ಕೊರೋನಾ ಬುಲೆಟಿನ್ : ರಾಜ್ಯದಲ್ಲಿ ಇಂದು 5072 ಮಂದಿಗೆ ಪಾಸಿಟಿವ್, 72 ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ರಾಜ್ಯದಲ್ಲಿ ಇಂದೂ ಕೂಡ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು 5072 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು 72 ಮಂದಿ ಕಿಲ್ಲರ್ ಕೊರೋನಾಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯ್ದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 90942ಕ್ಕೇರಿಕೆಯಾದರೆ ಒಟ್ಟು ಸಾವಿನ ಸಂಖ್ಯೆ 1796 ಕ್ಕೆ ಜಿಗಿದಿದೆ.

ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು 2036 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 43503ಕ್ಕೇರಿಕೆಯಾಗಿದೆ. ಬೆಂಗಳೂರಿನಲ್ಲಿ ಮಹಾಮಾರಿಗೆ ಇಂದು 29 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ಬೆಂಗಳೂರಲ್ಲಿ ಒಟ್ಟು ಸಾವಿನ ಸಂಖ್ಯೆ 862 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ 55388 ಸಕ್ರಿಯ ಪ್ರಕರಣಗಳಿದ್ದು, 611 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 32765 ಮಂದಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದ್ದು, ರಾಜ್ಯ್ದಲ್ಲಿ ಈವರೆಗೆ ಒಟ್ಟು 1143262 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ.

ಇನ್ನು ಬೆಳಗಾವಿ ಯಲ್ಲಿ 341, ಬಳ್ಳಾರಿ- 222, ದಕ್ಷಿಣ ಕನ್ನಡ- 218, ಮೈಸೂರು- 187, ಕಲಬುರಗಿ- 183, ಧಾರವಾಡ- 183, ಉಡುಪಿ 182, ವಿಜಯಪುರ- 175, ಉತ್ತರ ಕನ್ನಡ -155, ಬೆಂಗಳೂರು ಗ್ರಾಮಾಂತರ – 154, ಹಾಸನ- 151, ಚಿಕ್ಕಬಳ್ಳಾಪುರ- 101,

ದಾವಣಗೆರೆ- 79, ಯಾದಗಿರಿ – 68, ರಾಯಚೂರು -68, ಕೋಲಾರ -68 , ಬೀದರ್- 62, ಗದಗ- 61, ಮಂಡ್ಯ- 60, ಬಾಗಲಕೋಟೆ- 57, ಹಾವೇರಿ- 52, ಶಿವಮೊಗ್ಗ- 42, ಚಿಕ್ಕಮಗಳೂರು-42 , ಕೊಪ್ಪಳ- 31, ತುಮಕೂರು- 27, ಚಾಮರಾಜನಗರ- 22, ರಾಮನಗರ- 20, ಚಿತ್ರದುರ್ಗ- 16, ಕೊಡಗಿನಲ್ಲಿ 9 ಪ್ರಕರಣಗಳು ಪತ್ತೆಯಾಗಿವೆ.

Facebook Comments

Sri Raghav

Admin

49 thoughts on “ಕೊರೋನಾ ಬುಲೆಟಿನ್ : ರಾಜ್ಯದಲ್ಲಿ ಇಂದು 5072 ಮಂದಿಗೆ ಪಾಸಿಟಿವ್, 72 ಬಲಿ..!

Comments are closed.