ಕೊರೋನಾ ಸೋಂಕಿನಲ್ಲಿ ಏಷ್ಯಾದಲ್ಲೇ ಭಾರತ ನಂ.1..!
ನವದೆಹಲಿ,ಆ.28- ಭಾರತ ಏಷ್ಯಾದಲ್ಲೇ ಕೋವಿಡ್ ಪ್ರಕರಣಗಳ ಅತಿದೊಡ್ಡ ಕೇಂದ್ರಬಿಂದುವಾಗಿದೆ. ದೇಶದಲ್ಲಿ ಕೋವಿಡ್ ಪಾಸಿಟವ್ ಸಂಖ್ಯೆ 33.10 ಲಕ್ಷ ದಾಟಿದ್ದು, ಈ ಮೂಲಕ ವಿಶ್ವದ ಮೂರನೇ ಅತಿ ಹೆಚ್ಚು ಕೊರೊನಾವೈರಸ್ ಪ್ರಕರಣಗಳನ್ನು ಹೊಂದಿರುವ ರಾಷ್ಟ್ರವಾಗಿದೆ.
ಕಳೆದ 10 ದಿನಗಳಿಂದ ಭಾರತದಲ್ಲಿ ಪ್ರತಿದಿನ 55,000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಆಗಸ್ಟ್ 27 ರಂದು, ಭಾರತವು ಅತಿ ಹೆಚ್ಚು ಏಕದಿನ ಏರಿಕೆ ಕಂಡಿದ್ದು, 75,760 ಹೊಸ ಪ್ರಕರಣಗಳು ವರದಿಯಾಗಿವೆ.
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ನಿನ್ನೆಯವರೆಗೆ(ಆ.27) ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 33,10,234 ಆಗಿದ್ದು, ಈ ಪೈಕಿ 60,472 ಮಂದಿ ಸಾವನ್ನಪ್ಪಿದ್ದು, 25,23,771 ಚೇತರಿಕೆ ಕಂಡಿದ್ದಾರೆ.
ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಆಂಧ್ರಪ್ರದೇಶ ಮತ್ತು ಕರ್ನಾಟಕವು ಕೋವಿಡ್ -19 ಪ್ರಕರಣಗಳ ಹಾಟ್ಸ್ಪಾಟ್ಗಳಾಗಿವೆ. ಮಹಾರಾಷ್ಟ್ರ, ತಮಿಳುನಾಡು, ದೆಹಲಿ ಮತ್ತು ಕರ್ನಾಟಕ ಸಹ ಅತಿ ಹೆಚ್ಚು ಕೋವಿಡ್ ಸಾವು ಪ್ರಕರಣಗಳು ವರದಿಯಾಗಿದ್ದು, ದೇಶದಲ್ಲಿ ಶೇ.65 ಕ್ಕಿಂತ ಹೆಚ್ಚು ಕೋವಿಡ್ ಸಾವು ಸಂಭವಿಸಿದೆ.