ಭಾರತದಲ್ಲಿ ಒಂದೇ ದಿನ 62 ಬಲಿ : ಸಾವಿರ ಸನಿಹದಲ್ಲಿ ಸಾವಿನಸಂಖ್ಯೆ, 30 ಸಾವಿರದತ್ತ ಸೋಂಕಿತರು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ,ಏ.28- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ ಹೆಮ್ಮಾರಿಯನ್ನು ನಿಗ್ರಹಿಸಲು ಕಳೆದ 34 ದಿನಗಳಿಂದಲೂ ನಿರಂತರ ಹೋರಾಟ ನಡೆಸುತ್ತಿದ್ದರೂ, ವೈರಸ್ ಹಾವಳಿ ನಿಯಂತ್ರಣಕ್ಕೆ ಬರುತ್ತಿಲ್ಲ. ಬದಲಿಗೆ ದಿನನಿತ್ಯ ಸಾವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಲೇ ಇವೆ.

ವೈರಸ್ ರಣಕೇಕೆ ಭಾರತದಲ್ಲಿ ಕಳವಳಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದ್ದು, ನಿನ್ನೆ ಒಂದೇ ದಿನ ದಾಖಲೆ ಪ್ರಮಾಣದಲ್ಲಿ 62 ಮಂದಿಯನ್ನು ಮಹಾಮಾರಿ ನುಂಗಿದೆ. ಅಲ್ಲದೇ 2,000ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿರುವುದು ಆತಂಕ್ಕೀಡು ಮಾಡಿದೆ.

ಕಳೆದ 24 ತಾಸುಗಳ ಅವಧಿಯಲ್ಲಿ ದೇಶದ ವಿವಿಧೆಡೆ ಒಟ್ಟು 62 ಮಂದಿಯನ್ನು ಕೊರೊನಾ ಬಲಿ ಪಡೆದಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಭಾರತದಲ್ಲಿ ಮೃತರ ಸಂಖ್ಯೆ1,000 ಸನಿಹಕ್ಕೆ ತಲುಪುತ್ತಿರುವುದು ಆತಂಕ ಕಾರಿಯಾಗಿದೆ. ಮತ್ತೊಂದಡೆ ಸೋಂಕು ಪೀಡಿತರ ಸಂಖ್ಯೆಯೂ ಸಹ 30,000ಕ್ಕೆ ತೀರಾ ಹತ್ತಿರದಲ್ಲಿದೆ.

ಪ್ರತಿದಿನ ದೇಶದಲ್ಲಿ ಸರಾಸರಿ 45 ಮಂದಿ ಸಾವಿಗೀಡಾಗುತ್ತಿದೆ. ಸೋಂಕಿತರ ಹೆಚ್ಚಳವೂ ಕೂಡ ಸರಾಸರಿ 1,800ರ ಪ್ರಮಾಣದಲ್ಲಿದೆ. ಅಧಿಕೃತ ವರದಿ ಪ್ರಕಾರ, ಡೆಡ್ಲಿ ವೈರಸ್ ಈವರೆಗೆ ದೇಶಾದ್ಯಂತ 934 ಜನರನ್ನು ಬಲಿ ಪಡೆದಿದ್ದು, ಸೋಂಕಿತರ ಸಂಖ್ಯೆ29,436ಕ್ಕೇರಿದೆ.

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು, 21,632ರಷ್ಟಿದೆ (ನಿನ್ನೆ ಪ್ರಮಾಣ 20,835). ಈ ಮಧ್ಯೆ, ಈವರೆಗೆ 6,868 ಮಂದಿ ಗುಣಮುಖರಾಗಿ ಮನೆಗಳಿಗೆ ಮರಳಿದ್ದಾರೆ. ದೇಶದಲ್ಲಿ ವೈರಾಣು ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ವೃದ್ದಿ ಕಂಡುಬಂದಿರುವುದು ಸಮಾಧಾನಕರ ಸಂಗತಿಯಾದರೂ, ಮತ್ತೊಂದಡೆ ಸೋಂಕು ಮತ್ತು ಸಾವು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ.

ಇಂದು ಬೆಳಗ್ಗೆಯೂ ಕೆಲವು ರಾಜ್ಯಗಳಲ್ಲಿ ಸಾವು ಪ್ರಕರಣಗಳು ವರದಿಯಾಗಿದೆ. ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ತಾನ, ಆಂಧ್ರಪ್ರದೇಶ, ಒಡಿಶಾ, ಬಿಹಾರ ಮತ್ತಿತರ ರಾಜ್ಯಗಳಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಕಳೆದ 24 ತಾಸುಗಳ ಅವಧಿಯಲ್ಲಿ ಒಟ್ಟು 62 ಮಂದಿಯನ್ನು ಕೊರೊನಾ ಬಲಿ ಪಡೆದಿದೆ. ಮಹಾರಾಷ್ರ್ಟ್ರ, ಗುಜರಾತ್, ರಾಜಸ್ತಾನ, ಮಧ್ಯಪ್ರದೇಶ ಮತ್ತು ಜಮ್ಮು-ಕಾಶ್ಮೀರ ರಾಜ್ಯಗಳಲ್ಲಿ ಸಾವುಗಳು ವರದಿಯಾಗಿವೆ. ಈವರೆಗೆ ಸಂಭವಿಸಿರುವ 934ಸಾವು ಪ್ರಕರಣಗಳಲ್ಲಿ, ಮಹಾರಾಷ್ಟ್ರ ಎಂದಿನಂತೆ ಪ್ರಥಮ ಸ್ಥಾನದಲ್ಲಿದೆ. ಆ ರಾಜ್ಯದಲಿ ್ಲಒಟ್ಟು 369 ಸಾವುಗಳು ವರದಿಯಾಗಿವೆ.

ನಂತರದ ಸ್ಥಾನಗಳಲ್ಲಿ ಗುಜರಾತ್ (162), ಮಧ್ಯಪ್ರದೇಶ (110),ದೆಹಲಿ (54),ರಾಜಸ್ತಾನ (46), ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶ (ತಲಾ 31), ತೆಲಂಗಾಣ(26), ತಮಿಳುನಾಡು (24), ಪಶ್ಚಿಮ ಬಂಗಾಳ(20), ಕರ್ನಾಟಕ (19),ಹಾಗೂ ಪಂಜಾಬ್ (18)ರಾಜ್ಯಗಳಿವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಆರು,ಕೇರಳದಲ್ಲಿ ನಾಲ್ಕು, ಜಾರ್ಖಂಡ್ ಮತ್ತು ಹರಿಯಾಣತಲಾ ಮೂರು, ಬಿಹಾರ ಎರಡು, ಮೇಘಾಲಯ, ಹಿಮಾಚಲ ಪ್ರದೇಶ, ಒಡಿಶಾ ಮತ್ತುಅಸ್ಸಾಂ ರಾಜ್ಯಗಳಲ್ಲಿ ತಲಾ ಒಂದೊಂದು ಸಾವುಗಳು ವರದಿಯಾಗಿವೆ.

ಮತ್ತೊಂದು ಮೂಲಗಳ ಪ್ರಕಾರ ಈವರೆಗೆ ದೇಶದ ವಿವಿಧೆಡೆ 884 ಸಾವುಗಳು ಸಂಭವಿಸಿವೆ.  ಇನ್ನು ಹಲವು ರಾಜ್ಯಗಳಲ್ಲಿ ಕಳೆದ 12 ತಾಸುಗಳ ಅವಧಿಯಲ್ಲಿ ಹೊಸ ಸೋಂಕು ಮತ್ತು ಸಾವು ಪ್ರಕರಣಗಳು ವರದಿಯಾಗುತ್ತಿರುವುದು ಕಳವಳಕಾರಿಯಾಗಿದೆ.

Facebook Comments

Sri Raghav

Admin