ಬೆಂಗಳೂರಲ್ಲಿ ಕುಗ್ಗಿದ ಕೊರೋನಾ ಶಕ್ತಿ, ಈ ಅಂಕಿ ಅಂಶಗಳೇ ಸಾಕ್ಷಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.2- ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕ್ಷೀಣಿಸುತ್ತಿದೆ. ಸೋಂಕಿನಿಂದ ಬಲಿಯಾಗುತ್ತಿರುವವರ ಸಂಖ್ಯೆಯೂ ಕೂಡ ಕಡಿಮೆಯಾಗುತ್ತಿದೆ. ಹೀಗಾಗಿ ಸೋಂಕಿತರ ಮನೆಗಳಿಗೆ ಹಾಕುವ ಬ್ಯಾರಿಕೇಡ್ ಮತ್ತು ಪೋಸ್ಟರ್‍ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ ಎಂದು ಜನತೆ ಆತಂಕ ಪಡುವ ಅಗತ್ಯವಿಲ್ಲ . ಈ ಹಿಂದೆ ಪ್ರತಿನಿತ್ಯ ಎರಡರಿಂದ ಮೂರು ಸಾವಿರ ಜನರ ತಪಾಸಣೆ ನಡೆಸುತ್ತಿದ್ದೆವು. ಆಗ ಸೋಂಕಿತರ ಸಂಖ್ಯೆ ಕಡಿಮೆ ಇರುತ್ತಿತ್ತು. ಈಗ ಸಾಮೂಹಿಕ ತಪಾಸಣೆ ಕೈಗೊಂಡು ಪ್ರತಿನಿತ್ಯ 30 ಸಾವಿರದಷ್ಟು ಜನರ ತಪಾಸಣೆ ನಡೆಸುತ್ತಿದ್ದೇವೆ.

ಹಾಗಾಗಿ ಸೋಂಕಿತರ ಸಂಖ್ಯೆ 2ರಿಂದ 3 ಸಾವಿರದಷ್ಟು ಕಂಡು ಬರುತ್ತಿದೆ. ಸೋಂಕಿನ ಪ್ರಮಾಣ ಕೇವಲ ಶೇ.10ರಷ್ಟಿದೆ. ಮರಣದ ಪ್ರಮಾಣ 1.5ರಷ್ಟಿದೆ. ನಗರದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗಿವೆ ಎಂದು ಜನರು ಯಾವುದೇ ರೀತಿಯ ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಹೇಳಿದರು.

ತೀವ್ರ ಜ್ವರ ಮತ್ತು ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಂಡು ಬಂದರೆ ಅಂತಹವರನ್ನು ನಾವೇ ಶಿಫಾರಸು ಮಾಡಿ ಆಸ್ಪತ್ರೆಗೆ ಕಳುಹಿಸಿ ಕೊಡುತ್ತೇವೆ. ಇಲ್ಲವೇ ಹೋಂ ಐಸೋಲೇಷನ್ ಮಾಡುವಂತಹ ಸಲಹೆಗಳನ್ನು ನೀಡುತ್ತೇವೆ ಎಂದು ತಿಳಿಸಿದರು.

ಒಂದೆರಡು ಪ್ರಕರಣಗಳು ಕಂಡು ಬಂದಂತಹ ಪ್ರದೇಶಗಳ ನೂರು ಮೀಟರ್ ವ್ಯಾಪ್ತಿಯಲ್ಲಿ ಬ್ಯಾರಿಕೇಡ್‍ಗಳನ್ನುಹಾಕಿ ಕಂಟೈನ್ಮೆಂಟ್ ಝೋನ್ ಮಾಡಲಾಗುತ್ತಿತ್ತು. ಡಿಕೋಡ್ ಮಾಡಲು ಬ್ಯಾರಿಕೇಡ್ ಕೈ ಬಿಡಲಾಗಿದೆ. 17159 ಕೇಸ್‍ಗಳಲ್ಲಿ ಬ್ಯಾರಿಕೇಡ್ ಮಾಡುತ್ತಿಲ್ಲ. ಮೂರಕ್ಕೂ ಹೆಚ್ಚು ಕೇಸ್‍ಗಳಿರುವ 1015 ಕೇಸ್‍ಗಳಲ್ಲಿ ಮಾತ್ರ ಬ್ಯಾರಿಕೇಡ್ ಮಾಡಲಾಗುತ್ತಿದೆ ಎಂದರು.

ತೀವ್ರ ಜ್ವರ, ಉಸಿರಾಟದ ತೊಂದರೆ, ಅಸ್ತಮಾ ಇರುವವರು ಅವರೇ ಬಂದು ತಪಾಸಣೆ ಮಾಡಿಸಿಕೊಂಡರೆ ಉತ್ತಮ. ಇದರಿಂದ ಕಾಯಿಲೆ ಹರಡುವುದನ್ನು ತಡೆಯಬಹುದು. ಮನೆ ಮುಂದೆ ಬ್ಯಾರಿಕೇಡ್ ಮತ್ತು ಪೋಸ್ಟ್‍ರ್ ಹಾಕುವುದರಿಂದ ಅಕ್ಕ-ಪಕ್ಕದವರು ವಿಚಿತ್ರವಾಗಿ ನೋಡುತ್ತಾರೆ ಎಂಬ ಆರೋಪ ಇತ್ತು. ಪೋಸ್ಟರ್ ಬದಲು ಅಕ್ಕಪಕ್ಕದವರಿಗೆ ಮಾಹಿತಿ ನೀಡುತ್ತೇವೆ ಎಂದರು.

ಸೋಂಕಿತರ ಜತೆ ದ್ವಿತೀಯ ಸಂಪರ್ಕದಲ್ಲಿ ರುವವರನ್ನು ಟೆಸ್ಟ್ ಮಾಡಲಾಗಿದ್ದು, ಅವರಿಗೆ ಪಾಸಿಟಿವ್ ಕಂಡು ಬರುತ್ತಿಲ್ಲ. ಯಾರಿಗೆ ಕಾಯಿಲೆ ಇದೆ ಅವರನ್ನು ಟಾರ್ಗೆಟ್ ಮಾಡಿ ತಪಾಸಣೆ ಮಾಡುತ್ತಿದ್ದೇವೆ. ಅಲ್ಲದೆ, ತೀವ್ರ ಜ್ವರ ಮತ್ತು ಉಸಿರಾಟದ ತೊಂದರೆ ಇರುವವರು, 50 ವರ್ಷ ಮೇಲ್ಪಟ್ಟವರು, ಸೋಂಕಿತರ ಸಂಪರ್ಕದಲ್ಲಿದ್ದವರ ಬಗ್ಗೆ ಸಮೀಕ್ಷೆ ಮಾಡಲಾಗುವುದು, ತಪಾಸಣೆ ಮಾಡಿಸಿಕೊಳ್ಳಬೇಕೆಂಬ ಯಾವ ಒತ್ತಡವನ್ನೂ ಅವರ ಮೇಲೆ ಹೇರುವುದಿಲ್ಲ ಎಂದರು.

ಹೋಮ್ ಐಸೋಲೇಷನ್ ಮಾಡುತ್ತಿರುವುದರಿಂದ ಜನ ಹೆಚ್ಚಾಗಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಆತಂಕದಿಂದ ದೂರವಾಗಿದ್ದಾರೆ. ಕೋವಿಡ್ ಸೆಂಟರ್‍ಗಳಿಗೆ ಹೆಚ್ಚು ಜನ ಬರುತ್ತಿಲ್ಲ. ಹಾಗಾಗಿ ಹಲವು ಕೋವಿಡ್ ಸೆಂಟರ್‍ಗಳನ್ನು ಮುಚ್ಚಲು ತೀರ್ಮಾನಿಸಲಾಗಿದೆ.

ನಿಗದಿತ ರೋಗಿಗಳಿಲ್ಲದ ಕೋವಿಡ್ ಸೆಂಟರ್‍ಗಳನ್ನು ಕ್ಲೋಸ್ ಮಾಡಿ ಅಲ್ಲಿನ ಉಪಯೋಗಿಸದ ಸಲಕರಣೆಗಳನ್ನು ವಿವಿಧ ಆಸ್ಪತ್ರೆಗಳಿಗೆ ಹಾಗೂ ಹಾಸ್ಟೆಲ್‍ಗಳಿಗೆ ಕಳುಹಿಸಿಕೊಡಲಾಗುವುದು ಎಂದು ಆಯುಕ್ತರು ತಿಳಿಸಿದರು. ಕುಶಲ ಆ್ಯಪ್, ಸ್ವಸ್ತ ಯೋಜನೆ ಮೂಲಕ ಟೆಸ್ಟ್ ಮಾಡಿ ಕೇರ್ ಮಾಡಲಾಗುತ್ತಿದೆ. ಬಿಐಇಸಿಯಲ್ಲಿ 6500 ಬೆಡ್ ಇದ್ದು, ವೈದ್ಯರಿಗೆ ಹೊರತುಪಡಿಸಿ 5000 ರೋಗಿಗಳಿಗೆ ಮೀಸಲಿರಿಸಲಾಗಿದೆ.

3500 ಬೆಡ್ ಹಾಸ್ಟೆಲ್, ಬೇರೆ ಬೇರೆ ಕಡೆಯಿಂದ ಕರೆತರಲು ಮೀಸಲಿಡಲಾಗಿದೆ. ಬೇರೆ ಕಡೆ ಬಾಡಿಗೆ ಹೆಚ್ಚಾದ್ದರಿಂದ ಅಲ್ಲಿ ಖಾಲಿ ಮಾಡಲಾಗಿದೆ. 19 ಕೋವಿಡ್ ಆಸ್ಪತ್ರೆಗಳನ್ನು ಗುರುತಿಸಿ 24368 ರೋಗಿಗಳನ್ನು ಅಡ್ಮಿಟ್ ಮಾಡಲಾಗಿತ್ತು. ಶೇ.14.8ರಷ್ಟು ಜನ ಸಾವನ್ನಪ್ಪಿದ್ದಾರೆ ಎಂದು ಆಯುಕ್ತರು ತಿಳಿಸಿದರು.

Facebook Comments