ಭಾರತದಲ್ಲಿ 12 ಲಕ್ಷದತ್ತ ಕೊರೋನಾ ಸೋಂಕಿತರ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.22- ದೇಶದಲ್ಲಿ 37,724 ಹೊಸ ಸೋಂಕು ಪ್ರಕರಣಗಳಿಂದ ಕೊರೊನಾ ಪೀಡಿತರ ಸಂಖ್ಯೆ 12 ಲಕ್ಷದತ್ತ ಮುಖ ಮಾಡಿದೆ. ಇದರ ಬೆನ್ನಲ್ಲೆ ಒಂದೇ ದಿನದಲ್ಲಿ 28,472 ಮಂದಿ ಗುಣಮುಖರಾಗಿ ಮನೆಗೆ ತೆರಳಿರುವುದು ದಾಖಲೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ಸೋಂಕಿಗೆ 648 ಮಂದಿ ಬಲಿಯಾಗಿದ್ದು, ಸತ್ತವರ ಸಂಖ್ಯೆ 28, 732ಕ್ಕೆ ಏರಿಕೆಯಾಗಿದೆ.

11, 92,915 ಸೋಂಕಿತರ ಪೈಕಿ 7,53,049 ಗುಣಮುಖರಾಗಿದ್ದಾರೆ.4,11,133 ಮಂದಿ ದೇಶದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರ್ನಾಟಕದಲ್ಲಿ 61, ಮಹಾರಾಷ್ಟ್ರದಲ್ಲಿ 246, ತಮಿಳುನಾಡಿನಲ್ಲಿ 75, ಆಂಧ್ರದಲ್ಲಿ 62 ಮಂದಿ ಸೇರಿದಂತೆ ಕಳೆದ 24 ಗಂಟೆಗಳಲ್ಲಿ 648 ಮಂದಿ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ

Facebook Comments

Sri Raghav

Admin