ಹಾಸನದ ಜನರೇ ಹುಷಾರ್..! ಬೆಚ್ಚಿಬೀಳಿಸುವಂತಿದೆ ಕೊರೋನಾ ಪೀಡಿತನ ಟ್ರಾವೆಲ್ ಹಿಸ್ಟರಿ..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಮೇ 24- ಹಾಸನ ನಗರದಲ್ಲಿ ಮನಸೋ ಇಚ್ಛೆ ತಿರುಗುತ್ತಿದ್ದ ಜನರೇ ಎಚ್ಚರ.. ಎಚ್ಚರ..ನಗರದಲ್ಲಿಂದು ಬೆಳಗ್ಗೆ ಒಂದು ಪಾಸಿಟಿವ್ ಪತ್ತೆಯಾಗಿದ್ದು, ನಿಲರ್ ಕ್ಷಿಸಿದರೆ ನಿಮಗೆ ಅಪಾಯ ಖಚಿತ.

ಹಾಸನ ನಗರದ ಕಾಟಿಹಳ್ಳಿ ಭಾಗದ ವ್ಯಕ್ತಿಯೋಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆತನ ಟ್ರಾವೆಲ್ ಹಿಸ್ಟರಿ ಎಲ್ಲರನ್ನೂ ಬೆಚ್ಚಿಬೀಳಿಸುವಂತೆ ಮಾಡಿದೆ.

ಹಾಸನದ ಪೊಲೀಸ್ ಸಿಬ್ಬಂದಿಗೂ ಕೊರೊನಾ ಕಾಣಿಸಿಕೊಂಡಿರುವುದು ಸ್ಥಳೀಯರನ್ನು ಆತಂಕಕ್ಕೆ ಈಡುಮಾಡಿದೆ.ಗಸ್ತು ಕರ್ತವ್ಯದ ವೇಳೆ ಇವರು ಕೊರೊನಾ ರೋಗಿಗಳ ಸಂಪರ್ಕಕ್ಕೆ ಬಂದಿರಬಹುದು ಎಂದು ಶಂಕಿಸಲಾಗಿದ್ದು, ಜಿಲ್ಲಾಡಳಿತ ಈಗ ಎಚ್ಚೆತ್ತುಕೊಂಡಿದೆ.

ಹಿರಿಯ ಅಕಾರಿಗಳು ಕೊರೊನಾ ಸೋಂಕಿತ ಪ್ರದೇಶಗಳಿಗೆ ದೌಡಾಯಿಸಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಹಲವು ಪ್ರದೇಶಗಳನ್ನು ಸೀಲ್‍ಡೌನ್ ಕೂಡ ಮಾಡಲಾಗಿದೆ.

ಕಳೆದ ಎರಡು ದಿನಗಳಿಂದ ಯಾವುದೇ ಕೊರೊನಾ ಸೋಂಕು ಕಾಣಿಸಿಕೊಳ್ಳದ ಜಿಲ್ಲೆಯಲ್ಲಿ ಇಂದು ಪಾಸಿಟಿವ್ ಪ್ರಕರಣ ಗೊತ್ತಾಗುತ್ತಿದ್ದಂತೆಯೇ ಜನರು ಕೂಡ ಆತಂಕಕ್ಕೊಳಗಾಗಿದ್ದಾರೆ.

Facebook Comments

Sri Raghav

Admin