ಭಾರತದಲ್ಲಿ ಕೊರೋನಾ16 ಕ್ಕೇರಿಕೆ, 600 ದಾಟಿದ ಸೋಂಕಿತರ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಮಾ.26-ಭಾರತದಲ್ಲಿಕೊರೊನಾ ವೈರಸ್‍ರೌದ್ರಾವತಾರ ಮತ್ತಷ್ಟುತೀವ್ರಗೊಂಡಿದ್ದು, ಈವರೆಗೆ 16 ಜನರನ್ನು ಬಲಿ ತೆಗೆದುಕೊಂಡಿದೆ. ಗುಜರಾತ್ ಜಮ್ಮು-ಕಾಶ್ಮೀರz ಮತ್ತು ಮಹರಾಷ್ಟ್ರದಲ್ಲಿ ಮೂವರುಮೃತಪಟ್ಟಿದ್ದು, ಸತ್ತವರ ಸಂಖ್ಯೆ 16ಕ್ಕೇರಿದೆ.ಕಠಿಣ ಮುನ್ನೆಚ್ಚರಿಕೆ ಕ್ರಮಗಳ ನಡುವೆಯೂಕೊರೊನಾವೈರಾಣು ಸೋಂಕಿನ ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, ಈವರೆಗೆ626ಜನರು ಬಾಧಿತರಾಗಿರುವುದುದೃಢಪಟ್ಟಿದೆ.

ಸೌದಿ ಅರೇಬಿಯಾದಿಂದಗುಜರಾತ್‍ಗೆ ಹಿಂದಿರುಗಿದ್ದ65 ವರ್ಷ ವಯಸ್ಸಿನ ಮಹಿಳೆಯೊಬ್ಬರು ಇಂದು ಮುಂಜಾನೆ ವೈರಾಣು ಸೋಂಕಿನಿಂದ ಮೃತಪಟ್ಟಿದ್ದರೆ. ಅತ್ತಜಮ್ಮು ಮತ್ತು ಕಾಶ್ಮೀರದಲ್ಲಿ ಶ್ರೀನಗರದ ಹೈದರ್‍ಪೋರಾದ 65 ವರ್ಷದ ವೃದ್ದರೊಬ್ಬರನ್ನುಕೊರೊನಾ ಬಲಿ ತೆಗೆದುಕೊಂಡಿದೆ. ಇದು ಕಾಶ್ಮೀರ ಪ್ರಾಂತ್ಯದಲ್ಲಿ ಸಂಭವಿಸಿದ ಕೋವಿಡ್-19 ಸೋಂಕಿನ ಪ್ರಥಮ ಸಾವಿನ ಪ್ರಕರಣವಾಗಿದೆ.

ಮಹಾರಾಷ್ಟ್ರದಲ್ಲಿ ನವಿ ಮುಂಬೈನಲ್ಲಿಇತ್ತೀಚೆಗೆ ಮೃತಪಟ್ಟ ಮಹಿಳೆಯೊಬ್ಬರ ಮೃತದೇಹವನ್ನು ಪರೀಕ್ಷಿಸಿದ ನಂತರ ಆಕೆ ವೈರಾಣು ಸೋಂಕಿನಿಂದ ಮೃತಪಟ್ಟಿರುವುದುದೃಢಪಟ್ಟಿದೆ. ಇದರೊಂದಿಗೆ ಮಹಾರಾಷ್ಟ್ರದಲ್ಲಿಒಟ್ಟು ನಾಲ್ವರನ್ನು ಈ ಹೆಮ್ಮಾರಿ ಬಲಿ ತೆಗೆದುಕೊಂಡಿದೆ. ದೇಶದಲ್ಲೇಅತಿ ಹೆಚ್ಚು ಸೋಂಕು ಪೀಡಿತರಿರುವ ಮಹಾರಾಷ್ಟ್ರದಲ್ಲಿಇನ್ನೆರಡು ಹೊಸ ಪ್ರಕರಣಗಳು ದೃಢಪಟ್ಟಿದ್ದು, ಪೀಡಿತರ ಸಂಖ್ಯೆ126ಕ್ಕೇರಿದೆ.. ಈಗಾಗಲೇ ಕರ್ನಾಟಕ, ಪಶ್ಚಿಮಬಂಗಾಳ, ಹಿಮಾಚಲ ಪ್ರದೇಶ ಮತ್ತುಇನ್ನು ಕೆಲವು ರಾಜ್ಯಗಳಲ್ಲಿ ಸಾವುಗಳು ಸಂಭವಿಸಿದೆ.

ಮತ್ತೊಂದುಆತಂಕಕಾರಿ ಸಂಗತಿಎಂದರೆ ತಮಿಳುನಾಡಿನಲ್ಲಿ ಮತ್ತೆ 8 ಮಂದಿಗೆ ಸೋಂಕು ತಗುಲಿರುವುದುದೃಢಪಟ್ಟಿದೆ. ದೇಶದಲ್ಲಿ 625ಕ್ಕೂ ಹೆಚ್ಚು ಮಂದಿ ಸೋಂಕು ಪೀಡಿತರಾಗಿದ್ದು, ಅವರಿಗೆಚಿಕಿತ್ಸೆ ಮುಂದುವರಿಸಲಾಗಿದೆಎಂದುಆರೋಗ್ಯ ಸಚಿವಾಲಯದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇಶದ ಅನೇಕ ರಾಜ್ಯಗಳಲ್ಲಿ ಕೊರೊನಾಕಾಟತೀವ್ರಗೊಂಡಿರುವುದರಿಂದಇಡೀ ಭಾರತವೇಕಫ್ರ್ಯೂ ಮಾದರಿಯ ನಿರ್ಬಂಧಕ್ಕೆ ಒಳಗಾಗಿವೆ.21 ದಿನಗಳ ಲಾಕ್‍ಔಟ್‍ಎರಡನೇ ದಿನ ದೇಶಾದ್ಯಂತಜನಜೀವನಅಯೋಮಯವಾಗಿದೆ.

Facebook Comments

Sri Raghav

Admin