ಕೊರೋನಾದಿಂದ ಜಾಗತಿಕ ಆರ್ಥಿಕತೆಗೆ 8.8 ಲಕ್ಷ ಕೋಟಿ ಡಾಲರ್ ನಷ್ಟ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 15-ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್‍ನಿಂದ ಜಾಗತಿಕ ಆರ್ಥಿಕತೆಗೆ 8.8 ಲಕ್ಷ ಕೋಟಿ ಡಾಲರ್‍ಗಳಷ್ಟು ಭಾರೀ ಪ್ರಮಾಣದ ನಷ್ಟವಾಗುವ ನಿರೀಕ್ಷೆ ಇದೆ ಎಂದು ಏಷ್ಯನ್ ಡೆವಲವಪ್‍ಮೆಂಟ್ ಬ್ಯಾಂಕ್(ಎಡಿಬಿ) ಹೇಳಿದೆ.

ಆರ್ಥಿಕ ಮುನ್ನೋಟ ಕುರಿತ ತನ್ನ ಹೊಸ ವರದಿಯಲ್ಲಿ ಎಡಿಬಿ ಜಾಗತಿಕ ಆರ್ಥಿಕತೆಯಲ್ಲಿ 5.8 ರಿಂದ 8.8 ಟ್ರಿಲಿಯನ್ (ಲಕ್ಷ ಕೋ) ಡಾಲರ್‍ಗಳಷ್ಟು ಅಪಾರ ನಷ್ಟವಾಗಲಿದೆ ಎಂದು ಅಂದಾಜು ಮಾಡಿದೆ.

ಈ ನಷ್ಟವು ಜಾಗತಿಕ ಜಿಡಿಪಿಯ ಶೇ.6.4 ರಿಂದ ಶೇ.9.7ಕ್ಕೆ ಸಮ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್ ತುಲನೆ ಮಾಡಿದೆ. ಕೊರೊನಾ ವೈರಸ್ ದಾಳಿಯಿಂದಾಗಿ ಏಷ್ಯಾ ಖಂಡದ ಆರ್ಥಿಕತೆ ಮೇಲೆ ಭಾರಿ ದುಷ್ಪರಿಣಾಮ ಉಂಟಾಗಿದೆ.

ದಕ್ಷಿಣ ಏಷ್ಯಾದ ಒಟ್ಟು ಸ್ಥಳೀಯ ಉತ್ಪನ್ನ (ಜಿಡಿಪಿ) 142-218 ಬಿಲಿಯಲ್ (ಶತಕೋಟಿ) ಡಾಲರ್‍ಗಳ ಮೇಲೆ ನಕರಾತ್ಮಕ ಪ್ರಭಾವ ಬೀರಲಿದೆ ಎಂದು ಎಡಿಬಿ ತಿಳಿಸಿದೆ.

ಆದರೆ ದಕ್ಷಿಣ ಏಷ್ಯಾದಲ್ಲಿ ಭಾರತ ಮತ್ತು ಇತರ ದೇಶಗಳು ಅನುಸರಿಸಿದ ಬಿಗಿ ನಿರ್ಬಂಧ ಮತ್ತು ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಜಿಡಿಪಿಯು ಶೇ.3;9 ರಿಂದ ಶೇ.6.0ಕ್ಕೆ ಇಳಿದಿದೆ ಎಂದು ಎಡಿಬಿ ವಿಶ್ಲೇಷಿಸಿದೆ.

Facebook Comments

Sri Raghav

Admin