ಅನ್ನದಾತರಿಗೆ ಪೆಟ್ಟುಕೊಟ್ಟ ಕರೋನಾ : ಬೆಳೆಗೆ ಬೆಲೆ ಸಿಗದೆ ತರಕಾರಿ, ಹೂ ನಾಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು.ಮೇ.7. ಜಮೀನಿನಲ್ಲಿ ಬೆಳೆದು ನಿಂತ ಫಸಲು.ಕೊಳ್ಳೊರಿಲ್ಲ.ಕಷ್ಟಪಟ್ಟು ಬೆಳೆದ ಬೆಳೆ ಕಣ್ಣ ಮುಂದೆ ನೆಲ ಕಚ್ಚುತ್ತಿದೆ ಹಾಳಾದ್ ಕರೋನಾ ಅನ್ನದಾತರ ಬೆವರಿಗೆ ತಣ್ಣಿರೆರಚಿದೆ. ಮಹಾಮಾರಿ ಕರೋನಾ ರಾಜ್ಯಾದ್ಯಂತ ಶರವೆಗದಲ್ಲಿ ಪಸರಿಸುತ್ತಾ.ಮರಣ ಮೃದಂಗ ಬಾರಿಸುತ್ತಿದೆ ನಿಯಂತ್ರಣಕ್ಕಾಗಿ ಜನತಾ ಕಫ್ಯೂ ಜಾರಿಯಲ್ಲಿದೆ.

ಅಗತ್ಯವಸ್ತು ಎಂದು ಹೆಳಲಾಗುವ ತರಕಾರಿ ಮಾರುಕಟ್ಟೆಗೆ ಸಾಗಿಸಲು ವಾಹನ ಸೌಲಭ್ಯವಿಲ್ಲ ಮಾರುಕಟ್ಟೆಗೆ ತೆಗೆದು ಕೊಂಡು ಹೊದರೂ ಬೆಲೆ ಇಲ್ಲ ಕೊಳ್ಳೋವವರೆ ಇಲ್ಲ ಇದರಿಂದ ಅನ್ನದಾತನ ಬದುಕು ಹೆಳತಿರದಾಗಿದೆ. ಮಹಾಮಾರಿ ಹೊಗಿದೆ ಅಂತಾ ಸಾಲ ಸೋಲ ಮಾಡಿ ಬೆಳೆ ಬೆಳೆದೆ ಆದರೆ ಮತ್ತೆ ವಕ್ಕರಿಸಿ ನಮ್ಮಂತ ಅನ್ನದಾತರನ್ನು ಮತ್ತಷ್ಟು ಸಾಲದ ಸುಳಿಗೆ ದೂಡಿದೆ.ಮೊದಲೆ.ವಿದ್ಯುತ್ .ಕೂಲಿಕಾರ್ಮಿಕರ ಸಮಸ್ಯೆ.

ರಸಗೊಬ್ಬರ.ಭಿತ್ತನೆ ಬೀಜದ ಬೆಲೆ ಏರಿಕೆ ಇದರ ನಡುವೆ ಶ್ರಮವಹಿಸಿ ಬೆಳೆದ ಬೆಳೆ ಕಣ್ಣಮುಂದೆಯೇ ನಾಶವಾಗುತ್ತಿರುವುದನ್ನು ನೊಡಿದರೆ ಕರುಳು ಕಿವುಚಿದಂತಾಗುತ್ತದೆ.ರಾಮನಗರ ಜಿಲ್ಲೆಯ ರೈತರೋಬ್ಬರು ತಮ್ಮ ಅಳಲು ತೊಡಿಕೊಂಡಿದ್ದಾರೆ.

ಹಲವಾರು ಸಮಸ್ಯೆಗಳನ್ನು ಎದುರಿಸಿ ಬೆಳೆ ಬೆಳೆದರೂ ಬೆಲೆ ಸಿಕ್ತಾಇಲ್ಲ.ರಾಮನಗರದ ಬಳಿ ಟಮ್ಯಾಟೊಗೆ ಬೆಲೆ ಸಿಗದೆ ರಸ್ತೆ ಬದಿ ಸುರಿದು ಹೊಗಿದ್ದಾರೆ ಅವರು ಎರಡು ಮೂರು ಮಾರುಕಟ್ಟೆ ಅಲೆದಿದ್ದು.ಕೊಳ್ಳುವವರಿಲ್ಲದೆ ಹಾಗೂ ಬೆಲೆ ಇಲ್ಲದೆ ಮನನೊಂದು ರಸ್ತೆ ಬದಿ ಸುರಿದು ಹೊಗಿದ್ದಾರೆ.

ಇನ್ನೂ ಕೆಲ ರೈತರು ಬೆಳೆಯನ್ನು ಮಾರುಕಟ್ಟೆ ಗೆ ಸಾಗಿಸಲು ವಾಹನ ಸೌಲಭ್ಯವಿಲ್ಲದೆ ಹಾಗೂ ಬೆಳೆ ಕಠಾವಿಗೆ ಕೂಲಿ ಕೆಲಸಗಾರರು ಸಿಗದೆ ಜಾನುವಾರುಗಳನ್ನು ಬಿಟ್ಟು ಮೆಯಿಸುತ್ತಿದ್ದಾರೆ.ಒಂದು ವೆಳೆ ಕಷ್ಟಪಟ್ಟು ಮಾರುಕಟ್ಟಗೆ ತಂದರೂ 6 ರಿಂದ 12 ಗಂಟೆ ವರೆಗೂ ಮಾರುಕಟ್ಟೆ ಒಪನ್ ಇರುತ್ತೆ ತಂದ ಎಲ್ಲಾ ತರಕಾರಿ ವ್ಯಾಪಾರವಾಗುವುದಿಲ್ಲ ಉಳಿದ ತರಕಾರಿಯನ್ನು ಅಲ್ಲೆ ಸುರಿದು ಬರುವಂತಾಗಿದೆ ಇದರಿಂದ ಕೂಲಿಯೂ ಬರದಂತಾಗಿದೆ.

ಕೆಲ ತರಕಾರಿಗಳನ್ನು ದಾಸ್ತಾನು ಮಾಡಲು ಸಾಧ್ಯವಿಲ್ಲ ಅಲ್ಲದೆ ಗಿಡದಲ್ಲೇ ಬಿಟ್ರೂ ಬಲಿತು ನಾಶವಾಗುತ್ತವೆ ಇದರಿಂದ ಯಾವುದೆ ಪ್ರಯೋಜನ ವಿಲ್ಲ ಎಂದಿ ದೆವನಹಳ್ಳಿಯ ರೈತರೊಬ್ಬರು ತಿಳಿಸಿದ್ದಾರೆ.

ಹೂ ಮೂಡಿಯೊರು ಇಲ್ಲ ದೆವರಿಗೂ ಇಡೋಹಾಗಿಲ್ಲ ದೆವಾಲಯಗಳು ಬಂದ್ ಆಗಿವೆ ಇದರಿಂದ ಯಾವುದೆ ಪೂಜೆ ಕಾರ್ಯ ಕ್ರಮಗಳು ನಡಿತಾ ಇಲ್ಲ ಇನ್ನು ಕಲ್ಯಾಣ ಮಂಟಪಗಳಲ್ಲಿ ಮದುವೆಗಳು ರದ್ದಾಗಿ ಮನೆ ದೆವಾಲಯದಲ್ಲಿಬಸರಳವಾಗಿ ಮಾಡಲಾಗುತ್ತಿದೆ ಇದರಿಂದ ಹೂ ಬೆಲೆ ಕುಸಿದಿದೆ

ಮನೆಬಿಟ್ಟು ಮಹಿಳಡಯರು ಹೊರಬರದ ಕಾರಣ ಕನಕಾಂಬರ.ಮಲ್ಲಿಗೆ.ಕಾಕಡ ಹೂ ಕೆಳೊರೆಇಲ್ಲದಂತಾಗಿದೆ. ಹೂಗಳನ್ನು ಪ್ರತಿ ದಿನ ಕಟಾವು ಮಾಡಬೆಕು ಒಂದೆ ಒಂದು ದಿನವೂ ಗಿಡದಲ್ಲಿ ಬಿಡುವಂತಿಲ್ಲ ಬಿಟ್ರೆ ಗಿಡದಲ್ಲೆ ಬಾಡಿ ಹೊಗುತ್ತವೆ ಇಗಾಗಿ ಹೂಗಳ ಪರಿಮಳ ಜಮಿನಿನಲ್ಲೆ ಹರಡುತ್ತಾ ಕೊಳೆಯುವಂತಾಗಿದೆ ಮನೆಗಳಲ್ಲಿ ಪೂಜೆಗಷ್ಟೆ ಬಿಡಿ ಹೂ ತೆಗೆದು ಕೊಂಡು ಹೊಗ್ತಾರೆ.

ಸುಗಂಧ ರಾಜ. ಮಲ್ಲಿಗೆ ಹಾರವನ್ನು ಯಾರೋ ಕೆಳ್ತಾ ಇಲ್ಲ ಎಂದು ಮಲ್ಲೇಶ್ವರಂ ನ ಹೂ ಮಾರುಕಟ್ಟೆ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.ಅದಲ್ಲದೆ ಸಂಜೆ ಮಾರುಕಟ್ಟೆ ಇಲ್ಲ ಹಾಗಾಗಿ ಹೂಗಳು ಕೊಳೆಯುತ್ತಿವೆ. ಒಟ್ಟಿನಲ್ಲಿ ಕರೋನಾ ರೈತರು.ವ್ಯಾಪಾರಿಗಳ ಜಿವನವನ್ನು ಸಂಕಷ್ಟಕ್ಕೆ ಸಿಲುಕಿದೆ

Facebook Comments

Sri Raghav

Admin