ಭಾರತದಲ್ಲಿ ದಿಢೀರ್ ಏರಿಕೆಯಾದ ಕೊರೋನಾ ಸಾವಿನ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜೂ.10-ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದರೂ ಸಾವಿನ ಸಂಖ್ಯೆ ದಿಢೀರ್ ಆರು ಸಾವಿರಕ್ಕೆ ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ಕೆಲವು ದಿನಗಳಿಂದ ಒಂದು ಲಕ್ಷದೊಳಗೆ ದಾಖಲಾಗುತ್ತಿರುವ ಕೊರೊನಾ ಪ್ರಕರಣಗಳ ಸಂಖ್ಯೆ ಇಂದು ಕೂಡ ಮುಂದುವರೆದಿದ್ದು, ನಿನ್ನೆಯಿಂದ 94052 ಮಂದಿಗೆ ಸೋಂಕು ಕಾಣಿಸಿಕೊಂಡಿದೆ.

ಇದರೊಂದಿಗೆ ದೇಶದ ಒಟ್ಟು ಕೊರೊನಾ ಪೀಡಿತರ ಸಂಖ್ಯೆ 2,91 ಕೋಟಿ ಗಡಿ ದಾಟಿದೆ. ಸೋಂಕು ಪ್ರಮಾಣ ಕಡಿಮೆಯಾಗುತ್ತಿದ್ದರೂ ಕಳೆದ 24 ಗಂಟೆಗಳಲ್ಲಿ 6148 ಮಂದಿಯನ್ನು ಮಹಾಮಾರಿ ಬಲಿ ಪಡೆದುಕೊಂಡಿದೆ. ಇದರಿಂದ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 3,59 ಲಕ್ಷದ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಉಲ್ಲೇಖಿಸಿವೆ.

ರಾಷ್ಟ್ರೀಯ ಕೊರೊನಾ ಚೇತರಿಕೆ ಪ್ರಮಾಣ ಶೇ.94.77ಕ್ಕೆ ಹೆಚ್ಚಳಗೊಂಡಿರುವುದರಿಂದ ಸೋಂಕಿತರ ಸಂಖ್ಯೆ ಕ್ಷೀಣಿಸುತ್ತಿದೆ. ಹೀಗಾಗಿ ಸಕ್ರಿಯ ಸೋಂಕು ಪ್ರಕರಣಗಳ ಪ್ರಮಾಣ 11,68 ಲಕ್ಷಕ್ಕೆ ಕುಸಿದಿದೆ.

ದಿನೇ ದಿನೇ ಕೊರೊನಾ ತಪಾಸಣೆ ನಡೆಸುತ್ತಿರುವುದು ಹಾಗೂ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಕೊರೊನಾ ಪಾಸಿಟಿವಿಟಿ ರೇಟ್ ಶೇ.4.69ಕ್ಕೆ ಕುಸಿದಿದ್ದರೆ, ವಾರದ ಪಾಸಿಟಿವಿಟಿ ದರ 5.43ಕ್ಕೆ ಇಳಿದಿರುವುದು ಉತ್ತಮ ಬೆಳವಣಿಗೆಯಾಗಿದೆ.

2.91ಕೋಟಿ ಸೋಂಕಿತರ ಪೈಕಿ ಈಗಾಗಲೇ 2,76 ಕೋಟಿಗೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ. ಆದರೆ, ಮರಣ ಪ್ರಮಾಣ ಶೇ.1.23ಕ್ಕೆ ಏರಿಕೆಯಾಗಿದೆ.

Facebook Comments

Sri Raghav

Admin