ವಿಘ್ನ ನಿವಾರಕನಿಗೂ ಕೊರೊನಾ ಕಂಟಕ, ಗಣೇಶ ಉತ್ಸವಕ್ಕೆ ಬಿಬಿಎಂಪಿ ಅನುಮತಿ ಅನುಮಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.18- ವಿಘ್ನನಿವಾರಕ ಗಣೇಶನಿಗೂ ಕೊರೊನಾ ಕಾಟ ಎದುರಾಗಲಿದೆ. ನಗರದಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಗಣೇಶ ಉತ್ಸವಕ್ಕೆ ಬಿಬಿಎಂಪಿ ಅನುಮತಿ ನೀಡುವುದು ಅನುಮಾನವಾಗಿದೆ.

ಆಗಸ್ಟ್ 22ರಂದು ಗಣೇಶಹಬ್ಬವಿದೆ. ಆದರೆ ನಗರದ ಗಲ್ಲಿಗಲ್ಲಿಗಳಿಗೂ ಕೊರೊನಾ ಮಹಾಮಾರಿ ಹಬ್ಬಿರುವುದರಿಂದ ಎಲ್ಲಾ ಕಡೆ ಸೀಲ್‍ಡೌನ್, ಕಂಟೋನ್ಮೆಂಟ್ ಜೋನ್‍ಗಳು ಹೆಚ್ಚಾಗಿರುವುದರಿಂದ ಗಲ್ಲಿಗಲ್ಲಿಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ದೊರೆಯುವುದಿಲ್ಲ.

ರಸ್ತೆಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ ಜನಜಂಗುಳಿ ಸೇರಿ ಸೋಂಕು ಉಲ್ಬಣಗೊಳ್ಳುವ ಸಾಧ್ಯತೆ ಇರುವುದರಿಂದ ಬೀದಿಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸಲು ಅನುಮತಿ ದೊರೆಯುವುದಿಲ್ಲ.

ಈಗಾಗಲೇ ಪೆÇಲೀಸ್ ಇಲಾಖೆಯೊಂದಿಗೆ ಮಾತುಕತೆ ನಡೆಸುತ್ತಿರುವ ಬಿಬಿಎಂಪಿ ಅಧಿಕಾರಿಗಳು ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡದಿರುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.

ಒಂದು ವೇಳೆ ಬೀದಿಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಅನುಮತಿ ನಿರಾಕರಿಸಿದರೆ ಮನೆಗಳಿಗಷ್ಟೇ ಗಣೇಶ ಹಬ್ಬ ಸೀಮಿತವಾಗಲಿದೆ.

Facebook Comments

Sri Raghav

Admin