ಕಳೆದ 24 ಗಂಟೆಯಲ್ಲಿ ದೇಶದಾದ್ಯಂತ 86,821 ಮಂದಿಗೆ ಕೊರೋನಾ, 1181 ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಅ.1- ಕಿಲ್ಲರ್ ಕೋವಿಡ್-19 ಆರ್ಭಟದ ಏರಿಳಿತದ ಆಟ ಮುಂದುವರಿದಿದ್ದು, ಜನರು ಭಯಾಂತಕದಲ್ಲೇ ದಿನ ದೂಡುವಂತಾಗಿದೆ. ಎರಡು ದಿನಗಳ ಹಿಂದೆ ವೈರಸ್ ಸೋಂಕು ಪ್ರಕರಣಗಳಲ್ಲಿ ಗಮನಾರ್ಹ ಇಳಿಕೆ ಕಂಡು ಬಂದ ಬೆನ್ನಲ್ಲೇ ನಿನ್ನೆ ಮತ್ತೆ ಪಾಸಿಟಿವ್ ಕೇಸ್‍ನಲ್ಲಿ ಹೆಚ್ಚಳ ವರದಿಯಾಗಿದೆ.

ಇನ್ನೊಂದೆಡೆ ಚೇತರಿಕೆ ಪ್ರಮಾಣದಲ್ಲಿ ವೃದ್ಧಿಯೂ ಮುಂದುವರಿದಿದೆ. ಇದು ಜನತೆಯಲ್ಲಿ ಕೊಂಚ ಸಮಾಧಾನಕ್ಕೆ ಕಾರಣವಾಗಿದೆ. ಬಹುದಿನಗಳ ಏರಿಕೆ ನಂತರ ಇದೇ ಮೊದಲ ಬಾರಿ ªರಡು ದಇನಗಳ ಹಿಂದೆ ಪಾಸಿಟಿವ್ ಪ್ರಕರಣದಲ್ಲಿ 77,600ಕ್ಕೆ ಇಳಿದಿತ್ತು. ಆದರೆ ನಿನ್ನೆ ಮತ್ತೆ 86,821ಕ್ಕೇರಿದೆ.

ಮಂಗಳವಾರ ದೇಶದಲ್ಲಿ 80,472 ಪ್ರಕರಣಗಳು ವರದಿಯಾಗಿತ್ತು.. ಸಾವಿನ ಪ್ರಮಾಣದಲ್ಲಿಯೂ ಪುನಃ ಹೆಚ್ಚಳ ಕಂಡು ಬಂದಿದೆ. ಭಾರತದಲ್ಲಿ ಈವರೆಗೆ ಡೆಡ್ಲಿ ಸಾಂಕ್ರಾಮಿಕ ರೋಗಕ್ಕೆ ಬಲಿಯಾದವರ ಸಂಖ್ಯೆ 1 ಲಕ್ಷ ಸನಿಹದಲ್ಲಿದೆ.
ಈವರೆಗೆ ಗುಣಮುಖರಾದ ಸೋಂಕಿತರ ಸಂಖ್ಯೆ 53 ಲಕ್ಷ ಸನಿಹದಲ್ಲಿದೆ..

ದೇಶದಲ್ಲಿ ಸೋಂಕಿತರ ಸಂಖ್ಯೆ 63.12 ಲಕ್ಷ ಮೀರಿದ್ದು, ಈವರೆಗೆ 52.73 ಲಕ್ಷಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ. ಕೋವಿಡ್-18 ವೈರಾಣುವಿನ ಏರಿಳಿತದ ನಡುವೆ ನಿನ್ನೆ ಹೊಸ ಕೇಸ್‍ಗಳು ಮತ್ತೆ ಹೆಚ್ಚಿವೆ. ಒಂದೇ ದಿನ 86,820ಕ್ಕೂ ಹೆಚ್ಚು ಮಂದಿಗೆ ಸೋಂಕು ತಗಲಿದ್ದು, ಮೊನ್ನೆಗೆ ಹೋಲಿಸಿದರೆ ಸುಮಾರು 6,000ಕ್ಕೂ ಹೆಚ್ಚು ಪ್ರಕರಣಗಳು ಹೆಚ್ಚಾಗಿವೆ. ಒಟ್ಟು ರೋಗಿಗಳ ಸಂಖ್ಯೆ 64 ಲಕ್ಷ ಸನಿಹದಲ್ಲಿದೆ.

ಇದೇ ವೇಳೆ ಸಾವಿನ ಪ್ರಮಾಣದಲ್ಲಿಯೂ ಅಲ್ಪ ಏರಿಕೆ ವರದಿಯಾಗಿದೆ. ಒಂದೇ ದಿನ 1,181 (ಮೊನ್ನೆ 1,179) ರೋಗಿಗಳನ್ನು ಕೊರೊನಾ ಮಹಾಮಾರಿ ಬಲಿ ತೆಗೆದುಕೊಂಡಿದೆ. ಇದರೊಂದಿಗೆ ದೇಶದಲ್ಲಿ ಮೃತರ ¸ಂಖ್ಯೆ 98,678 ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಭಾರತದಲ್ಲಿ ಒಟ್ಟು ರೋಗಿಗಳ ಸಂಖ್ಯೆ 63,12,584ೀರಿದ್ದು, ನಾಳೆ ವೇಳೆಗೆ 64 ಲಕ್ಷ ದಾಟಲಿದೆ. ಆಗಸ್ಟ್ 7ರಂದು 20 ಲಕ್ಷ ಇದ್ದ ಪಾಸಿಟಿವ್ ಪ್ರಕರಣಗಳು ಆ.23ಕ್ಕೆ 30 ಲಕ್ಷಕ್ಕೇರಿತ್ತು. ನಂತರ ಸೆಪ್ಟೆಂಬರ್ 5ರಂದು 40 ಲಕ್ಷ ದಾಟಿತ್ತು. ಕೇವಲ 11 ದಿನಗಳಲ್ಲಿ ಅಂದರೆ ಸೆ.16ರಂದು 50 ಲಕ್ಷ ದಾಟಿದೆ. ಸೆ.28ರಂದು 60 ಲಕ್ಷ ಮೀರಿದೆ.

ಚೇತರಿಕೆ ಪ್ರಮಾಣದಲ್ಲಿ ಶೇ. 83.53ರಷ್ಟು ವೃದ್ದಿ ಕಂಡುಬಂದಿದೆ. ಕಳೆದ 14 ದಿನಗಳ ಅವಯಲ್ಲಿ 11 ಲಕ್ಷಕ್ಕೂ ಅಕ ಮಂದಿ ಆಸ್ಪತ್ರೆಗಳಿಂದ ಡಿಸ್‍ಚಾರ್ಜ್ ಆಗಿದ್ದಾರೆ. ಈವರೆಗೆ ದೇಶದಲ್ಲಿ ಸುಮಾರು 7.56 ಕೋಟಿ ಜನರ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ದೇಶದಲ್ಲಿ ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ವೃದ್ದಿ ಕಂಡುಬಂದಿದ್ದೂ, 9.40 ಲಕ್ಷ ಸಕ್ರಿಯ ಕೇಸ್‍ಗಳೊಂದಿಗೆ ಪಾಸಿಟಿವ್ ಪ್ರಕರಣಗಳಲ್ಲಿ ಏರಿಳಿತ ಮುಂದುವರಿದಿದೆ. ಏತನ್ಮಧ್ಯೆ, 52.73 ಲಕ್ಷ ಮಂದಿ ಹೆಮ್ಮಾರಿಯ ಬಿಗಿ ಹಿಡಿತದಿಂದ ಪಾರಾಗಿದ್ದಾರೆ.

ದೇಶದಲ್ಲಿ ಈಗ 9,40,705 ಆಕ್ಟಿವ್ ಕೇಸ್‍ಗಳಿವೆ. 52,73,584 ಮಂದಿ ಚೇತರಿಸಿಕೊಂಡಿದ್ದು, ಗುಣಮುಖ ಪ್ರಕರಣ ಶೇ.83.53ಕ್ಕೇರಿದ್ದು, ಮರಣ ಪ್ರಮಾಣ ಶೇ.1.56ಕ್ಕೆ ಇಳಿದಿದೆ. ಸಕ್ರಿಯ ಪ್ರಕರಣಗಳಿಗೆ ಹೋಲಿಸಿದಲ್ಲಿ, ರಿಕವರಿ ರೇಟ್‍ನಲ್ಲಿ ನಾಲ್ಕು ಪಟ್ಟುಗಳಿಗಿಂತಲೂ ಅಕ ಹೆಚ್ಚಳ ಕಂಡುಬಂದಿರುವುದು ಸಮಾಧಾನಕರ ಸಂಗತಿ.

ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ. ಮಹಾರಾಷ್ಟ್ರ ರಾಜ್ಯವು ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ.

ದೇಶದಾದ್ಯಂತ ನಿನ್ನೆ ಒಂದೇ ದಿನ ಅತ್ಯಕ ಪ್ರಮಾಣದಲ್ಲಿ ಅಂದರೆ 14,23,050 ಲಕ್ಷಕ್ಕೂ ಹೆಚ್ಚು ಜನರ ಸ್ಯಾಂಪಲ್‍ಗಳನ್ನು ಪರೀಕ್ಷಿಸಲಾಗಿದ್ದು, ಈವರೆಗೆ 7.56 ಕೋಟಿಗೂ ಅಕ ಜನರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.

Facebook Comments

Sri Raghav

Admin