾವಿನ ಸಂಖ್ಯೆ 4201 ಕ್ಕೆ ಏರಿಕೆಯಾಗಿದೆ.

ಇಂದು ಬೆಂಗಳೂರಿನಲ್ಲಿ 2242 ಜನರಿಗೆ ಕೊರೋನಾ ತಗುಲಿದ್ದು, 49 ಮಂದಿ ಪ್ರಾಣ ಬಿಟ್ಟಿದ್ದಾರೆ. ಮಹಾನಗಿರಿಯೊಂದರಲ್ಲೇ ಈವರೆಗೆ 94106 ಮಂದಿಗೆ ಕೊರೋನಾ ತಗುಲಿದೆ. ಬೆಂಗಳೂರಲ್ಲಿ ಈವರೆಗೆ 1532 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ.

ಇಂದು 8387 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದು, ಈವರೆಗೆ ಒಟ್ಟು 156949 ಜನ ಗುಣಮುಖರಾಗಿದ್ದಾರೆ. ಉಳಿದಂತೆ 79782 ಸಕ್ರಿಯ ಕೇಸ್​ಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ. ಇದರಲ್ಲಿ 697 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿಯಂತೆ 59088 ಮಂದಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದ್ದು, ರಾಜ್ಯದಲ್ಲಿ ಈವರೆಗೆ ಒಟ್ಟು 2134174 ಮಂದಿಗೆ ಕೊರೋನಾ ಟೆಸ್ಟ್ ಮಾಡಲಾಗಿದೆ.

# ಜಿಲ್ಲಾವಾರು ಇಂದು ಪತ್ತೆಯಾದ ಸೋಂಕಿತರ ಸಂಖ್ಯೆ ಈ ಕೆಳಕಂಡಂತಿದೆ :

Facebook Comments

Sri Raghav

Admin