ಅಮೇರಿಕಾದಲ್ಲಿ ಕೊರೋನಾ ರುದ್ರನರ್ತನ, 97,647 ಸಾವು, 16.45 ಲಕ್ಷ ಮಂದಿಗೆ ಸೋಂಕು..!

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್/ವಾಷಿಂಗ್ಟನ್, ಮೇ 23- ಕಿಲ್ಲರ್ ಕೊರೊನಾ ವೈರಸ್ ದಾಳಿಯಿಂದ ತತ್ತರಿಸುತ್ತಿರುವ ಅಮೆರಿಕದಲ್ಲಿ ಮೃತರ ಸಂಖ್ಯೆ 97,647ಕ್ಕೇರಿದೆ. ವಿಶ್ವ ಸೂಪರ್‍ಪವರ್ ದೇಶದಲ್ಲಿ ಸಾವಿನ ಪ್ರಮಾಣ ಲಕ್ಷ ದಾಟುವ ಆತಂಕವಿದೆ.

ಅಮೆರಿಕದಲ್ಲಿ ಪ್ರತಿದಿನ 1500ಕ್ಕೂ ಹೆಚ್ಚು ಮಂದಿ ಸಾವಿಗೀಡಾಗುತ್ತಿದ್ದು, ಸೋಂಕಿನ ಪ್ರಮಾಣದಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಪ್ರತಿದಿನ ಸುಮಾರು 15 ಸಾವಿರ ಮಂದಿಗೆ ಸಾಂಕ್ರಾಮಿಕ ರೋಗ ತಗುಲುತ್ತಿರುವುದು ಕಳವಳಕಾರಿಯಾಗಿದೆ.

ಮಹಾಶಕ್ತಿಶಾಲಿ ರಾಷ್ಟ್ರದಲ್ಲಿ ಈವರೆಗೆ 97,647 ಮಂದಿ ಮೃತಪಟ್ಟಿದ್ದು, 16,45,094 ಮಂದಿ ಸಾಂಕ್ರಾಮಿಕ ರೋಗ ಪೀಡಿತರಾಗಿದ್ದಾರೆ. ಇವರಲ್ಲಿ 17,000ಕ್ಕೂ ಹೆಚ್ಚು ಮಂದಿಯ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ನ್ಯೂಯಾರ್ಕ್, ನ್ಯೂ ಜೆರ್ಸಿ, ಇಲಿನೋಯ್ಸ್, ಮಸ್ಸಾಚುಸೆಟ್ಸ್, ಕ್ಯಾಲಿಫೋರ್ನಿಯಾ ನಗರಗಳಲ್ಲಿ ಅತಿ ಹೆಚ್ಚು ಸೋಂಕು ಮತ್ತು ಸಾವು ಪ್ರಕರಣಗಳು ವರದಿಯಾಗಿದೆ.ಇನ್ನೆರಡು ದಿನಗಳಲ್ಲಿ ಅಮೆರಿಕದಲ್ಲಿ ಸಾವಿನ ಸಂಖ್ಯೆ ಒಂದು ಲಕ್ಷಕ್ಕೇರುವ ಆತಂಕವಿದೆ.

ಅಮೆರಿಕ ನಂತರ ಬ್ರೆಜಿಲ್ ಎರಡನೇ ಸ್ಥಾನದಲ್ಲಿದ್ದು, ಅಲ್ಲಿ 21,000 ಮಂದಿ ಮೃತಪಟ್ಟಿದ್ದು, 3.31 ಲಕ್ಷ ಜನರು ರೋಗ ಪೀಡಿತರಾಗಿದ್ದಾರೆ.

Facebook Comments

Sri Raghav

Admin