ಕೊರೊನಾ ಪ್ರಕರಣಗಳು ಅತಿ ಕಡಿಮೆ ದಾಖಲಾದ ತಿಂಗಳು ನವೆಂಬರ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.1- 3.1ಕ್ಕೂ ಅಧಿಕ ಕೋವಿಡ್-19 ಪ್ರಕರಣಗಳೊಂದಿಗೆ ನವೆಂಬರ್ ತಿಂಗಳು ಕಳೆದ ವರ್ಷದ ಮೇನಿಂದ ಇಲ್ಲಿಯವರೆಗೆ ಈ ವೈರಸ್ ಸೋಂಕಿತರ ಪ್ರಮಾಣ ಅತಿ ಕಡಿಮೆ ದಾಖಲಿಸಿರುವ ತಿಂಗಳೆನಿಸಿದೆ. ಹೊಸ ಕೋವಿಡ್-19 ಪ್ರಕರಣಗಳ ಮಾಸಿಕ ಪ್ರಮಾಣ ನವೆಂಬರ್‍ನಲ್ಲಿ ಸತತ ಆರನೇ ಬಾರಿ ಇಳಿಮುಖವಾಗಿವೆ.

ಮೇ 6 ರಂದು 24 ಗಂಟೆಗಳ ಅವಧಿಯಲ್ಲಿ ದೇಶವು 4,14,188 ಕೋವಿಡ್ ಪ್ರಕರಣಗಳನ್ನು ದಾಖಲಿಸಿದ್ದು , ದೈನಂದಿನ ಪ್ರಕರಣಗಳ ಸಂಖ್ಯೆ ಪರಾಕಾಷ್ಠೆ ತಲುಪಿತ್ತು. ಸಕ್ರಿಯ ಪ್ರಕರಣಗಳ ಸಂಖ್ಯೆ 547 ದಿನಗಳ ಬಳಿಕ ಒಂದು ಲಕ್ಷಕ್ಕಿಂತ ಕಡಿಮೆ ದಾಖಲಾಗಿದೆ. 54 ನೇರ ದಿನಗಳಲ್ಲಿ ನೂತನ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಏರಿಕೆ 20,000 ಕ್ಕಿಂತ ಕಡಿಮೆ ಮತ್ತು ಸತತ 156 ದಿನಗಳಿಂದ ದೈನಿಕ ನೂತನ ಪ್ರಕರಣಗಳ ಸಂಖ್ಯೆ 50,000ಕ್ಕಿಂತ ಕಡಿಮೆ ದಾಖಲಾಗಿದೆ.

ದೇಶದ ಪ್ರಥಮ ಕೊರೊನಾ ಸೋಂಕಿನ ಪಾಸಿಟಿವ್ ಪ್ರಕರಣ 2020ರ ಜನವರಿ 30ರಂದು ಕೇರಳದಲ್ಲಿ ವರದಿಯಾಗಿತ್ತು. ಭಾರತದ ಕೋವಿಡ್-19ರ ಪ್ರಕರಣಗಳು 2020ರ ಆಗಸ್ಟ್ 7ರಂದು 20 ಲಕ್ಷ ದಾಟಿತ್ತು, ಆಗಸ್ಟ್ 23ರಂದು 30 ಲಕ್ಷ, ಸೆಪ್ಟೆಂಬರ್ 5ರಂದು 50 ಲಕ್ಷ, ಸೆಪ್ಟೆಂಬರ್ 16ರಂದು 50 ಲಕ್ಷ, ಸೆಪ್ಟೆಂಬರ್ 28ರಂದು 60 ಲಕ್ಷ, ಅಕ್ಟೋಬರ್ 11ರಂದು 70 ಲಕ್ಷ, ಅಕ್ಟೋಬರ್ 29ರಂದು 80 ಲಕ್ಷ, ನವೆಂಬರ್ 20ರಂದು 90 ಲಕ್ಷ ಮತ್ತು ಡಿಸೆಂಬರ್ 19ರಂದು ಒಂದು ಕೋಟಿಯ ಗಡಿ ದಾಟಿತ್ತು.

ಈ ವರ್ಷದ ಮೇ 4ರಂದು ದೇಶವು ಎರಡು ಕೋಟಿ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಮೈಲಿಗಲ್ಲು ದಾಟಿತ್ತು ಮತ್ತು ಜೂನ್ 23ರಂದು ಮೂರು ಕೋಟಿ ಪ್ರಕರಣ ತಲುಪಿತ್ತು.

Facebook Comments