ದೇಶದಾದ್ಯಂತ ಕಳೆದ 24 ಗಂಟೆಯಲ್ಲಿ 78,524 ಮಂದಿಗೆ ಕೊರೋನಾ, 971 ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಅ.8- ಡೆಡ್ಲಿ ಕೊರೊನಾ ವೈರಸ್ ಅಬ್ಬರದ ಏರಿಳಿತ ಮುಂದುವರಿದಿದೆ. ಸತತ ಐದು ದಿನಗಳ ಇಳಿಮುಖದ ನಂತರ ಮತ್ತೆ ಎರಡನೆ ದಿನ ಹೊಸ ಪಾಸಿಟಿವ್ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ. ಮೂರು ದಿನಗಳ ಹಿಂದೆ 61,000+ಗೆ ಇಳಿದು ಕಿಲ್ಲರ್ ಪಿಡುಗು ನಿಯಂತ್ರಣದ ಮುನ್ಸೂಚನೆಯ ಆಶಾಭಾವ ಮೂಡಿತ್ತು. ಆದರೆ, ಮೊನ್ನೆಯಿಂದ ಮತ್ತೆ ವೈರಸ್ ಆರ್ಭಟ ಏರುಗತಿಯತ್ತ ಸಾಗಿದೆ. ನಿನ್ನೆ ಮತ್ತೆ ಹೊಸ ಕೇಸ್‍ಗಳಲ್ಲಿ ಏರಿಕೆಯಾಗಿದ್ದು, 78,500ಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿದೆ. ಇದೇ ವೇಳೆ ಸತತ 18 ದಿನಗಳಿಂದ ಸಕ್ರಿಯ ಪ್ರಕರಣಗಳೂ ಸಹ ಕ್ಷೀಣಿಸುತ್ತಿರುವುದು ಇನ್ನೊಂದೆಡೆ ಆಶಾದಾಯಕ ಬೆಳವಣಿಗೆಯಾಗಿದೆ.

ಇವುಗಳ ನಡುವೆಯೂ ದೇಶದಲ್ಲಿ ಸೋಂಕಿತರ ಪ್ರಮಾಣ 69 ಲಕ್ಷ ಸನಿಹ ಮತ್ತು ಮೃತರ ಸಂಖ್ಯೆ 1.05 ಲಕ್ಷ ದಾಟಿದ್ದು, ಜನರು ಕೊರೊನಾ ಮಹಾಮಾರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಆರು ದಿನಗಳ ಹಿಂದೆ ವೈರಸ್ ಸೋಂಕು ಪ್ರಕರಣಗಳಲ್ಲಿ ಏರಿಕೆ ಕಂಡುಬಂದ ಬೆನ್ನಲ್ಲೇ ಗುರುವಾರದಿಂದ ಸೋಮವಾರದವರೆಗೆ ಪಾಸಿಟಿವ್ ಕೇಸ್‍ನಲ್ಲಿ ಇಳಿಮುಖ ಮುಂದುವರಿದಿತ್ತು. ಮಂಗಳವಾರದಿಂದ ಮತ್ತೆ ಏರಿಕೆಯಾಗುತ್ತಿರುವುದು ಆತಂಕದ ಸಂಗತಿಯಾಗಿದೆ.

ನಿನ್ನೆ 78,524 ಪ್ರಕರಣಗಳು ವರದಿಯಾಗಿದೆ. ಮಂಗಳವಾರ ಮತ್ತು ಸೋಮವಾರ ಅನುಕ್ರಮವಾಗಿ 72,069 ಮತ್ತು 74,442ರಷ್ಟಿತ್ತು. ಇದರೊಂದಿಗೆ ಸತತ ಐದು ದಿನಗಳ ಇಳಿಕೆ ನಂತರ ಹೊಸ ಸೋಂಕು ಪ್ರಕರಣಗಳ ಏರಿಕೆ ಮುಂದುವರಿದಂತಾಗಿದೆ. ಈವರೆಗೆ ಗುಣಮುಖರಾದ ಸೋಂಕಿತರ ಸಂಖ್ಯೆ 59 ಲಕ್ಷ ಸನಿಹದಲ್ಲಿದೆ.  ದೇಶದಲ್ಲಿ ಸೋಂಕಿತರ ಸಂಖ್ಯೆ 68.35 ಲಕ್ಷ ಮೀರಿದ್ದು, ಈವರೆಗೆ 58.27 ಲಕ್ಷಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ.

ನಿನ್ನೆ ಒಂದೇ ದಿನ 78,524 ಹೆಚ್ಚು ಮಂದಿಗೆ ಸೋಂಕು ತಗುಲಿದ್ದು, ಮೊನ್ನೆಗೆ ಹೋಲಿಸಿದರೆ ಸುಮಾರು 6,500 ಪ್ರಕರಣಗಳು ಏರಿಕೆಯಾಗಿವೆ. ಒಟ್ಟು ರೋಗಿಗಳ ಸಂಖ್ಯೆ 69 ಲಕ್ಷ ಸನಿಹದಲ್ಲಿದೆ. ಇದೇ ವೇಳೆ ಸಾವಿನ ಪ್ರಮಾಣದಲ್ಲಿ ಅಲ್ಪ ಇಳಿಕೆ ಕಂಡುಬಂದಿದೆ. ಒಂದೇ ದಿನ 971 (ಮೊನ್ನೆ 986) ರೋಗಿಗಳನ್ನು ಕೊರೊನಾ ಮಹಾಮಾರಿ ಬಲಿ ತೆಗೆದುಕೊಂಡಿದೆ. ಇದರೊಂದಿಗೆ ದೇಶದಲ್ಲಿ ಮೃತರ ಸಂಖ್ಯೆ 1,05,526 ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಭಾರತದಲ್ಲಿ ಒಟ್ಟು ರೋಗಿಗಳ ಸಂಖ್ಯೆ 68,35,655ಕ್ಕೇರಿದ್ದು, ನಾಳೆ ವೇಳೆಗೆ 69 ಲಕ್ಷ ದಾಟಲಿದೆ. ಆ.7ರಂದು 20 ಲಕ್ಷ ಇದ್ದ ಪಾಸಿಟಿವ್ ಪ್ರಕರಣಗಳು ಆ.23ಕ್ಕೆ 30 ಲಕ್ಷಕ್ಕೇರಿತ್ತು. ನಂತರ ಸೆ.5ರಂದು 40 ಲಕ್ಷ ದಾಟಿತ್ತು. ಕೇವಲ 11 ದಿನಗಳಲ್ಲಿ ಅಂದರೆ ಸೆ.16ರಂದು 50 ಲಕ್ಷ ದಾಟಿದೆ. ಸೆ.28ರಂದು 60 ಲಕ್ಷ ಮೀರಿದೆ.

ರೋಗಿಗಳ ಚೇತರಿಕೆ ಪ್ರಮಾಣ ಶೇ.85.25ರಷ್ಟು ವೃದ್ದಿ ಕಂಡುಬಂದಿದೆ. ಕಳೆದ 18 ದಿನಗಳಿಂದಲೂ ಹೊಸ ಸಕ್ರಿಯ ಪ್ರಕರಣಗಳಲ್ಲಿ ನಿರಂತರ ಇಳಿಕೆ ಕಂಡುಬಂದಿದ್ದು, 10 ಲಕ್ಷ ಪ್ರಮಾಣಕ್ಕಿಂತಲೂ ಕಡಿಮೆ ವರದಿಯಾಗಿದ್ದು, ದಿನೇ ದಿನೇ ಇದು ಕ್ಷೀಣಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಈವರೆಗೆ ದೇಶದಲ್ಲಿ 8.34 ಕೋಟಿಗೂ ಅಕ ಜನರ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಇನ್ನೂ 9.02 ಲಕ್ಷ ಸಕ್ರಿಯ ಕೇಸ್‍ಗಳೊಂದಿಗೆ ಪಾಸಿಟಿವ್ ಪ್ರಕರಣಗಳೊಂದಿಗೆ ಇಳಿಮುಖ ಮುಂದುವರಿದಿದೆ. ಏತನ್ಮಧ್ಯೆ, 58.27 ಲಕ್ಷ ಮಂದಿ ಹೆಮ್ಮಾರಿಯ ಬಿಗಿಹಿಡಿತದಿಂದ ಪಾರಾಗಿದ್ದಾರೆ. ದೇಶದಲ್ಲಿ ಈಗ 9,02,425 ಆಕ್ಟಿವ್ ಕೇಸ್‍ಗಳಿವೆ 58,27,704 ಮಂದಿ ಚೇತರಿಸಿಕೊಂಡಿದ್ದು, ಗುಣಮುಖ ಪ್ರಕರಣ ಶೇ.85.25ಕ್ಕೇರಿದ್ದು, ಮರಣ ಪ್ರಮಾಣ ಶೇ.1.54ಕ್ಕೆ ಇಳಿದಿದೆ.

ಸಕ್ರಿಯ ಪ್ರಕರಣಗಳಿಗೆ ಹೋಲಿಸಿದಲ್ಲಿ, ರಿಕವರಿ ರೇಟ್‍ನಲ್ಲಿ ನಾಲ್ಕು ಪಟ್ಟುಗಳಿಗಿಂತಲೂ ಅಕ ಹೆಚ್ಚಳ ಕಂಡುಬಂದಿರುವುದು ಸಮಾಧಾನಕರ ಸಂಗತಿ. ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ. ಮಹಾರಾಷ್ಟ್ರ ರಾಜ್ಯವು ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ.

ದೇಶದಾದ್ಯಂತ ನಿನ್ನೆ ಒಂದೇ ದಿನ ಸುಮಾರು 11.94 ಲಕ್ಷ ಜನರ ಸ್ಯಾಂಪಲ್‍ಗಳನ್ನು ಪರೀಕ್ಷಿಸಲಾಗಿದ್ದು, ಈವರೆಗೆ 8.34
ಕೋಟಿಗೂ ಅಕ ಮಂದಿಯ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.

Facebook Comments

Sri Raghav

Admin