ಕೊರೊನಾ ಕೇಕೆ : 24 ಗಂಟೆಯಲ್ಲಿ 1.15ಲಕ್ಷ ಮಂದಿಗೆ ಪಾಸಿಟಿವ್, 630 ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಏ.7-ಒಂದೇ ದಿನದಲ್ಲಿ 1.15 ಲಕ್ಷ ಮಂದಿಗೆ ಸೋಂಕು ಕಾಣಿಸಿಕೊಳ್ಳುವ ಮೂಲಕ ಕೊರೊನಾ ಮತ್ತೊಂದು ದಾಖಲೆ ಬರೆದಿದೆ.ದಿನೇ ದಿನೇ ಭಾರತದಲ್ಲಿ ಸೋಂಕಿತರ ಪ್ರಮಾಣ ಗಣನೀಯವಾಗಿ ಏರಿಕೆ ಕಾಣುತ್ತಿರುವುದು ಆತಂಕಕಾರಿಯಾಗಿದೆ.

ಕಳೆದ 24 ಗಂಟೆಗಳಲ್ಲಿ 1,15,736 ಮಂದಿಗೆ ಸೋಂಕು ಕಾಣಿಸಿಕೊಂಡಿರುವುದರಿಂದ ಕೊರೊನಾ ಪೀಡಿತರ ಸಂಖ್ಯೆ 1,28,01,785ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಉಲ್ಲೇಖಿಸಿವೆ.

ಸೋಂಕು ಏರಿಕೆಯಂತೆ ಸಾವಿನ ಪ್ರಮಾಣದಲ್ಲೂ ಹೆಚ್ಚಳವಾಗಿದ್ದು, 24 ಗಂಟೆಗಳಲ್ಲಿ 630 ಮಂದಿ ಸೋಂಕಿಗೆ ಬಲಿಯಾಗಿದ್ದು ಒಟ್ಟಾರೆ ಸಾವಿನ ಪ್ರಮಾಣ 1,66,177ರಷ್ಟು ಹೆಚ್ಚಳವಾಗಿದೆ.ಸಕ್ರಿಯ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದರಿಂದ ಚೇತರಿಕೆ ಪ್ರಮಾಣ 92.11ಕ್ಕೆ ಕುಸಿದಿದೆ.

ದೇಶದಲ್ಲಿಇದುವರೆಗೂ 1,17,92,135 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕಳೆದ ನವಂಬರ್‍ನಲ್ಲಿ 90 ಲಕ್ಷ ಮಂದಿಗೆ ಸೋಂಕು ಕಾಣಿಸಿಕೊಂಡಿತ್ತು. ಆ ನಂತರ ಸೋಂಕಿನ ಪ್ರಮಾಣ ಇಳಿಕೆಯತ್ತ ಸಾಗಿತ್ತು.

ಮೂರು ದಿನಗಳ ಹಿಂದೆ ಮೊದಲ ಬಾರಿಗೆ ಸೋಂಕಿತರ ಸಂಖ್ಯೆ ಒಂದು ಲಕ್ಷದ ಗಡಿ ದಾಟಿತ್ತು. ಇದೀಗ ಒಂದೇ ದಿನ 1.15 ಲಕ್ಷ ಮಂದಿಗೆ ಸೋಂಕು ಕಾಣಿಸಿಕೊಂಡಿದೆ.

Facebook Comments

Sri Raghav

Admin