ಮಹಾರಾಷ್ಟ್ರ 65,000 ಸಾವಿರ ಮಂದಿಗೆ ಕೊರೋನಾ, 2,197ಕ್ಕೇರಿದ ಸಾವಿನ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಮೇ 31- ಭಾರತದಲ್ಲಿಡೆಡ್ಲಿಕೊರೊನಾ ವೈರಸ್ ಅಬ್ಬರಿಸಿ ಬೊಬ್ಬಿರಿಯುತ್ತಿದ್ದು, ಸೋಂಕು ಮತ್ತು ಸಾವು ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚುತ್ತಿದೆ.

ಸಾವು ಮತ್ತು ಸೋಂಕು ಪ್ರಮಾಣದಲ್ಲಿ ಮಹಾರಾಷ್ಟ್ರಯಥಾಪ್ರಕಾರ ಪಟ್ಟಿಯಲ್ಲಿಒಂದನೇ ಸ್ಥಾನದಲ್ಲಿ ಮುಂದುವರಿದಿದೆ. ಆ ರಾಜ್ಯದಲ್ಲಿ ಸಾವಿನ ಸಂಖ್ಯೆ 2,197ಕ್ಕೇರಿದ್ದು, 65,124 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ.

ಸಾವಿನ ಸಂಖ್ಯೆಯ ಪಟ್ಟಿಯಲ್ಲಿಗುಜರಾತ್‍ಎರಡನೇ ಸ್ಥಾನದಲ್ಲಿದ್ದು, ಸೋಂಕು ಪ್ರಕರಣಗಳಲ್ಲಿಯೂ ಹೆಚ್ಚಳ ಕಂಡುಬಂದಿದೆ. ಗಾಂದಿ ನಾಡಿನಲ್ಲಿ ಮೃತರ ಸಂಖ್ಯೆ 1,007ಕ್ಕೇರಿದ್ದು, 16,343 ಜನರಿಗೆ ಸೋಂಕು ತಗುಲಿದೆ. ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ತಮಿಳುನಾಡು ಎರಡನೇ ಸ್ಥಾನದಲ್ಲಿದ್ದು 21,184 ಮಂದಿ ರೋಗಪೀಡಿತರಾಗಿದ್ದಾರೆ.

# ಡೆತ್‍ ರೋಪೋರ್ಟ್ :
ಈವರೆಗೆ ಸಂಭವಿಸಿರುವ 5,166 ಸಾವು ಪ್ರಕರಣಗಳಲ್ಲಿ, ಮಹಾರಾಷ್ಟ್ರ ಎಂದಿನಂತೆ ಪ್ರಥಮ ಸ್ಥಾನದಲ್ಲಿಯೇ ಮುಂದುವರಿದಿದೆ. ಆ ರಾಜ್ಯದಲ್ಲಿ ಸಾವಿನ ಸಂಖ್ಯೆ 2,000 ದಾಟಿದೆ. ಈವರೆಗೆ 2,197 ಮಂದಿ ಸಾವಿಗೀಡಾಗಿದ್ದು, ಎರಡನೇ ಸ್ಥಾನದಲ್ಲಿರುವ ಗುಜರಾತ್‍ನಲ್ಲಿ 1,007 ಸಾವುಗಳು ಸಂಭವಿಸಿವೆ.

ನಂತರದ ಸ್ಥಾನಗಳಲ್ಲಿ ದೆಹಲಿ (416), ಮಧ್ಯಪ್ರದೇಶ (343), ಪಶ್ಚಿಮ ಬಂಗಾಳ (309), ಉತ್ತರ ಪ್ರದೇಶ (201), ರಾಜಸ್ಥಾನ (193), ತಮಿಳುನಾಡು (160), ತೆಲಂಗಾಣ (77), ಆಂಧ್ರಪ್ರದೇಶ (60), ಕರ್ನಾಟಕ(48), ಹಾಗೂ ಪಂಜಾಬ್ (44) ರಾಜ್ಯಗಳಿವೆ.

ಜಮ್ಮು-ಕಾಶ್ಮೀರ 28, ಹರಿಯಾಣ ಮತ್ತು ಬಿಹಾರತಲಾ 20, ಕೇರಳ 9, ಒಡಿಶಾ ಏಳು, ಹಿಮಾಚಲ ಪ್ರದೇಶ, ಜಾರ್ಖಂಡ್ ಮತ್ತುಉತ್ತರಾಖಂಡ ತಲಾ 5, ಅಸ್ಸಾಂ ಮತ್ತುಚಂಡಿಗಢ ತಲಾ ನಾಲ್ಕು, ಹಾಗೂ ಪುದುಚೇರಿ, ಛತ್ತೀಸ್‍ಗಢ ಮತ್ತು ಮೇಘಾಲಯ ರಾಜ್ಯಗಳಲ್ಲಿ ತಲಾ ಒಂದೊಂದು ಸಾವುಗಳು ವರದಿಯಾಗಿವೆ.

Facebook Comments

Sri Raghav

Admin