ಭಾರತದಲ್ಲಿ ಸತತ 2ನೇ ದಿನ 61,000+ ಕೊರೋನಾ ಕೇಸ್, 24 ಗಂಟೆಯಲ್ಲಿ 933 ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಆ.8-ಭಾರತಕ್ಕೆ ಆಗಸ್ಟ್ ತಿಂಗಳು ಗಂಡಾಂತರಕಾರಿಯಾಗಿ ಪರಿಣಮಿಸಿದ್ದು, ಕಿಲ್ಲರ್ ಕೊರೊನಾ ವೈರಸ್ ರೋಗ ಉಲ್ಬಣದ ಮಹಾ ಸೋಟ ಸಂಭವಿಸಿದೆ.

ಸಾಂಕ್ರಾಮಿಕ ರೋಗದ ಹಿಂದಿನ ದಾಖಲೆಗಳೆಲ್ಲವೂ ಮೊನ್ನೆ ಛಿಧ್ರವಾದ ಬೆನ್ನಲ್ಲೇ ಸತತ ಎರಡನೇ ದಿನ 61,000+ ಹೊಸ ಕೇಸ್‍ಗಳು ವರದಿಯಾಗಿದೆ. 24 ತಾಸುಗಳ ಅವಯಲ್ಲಿ 61,537 ಸೋಂಕು ಪ್ರಕರಣಗಳು ದಾಖಲಾಗಿವೆ. ಮೊನ್ನೆ ಒಂದೇ ದಿನ 62,538 ಪಾಸಿಟಿವ್ ಪ್ರಕರಣ ವರದಿಯಾಗಿರುವುದು ಪರಿಸ್ಥಿತಿಯ ಭೀಕರತೆಗೆ ಸಾಕ್ಷಿಯಾಗಿದೆ.

ದೇಶದಲ್ಲಿ ಸೋಂಕಿತರ ಸಂಖ್ಯೆ 22 ಲಕ್ಷ ಮತ್ತು ಮೃತರ ಸಂಖ್ಯೆ 43,000 ಸನಿಹದಲ್ಲಿರುವುದು ಆತಂಕಕಾರಿ ಸಂಗತಿಯಾಗಿದೆ..
24 ತಾಸುಗಳಲ್ಲಿ 61,537 ಹೊಸ ಸೋಂಕು ಮತ್ತು 933 ಸಾವಿನ ಪ್ರಕರಣಗಳು ವರದಿಯಾಗಿದೆ.

ದೇಶದಲ್ಲಿ ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ವೃದ್ದಿ ಕಂಡುಬಂದಿದ್ದರೂ, ಮತ್ತೊಂದೆಡೆ ಸಕ್ರಿಯ ಪ್ರಕರಣಗಳ ಹೆಚ್ಚಳ ಆತಂಕಕ್ಕೆ ಕಾರಣವಾಗಿದೆ. ಇದರ ನಡುವೆಯೂ 14.27 ಲಕ್ಷಕ್ಕೂ ಹೆಚ್ಚು ಮಂದಿ ಹೆಮ್ಮಾರಿಯ ಸಾವಿನ ಕುಣಿಕೆಯಿಂದ ಪಾರಾಗಿದ್ದು, ಚೇತರಿಕೆ ಪ್ರಮಾಣದಲ್ಲಿ ಶೇ.68.37ರಷ್ಟು ಏರಿಕೆ ಕಂಡುಬಂದಿದೆ.

ನಿನ್ನೆಯಿಂದ ಇಂದು ಬೆಳಗ್ಗೆವರೆಗೆ 61,537 ಜನರಿಗೆ ಸಾಂಕ್ರಾಮಿಕ ರೋಗ ತಗುಲಿದೆ. ದೇಶದಲ್ಲಿ ಸಾಂಕ್ರಾಮಿಕ ರೋಗ ಉಲ್ಬಣಗೊಂಡ ನಂತರ ಇಷ್ಟು ಸಂಖ್ಯೆಯ ಪಾಸಿಟಿವ್ ಪ್ರಕರಣಗಳು ವರದಿಯಾಗಿರುವುದು ಇದು ಸತತ ಎರಡನೇ ದಿನ.
ಸತತ 10 ದಿನಗಳಿಂದ 50,000+ ಹಾಗೂ 17 ದಿವಸಗಳಿಂದಲೂ ನಿರಂತರವಾಗಿ ದೇಶದಲ್ಲಿ ಸೋಂಕಿತರ ಸಂಖ್ಯೆ 45,000+ ಪ್ರಮಾಣದಲ್ಲೇ ಮುಂದುವರಿದಿರುವುದು ಚಿಂತಾಜನಕ ಸಂಗತಿಯಾಗಿದೆ..

24 ತಾಸುಗಳಲ್ಲಿ 933 ಮಂದಿ ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಸಂಖ್ಯೆ 42,518ಕ್ಕೇರಿದೆ.. ಈವರೆಗೆ ಭಾರತದಲ್ಲಿ ರೋಗಪೀಡಿತರ ಪ್ರಮಾಣ 20,68,671 ದಾಟಿರುವುದು ಕಳವಳಕಾರಿ ಸಂಗತಿಯಾಗಿದೆ. ನಾಳೆ ವೇಳೆಗೆ ರೋಗ ಪೀಡಿತರ ಸಂಖ್ಯೆ 22 ಲಕ್ಷ ಮತ್ತು ಮೃತರ ಸಂಖ್ಯೆ 43,000 ದಾಟಲಿದೆ..

ದೇಶದಲ್ಲಿ ಈಗ 6,19,088 ಆಕ್ಟಿವ್ ಕೇಸ್‍ಗಳಿದ್ದು, 14,27,005 ರೋಗಿಗಳು ಚೇತರಿಸಿಕೊಂಡು, ಗುಣಮುಖರಾಗಿದ್ದಾರೆ. ಚೇತರಿಕೆ ಪ್ರಮಾಣ ಶೇ.68.37 ಮತ್ತು ಸಾವಿನ ಪ್ರಮಾಣ ಶೇ.2.06ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ಅಕ ಸಂಖ್ಯೆಯಲ್ಲಿ ವರದಿಯಾಗುತ್ತಲೇ ಇವೆ.

ದೇಶದಲ್ಲಿ ಈಗಾಗಲೇ ಕೊರೊನಾ ಸೋಂಕಿನ ಅಲ್ಪ ಮತ್ತು ಲಘು ಲಕ್ಷಣ ಇರುವ ರೋಗಿಗಳಿಗಾಗಿ ಕೆಲವು ಮಾತ್ರೆಗಳನ್ನು ಬಿಡುಗಡೆ ಮಾಡಲಾಗಿದ್ದು, ಪ್ರಬಲ ಲಸಿಕೆ ಅಭಿವೃದ್ದಿಗೊಳಿಸುವ ಕಾರ್ಯ ಮುಂದುವರಿದಿದ್ದು, ಶೀಘ್ರದಲ್ಲಿ ಅದು ಲಭ್ಯವಾಗುವ ನಿರೀಕ್ಷೆ ಇದೆ.

ದೇಶದ ವಿವಿಧ ರಾಜ್ಯಗಳಲ್ಲಿ ನಿನ್ನೆ ಒಂದೇ ದಿನ 5,98,278 ಜನರ ಸ್ಯಾಂಪಲ್‍ಗಳನ್ನು ಪರೀಕ್ಷಿಸಲಾಗಿದ್ದು, ಈವರೆಗೆ 2,33,87,171 ಜನರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.

Facebook Comments

Sri Raghav

Admin