ಶಾಕಿಂಗ್ : ಕೊರೋನಾ ಸಾವಿನ ಸಂಖ್ಯೆ 3 ಲಕ್ಷಕ್ಕೇರುವ ಭೀತಿ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷ್ಟಿಂಗ್ಟನ್/ರೋಮ್/ಪ್ಯಾರಿಸ್, ಮೇ 9- ಕಿಲ್ಲರ್ ಕೊರೊನಾ ಇಡೀ ವಿಶ್ವವನ್ನು ವ್ಯಾಪಿಸಿದ್ದು, ವಿಷವರ್ತಲ ಆವರಿಸಿದೆ. ಸಾವಿನ ಸಂಖ್ಯೆ 3 ಲಕ್ಷಕ್ಕೇರುವ ಆತಂಕವಿದೆ.

ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಇಡೀ ಜಗತ್ತನಾದ್ಯಂತ ಅಪಾರ ಸಾವು-ನೋವು ಮತ್ತು ಭಾರೀ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿರುವ ವಿನಾಶಕಾರಿ ಕೊರೊನಾ ವೈರಸ್ ದಾಳಿಯಿಂದ ಎಲ್ಲ ರಾಷ್ಟ್ರಗಳು ಕಂಗೆಟ್ಟು ಅಸಹಾಯಕವಾಗಿವೆ.

ಪ್ರಪಂಚದಾದ್ಯಂತ ಈಗಾಗಲೇ ಸುಮಾರು 2.73 ಲಕ್ಷ ಜನರನ್ನು(ನಿನ್ನೆ ರಾತ್ರಿವರೆಗಿನ ಸಾವು : 2,74,898) ನುಂಗಿರುವ ಕೋವಿಡ್-19 ಆರ್ಭಟ ಮತ್ತಷ್ಟು ತೀವ್ರವಾಗಿದೆ.

ನಿನ್ನೆ ಮಧ್ಯರಾತ್ರಿವರೆಗೆ 39,38,064 ಮಂದಿ ಸೋಂಕಿನಿಂದ ಬಳಸುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ನಾಳೆ ವೇಳೆಗೆ ಸಾಂಪ್ರಾಮಿಕ ರೋಗ ಪೀಡಿತರ ಸಂಖ್ಯೆ 40 ಲಕ್ಷ ದಾಟುವ ಆತಂಕವಿದೆ.

ಕೊರೊನಾ ವೈರಸ್‍ಗೆ ಅಂಕುಶ ಹಾಕಲು ವಿಶ್ವದ ಎಲ್ಲ ದೇಶಗಳು ಒಗ್ಗೂಡಿ ಓಡಾಡುತ್ತಿದ್ದರೂ, ಮಹಾಮಾರಿ ರೌದ್ರಾವತಾರ ಯಥಾಸ್ಥಿತಿಯಲ್ಲಿಯೇ ಮುಂದುವರಿದಿದೆ.

ಪ್ರಪಂಚದ 250ಕ್ಕೂ ಹೆಚ್ಚು ದೇಶಗಳು .ಈ ಹೆಮ್ಮಾರಿಯ ಅಟ್ಟಹಾಸಕ್ಕೆ ಕಂಗೆಟ್ಟಿವೆ. ವಿಶ್ವದಾದ್ಯಂತ ವ್ಯಾಪಕ ಸಾವು ಮತ್ತು ಸೋಂಕು ಪ್ರಕರಣಗಳು ಕಳವಳಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದ್ದು, ಮರಣ ಪ್ರಮಾಣ ಮತ್ತಷ್ಟು ವೃದ್ಧಿಯಾಗುವ ಆತಂಕವಿದೆ.

ಈ ನಡುವೆ ಸುಮಾರು 13 ಲಕ್ಷ ಮಂದಿ ಸಾವಿನ ದವಡೆಯಿಂದ ಪಾರಾಗಿದ್ದು ಚೇತರಿಸಿಕೊಳ್ಳುತ್ತಿದ್ಧಾರೆ. ಅಮೆರಿಕ, ಯೂರೋಪ್, ಏಷ್ಯಾ ಮತ್ತು ಆಫ್ರಿಕಾ ಖಂಡಗಳು ಕೊರೊನಾ ದಾಳಿಯಿಂದ ತತ್ತರಿಸುತ್ತಿದ್ದು, ಮುಂದೇನು ಎಂಬ ಪ್ರಶ್ನೆ ಇಡೀ ವಿಶ್ವದ ಜನರ ಕಾಡುತ್ತಿದೆ.

ಈ ಮಧ್ಯೆ ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಅತಂಕವಿದೆ ಎಂದು ವರದಿಯೊಂದು ಹೇಳಿದೆ.

Facebook Comments

Sri Raghav

Admin