ಬಿಬಿಎಂಪಿ ಕೊರೋನಾ ಭಯ, ಬೆಂಗಳೂರಲ್ಲಿ ಹೆಚ್ಚಿದ ಆತಂಕ…!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 31-ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಮತ್ತೆ ಆತಂಕ ಹುಟ್ಟಿಸಿದೆ. ಇಷ್ಟು ದಿನ ವೈದ್ಯರು, ಪೊಲೀಸರು ಹಾಗೂ ವಿವಿಧ ಪ್ರದೇಶಗಳ ಜನರ ನಿದ್ದೆಗೆಡಿಸಿದ್ದ ಕೊರೋನಾ ಸೋಂಕು ಹರಡುವಿಕೆ ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೂ ತಟ್ಟಿದೆ.

ವಿಶ್ವಸನೀಯ ಮೂಲಗಳ ಪ್ರಕಾರ ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುವ ಅಕಾರಿಯೊಬ್ಬರ ಪತ್ನಿಗೆ ಕೊರೋನಾ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದ್ದು, ಸಿಬ್ಬಂದಿ ವರ್ಗದಲ್ಲಿ ಭಯ ಆವರಿಸಿದೆ.

ಸೋಂಕಿತರ ನಿವಾಸದ ಬಳಿಯಲ್ಲಿಯೂ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಬಾಪೂಜಿ ನಗರದಲ್ಲಿ ಕಳೆದ ಹಲವು ದಿನಗಳ ಹಿಂದೆ ಕ್ವಾರಂಟೈನ್ ಮಾಡಲಾಗಿತ್ತು.

ಕಳೆದ ಮೇ 24ರಿಂದ ಕ್ವಾರಂಟೈನ್ ತೆರವುಗೊಳಿಸಿ ಲಾಕ್‍ಡೌನ್ ಸಡಿಲಗೊಳಿಸಲಾಗಿತ್ತು. ಸೋಂಕು ಹೆಚ್ಚುತ್ತಿರುವ ಹನ್ನೆಯಲ್ಲಿ ಅಕಾರಿಗಳು ಎಚ್ಚೆತ್ತು ಹಲವು ನಿಯಂತ್ರಣಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಅಧಿಕಾರಿ ಕೆಲಸ ಮಾಡುತ್ತಿರುವ ಪಾಲಿಕೆ ಕೇಂದ್ರ ಕಚೇರಿಯನ್ನೇ ಸೀಲ್ಡೌನ್ ಮಾಡುವ ಆತಂಕ ಎದುರಾಗಿದ್ದು, ಪಾಲಿಕೆಯ ಆಯುಕ್ತರು ಸಹ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ.

ನಿನ್ನೆಯಷ್ಟೆ ಬೆಂಗಳೂರಿನಲ್ಲಿ 36ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಂದು ಕೂಡ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಲಾಕ್‍ಡೌನ್ ಸಡಿಲಿಕೆ ನಂತರ ಬೆಂಗಳೂರಿನ ಹೊಸ ಪ್ರದೇಶಗಳಿಗೆ ಸೋಂಕು ಕಾಣಿಸಿಕೊಳ್ಳುತ್ತಿರುವುದು ಸ್ವಾಭಾವಿಕವಾಗಿ ಭಯ ಹುಟ್ಟಿಸಿದೆ.

Facebook Comments

Sri Raghav

Admin