ವಿಶ್ವದಾದ್ಯಂತ ರಣಕೇಕೆ ಹಾಕುತ್ತಿದೆ ಕಿಲ್ಲರ್ ಕೊರೋನಾ, 1 ಲಕ್ಷದ ಸನಿಹದಲ್ಲಿ ಸಾವಿನ ಸಂಖ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್/ಮಿಲಾನ್/ಮ್ಯಾಡ್ರಿಡ್, ಏ.10= ಇಡೀ ಜಗತ್ತಿಗೆ ಸವಾಲು ಹಾಕಿರುವ ಕಿಲ್ಲರ್ ಕೊರೊನಾ ಕ್ರೌರ್ಯ ಮುಂದುವರಿದಿದೆ. ತನ್ನ ಕಬಂಧಬಾಹುಗಳನ್ನು ಮತ್ತಷ್ಟು ಬಿಗಿಗೊಳಿಸಿರುವ ಕೋವಿಡ್-19ಗೆ ಜಗತ್ತಿನ 215ಕ್ಕೂ ಹೆಚ್ಚು ರಾಷ್ಟ್ರಗಳು ನಲುಗಿವೆ.

ವಿಶ್ವದಾದ್ಯಂತ ಈವರೆಗೆ ಸುಮಾರು 96,000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 19 ಲಕ್ಷ ಸನಿಹದಲ್ಲಿದೆ.
ಸೋಂಕು ಹತೋಟಿಗೆ ಬಾರದಿದ್ದರೆ ಮುಂದಿನ ಎರಡು ದಿನಗಳಲ್ಲಿ ಸಾವಿನ ಸಂಖ್ಯೆ 1 ಲಕ್ಷ ಮತ್ತು ಸೋಂಕಿತರ ಸಂಖ್ಯೆ 20 ಲಕ್ಷ ದಾಟುವ ಗಂಡಾಂತರವಿದೆ.

ಕೊರೊನಾ ದಾಳಿಯಿಂಧ ಅಮೆರಿಕ ಹೆದರಿ ಕಂಗಲಾಗಿದೆ. ಅಲ್ಲಿ ಈವರೆಗೆ ಸುಮಾರು 16,000 ಮಂದಿಯನ್ನು ಕಿಲ್ಲರ್ ವೈರಸ್ ಬಲಿ ತೆಗೆದುಕೊಂಡಿದೆ. ಇಟಲಿ, ಸ್ಪೇನ್, ಜರ್ಮನಿ, ಮತ್ತು ಇಂಗ್ಗೆಂಡ್ ದೇಶಗಳಲ್ಲೂ ಅಪಾರ ಸಾವು-ನೋವುಗಳಿಗೆ ಕಾರಣವಾಗಿದೆ.

ಹೊಸ ದೇಶಗಳಿಗೂ ಸೋಂಕು ವ್ಯಾಪಿಸಿದೆ. ಯೆಮೆನ್‍ನಲ್ಲಿ ಮೊದಲ ಕೊರೊನಾ ಬಲಿ ವರದಿಯಾಗಿದೆ. ಚೀನಾದಲ್ಲೂ ಮತ್ತೆ ಹೊಸ ಪ್ರಕರಣಗಳು ಪತ್ತೆಯಾಗಿವೆ. ಪಾಕಿಸ್ತಾನದಲ್ಲಿ ಕೋವಿಡ್-19 ವೈರಸ್‍ಗೆ ಈಗಾಗಲೇ 70 ಮಂದು ಅಸುನೀಗಿದ್ದು, ಸೋಂಕಿತರ ಸಂಖ್ಯೆ 5,000ಕ್ಕೇರಿದೆ.

ಸಾಂಕ್ರಾಮಿಕ ಪೀಡೆಯಿಂದ ಬಾಧಿತರಾಗಿರುವ ಲಕ್ಷಾಂತರ ಜನರಲ್ಲಿ ಸಹಸ್ರಾರು ಜನರ ಸ್ಥಿತಿ ಚಿಂತಾಜನಕವಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಕೊರೊನಾ ಹಾವಳಿಯಿಂದ ಅಮೆರಿಕ ಮತ್ತು ಯೂರೋಪ್ ದೇಶಗಳೂ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಭಾರೀ ಆರ್ಥಿಕ ಹೊಡತ ಬಿದ್ದಿದ್ದು, ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡು ಪರಿತಪಿಸುತ್ತಿದ್ಧಾರೆ.

Facebook Comments

Sri Raghav

Admin