91 ದಿನಗಳ ನಂತರ 50 ಸಾವಿರಕ್ಕಿಂತ ಕಡಿಮೆ ಕೊರೋನಾ ಕೇಸ್ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.22-ದೇಶದಲ್ಲಿ ಕೊರೊನಾ ಸೋಂಕಿತರ ಪ್ರಮಾಣ 50 ಸಾವಿರಕ್ಕೆ ಕುಸಿದಿದೆ.ಕಳೆದ 24 ಗಂಟೆಗಳಲ್ಲಿ ಕೇವಲ 42,640 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 91 ದಿನಗಳ ನಂತರ ದಾಖಲಾದ ಅತಿ ಕಡಿಮೆ ಸೋಂಕು ಪ್ರಕರಣ ಇದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ನಿನ್ನೆಯಿಂದ ಸೋಂಕಿಗೆ 1167 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಮಹಾಮಾರಿಗೆ ಇದುವರೆಗೂ ಬಲಿಯಾದವರ ಒಟ್ಟು ಸಂಖ್ಯೆ ನಾಲ್ಕು ಲಕ್ಷದತ್ತ ಮುಖ ಮಾಡಿದೆ.ನಿನ್ನೆ ಒಂದೇ ದಿನ ದೇಶಾದ್ಯಂತ 86.16 ಲಕ್ಷದಷ್ಟು ಲಸಿಕೆ ಹಾಕಲಾಗಿದ್ದು, ಇದು ಒಂದು ದಿನದಲ್ಲಿ ಹಾಕಲಾದ ಲಸಿಕೆಯಲ್ಲಿ ವಿಶ್ವ ದಾಖಲೆಯಾಗಿರುವುದು ವಿಶೇಷ.

ಕೊರೊನಾ ಚೇತರಿಕೆ ಪ್ರಮಾಣ ಶೇ.96.49ಕ್ಕೆ ಏರಿಕೆಯಾಗಿರುವುದರಿಂದ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 6.62 ಲಕ್ಷಕ್ಕೆ ಕುಸಿದಿದೆ.

Facebook Comments

Sri Raghav

Admin