BREAKING : ರಾಮನಗರಕ್ಕೂ ಎಂಟ್ರಿ ಕೊಟ್ಟ ಕಿಲ್ಲರ್ ಕೊರೋನಾ..! ಎಂಜಿರಸ್ತೆ ಸೀಲ್‍ಡೌನ್..!

ಈ ಸುದ್ದಿಯನ್ನು ಶೇರ್ ಮಾಡಿ

ರಾಮನಗರ, ಜೂ.2- ಇದುವರೆಗೂ ಹಸಿರುವಲಯವೆಂದೇ ಗುರುತಿಸಿಕೊಂಡಿದ್ದ ರಾಮನಗರಕ್ಕೂ ಕೊರೊನಾಘಾತ ಎದುರಾಗಿದೆ.
ಬೆಂಗಳೂರಿನ ಸುಲ್ತಾನಪೇಟೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಸೋಂಕು ತಗುಲಿರುವುದರಿಂದ ರಾಮನಗರದ ಎಂ.ಜಿರಸ್ತೆಯನ್ನು ಅಕಾರಿಗಳು ಸೀಲ್‍ಡೌನ್ ಮಾಡಿದ್ದಾರೆ.

ಪಿ-3313 ವಾಸವಿದ್ದ ಪ್ರದೇಶವನ್ನು ಕಂಟೈನ್ಮೆಂಟ್ ಜೋನ್ ಆಗಿ ಪರಿವರ್ತಿಸಲಾಗಿದ್ದು, ಸೋಂಕಿತನ ಜೊತೆ ಸಂಪರ್ಕ ಬೆಳೆಸಿಕೊಂಡವರ ಪತ್ತೆ ಕಾರ್ಯ ಆರಂಭವಾಗಿದೆ.

ಲಾಕ್‍ಡೌನ್ ಸಂದರ್ಭದಲ್ಲಿ ಸೋಂಕಿತ ವ್ಯಕ್ತಿ ಬೆಂಗಳೂರಿಗೆ ಹೋಗಿಬಂದಿದ್ದ ಬಗ್ಗೆ ಮಾಹಿತಿ ದೊರೆತಿದ್ದು, ಸೋಂಕಿತ ಓಡಾಡಿದ್ದ ಪ್ರದೇಶಗಳು, ಸಂಪರ್ಕ ಮಾಡಿದ್ದ ವ್ಯಕ್ತಿಗಳ ಮಾಹಿತಿಯನ್ನು ಅಕಾರಿಗಳು ಕಲೆ ಹಾಕುತ್ತಿದ್ದಾರೆ.

ಸೋಂಕಿತನ ಕುಟುಂಬ ಸದಸ್ಯರು ಹಾಗೂ ಆತನೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 14 ಮಂದಿಯನ್ನು ಈಗಾಗಲೇ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ.

ಸೋಂಕಿತನ ದ್ವೀತಿಯ ಸಂಪರ್ಕದ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಆರೋಗ್ಯಾಕಾರಿಗಳು, ಅವಶ್ಯಕತೆಯಿದ್ದಲ್ಲಿ ಸೋಂಕಿತ ಓಡಾಟ ನಡೆಸಿದ್ದ ಏರಿಯಾಗಳ ಸೀಲ್‍ಡೌನ್ ಮಾಡಲು ಚಿಂತನೆ ನಡೆಸಿದ್ದಾರೆ.

ಒಟ್ಟಾರೆ ಹಸಿರುವಲಯಕ್ಕೂ ಸೋಂಕು ಹರಡಿರುವುದರಿಂದ ಎಚ್ಚೆತ್ತುಕೊಂಡಿರುವ ಅಕಾರಿಗಳು ಇಡೀ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ.

Facebook Comments

Sri Raghav

Admin