ಭಾರತದಲ್ಲಿ ಒಂದೇ ದಿನ 14.92 ಲಕ್ಷ ಸ್ಯಾಂಪಲ್ಸ್ ಟೆಸ್ಟ್, 86,052 ಮಂದಿಗೆ ಪಾಸಿಟಿವ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಸೆ.25- ಕಿಲ್ಲರ್ ಕೋವಿಡ್-19 ವೈರಸ್ ಹಾವಳಿಯ ಅಲ್ಪ ಇಳಿಕೆ ಮುಂದುವರಿದಿದ್ದು, ಸತತ ಏಳನೇ ದಿನ ಹೊಸ ಪ್ರಕರಣಗಳಿಗಿಂತ ಚೇತರಿಕೆ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ.  ಒಂದೇ ದಿನ ಮತ್ತೆ86,052 (ಮೊನ್ನೆ86,508) ಮಂದಿಗೆ ಸೋಂಕು ತಗಲಿದ್ದು, ಒಟ್ಟು ರೋಗಿಗಳ ಸಂಖ್ಯೆ 59 ಲಕ್ಷ ಸನಿಹದಲ್ಲಿದೆ.

ಇದೇ ವೇಳೆ ಸಾವಿನ ಪ್ರಮಾಣದಲ್ಲಿಯೂಅಲ್ಪಏರಿಕೆ ಗೋಚರಿಸಿದೆ. ಒಂದೇ ದಿನ 1,141(ಮೊನ್ನೆ1,129)ರೋಗಿಗಳನ್ನು ಕೊರೊನಾ ಮಹಾಮಾರಿ ಬಲಿ ತೆಗೆದುಕೊಂಡಿದೆ. ಸತತ21ನೇ ದಿನ 1,000ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಇದರೊಂದಿಗೆ ದೇಶದಲ್ಲಿ ಮೃತರ ಸಂಖ್ಯೆ 92,000 ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಭಾರತದಲ್ಲಿಎರಡು ವಾರಗಳ ಬಳಿಕ ಸೋಂಕಿತರ ಸಂಖ್ಯೆಸೋಮವಾರದಿಂದ ಇಳಿಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಆದಾಗ್ಯೂ, ನಿನ್ನೆ ಮತ್ತೆ86,052 ಜನರಲ್ಲಿ ಪಾಸಿಟಿವ್ ದೃಢಪಟ್ಟಿದ್ದುಒಟ್ಟು ರೋಗಿಗಳ ಸಂಖ್ಯೆ58,18,570ಕ್ಕೇರಿದ್ದು, ನಾಳೆ ವೇಳೆಗೆ59 ಲಕ್ಷದಾಟಲಿದೆ.

ಆಗಸ್ಟ್ 7ರಂದು 20 ಲಕ್ಷಇದ್ದ ಪಾಸಿಟಿವ್ ಪ್ರಕರಣಗಳು ಆ.23ಕ್ಕೆ 30 ಲಕ್ಷಕ್ಕೇರಿತ್ತು. ನಂತರ ಸೆಪ್ಟೆಂಬರ್ 5ರಂದು 40 ಲಕ್ಷದಾಟಿತ್ತು. ಕೇವಲ 11 ದಿನಗಳಲ್ಲಿ ಅಂದರೆ ಸೆ.16ರಂದು 50 ಲಕ್ಷದಾಟಿದೆ. ನಾಳೆ 60 ಲಕ್ಷ ಮೀರಲಿದೆ. ಇದರ ನಡುವೆಯೂಚೇತರಿಕೆ ಪ್ರಮಾಣದಲ್ಲಿ ಶೇ.81.74ರಷ್ಟು ವೃದ್ದಿ ಕಂಡುಬಂದಿದ್ದು, ಈವರೆಗೆದೇಶದಲ್ಲಿಸುಮಾರು6.89 ಕೋಟಿಜನರ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ದೇಶದಲ್ಲಿಒಂದೆಡೆಚೇತರಿಕೆಪ್ರಮಾಣದಲ್ಲಿ ವೃದ್ದಿ ಕಂಡುಬಂದಿದ್ದೂ, ಮತ್ತೊಂದೆಡೆ9.70ಲಕ್ಷಸಕ್ರಿಯ ಕೇಸ್‍ಗಳೊಂದಿಗೆ ಪಾಸಿಟಿವ್ ಪ್ರಕರಣಗಳಲ್ಲಿ ಏರಿಳಿತ ಮುಂದುವರಿದಿದೆ. ಏತನ್ಮಧ್ಯೆ, 47.56ಲಕ್ಷ ಮಂದಿ ಹೆಮ್ಮಾರಿಯಬಿಗಿಹಿಡಿತದಿಂದ ಪಾರಾಗಿದ್ದಾರೆ.  ದೇಶದಲ್ಲಿಈಗ 9,70,716ಆಕ್ಟಿವ್ ಕೇಸ್‍ಗಳಿವೆ.47,56,167ಮಂದಿ ಚೇತರಿಸಿಕೊಂಡಿದ್ದು, ಗುಣಮುಖ ಪ್ರಕರಣ ಶೇ.81.74ಕ್ಕೇರಿದ್ದು, ಮರಣ ಪ್ರಮಾಣ ಶೇ.1.59 ಕ್ಕೆ ಇಳಿದಿದೆ.

ಸಕ್ರಿಯ ಪ್ರಕರಣಗಳಿಗೆ ಹೋಲಿಸಿದಲ್ಲಿ, ರಿಕವರಿ ರೇಟ್‍ನಲ್ಲಿನಾಲ್ಕು ಪಟ್ಟುಗಳಿಗಿಂತಲೂ ಅಕ ಹೆಚ್ಚಳ ಕಂಡುಬಂದಿರುವುದು ಸಮಾಧಾನಕರ ಸಂಗತಿ. ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳುವರದಿಯಾಗುತ್ತಲೇ ಇವೆ. ಮಹಾರಾಷ್ಟ್ರ ರಾಜ್ಯವು ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ.

ದೇಶದಾದ್ಯಂತ ನಿನ್ನೆಒಂದೇ ದಿನ ಅತ್ಯಂತ ದಾಖಲೆ ಪ್ರಮಾಣದಲ್ಲಿಅಂದರೆ 14,92,409ಲಕ್ಷಕ್ಕೂ ಹೆಚ್ಚುಜನರ ಸ್ಯಾಂಪಲ್‍ಗಳನ್ನು ಪರೀಕ್ಷಿಸಲಾಗಿದ್ದು, ಈವರೆಗೆ6,89,28,440ಕೋಟಿಗೂಅಕಜನರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.

Facebook Comments

Sri Raghav

Admin