ಮೈಮರೆತು ಪ್ರತಿಭಟನೆ ನಡೆಸಿದವರಿಗೆ ಕಾದಿದೆ ಕೊರೋನಾ ಆಪತ್ತು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.28- ಕೊರೊನಾ ಬಗ್ಗೆ ಭಯವೂ ಇರಲಿಲ್ಲ. ಜಾಗೃತಿಯೂ ಇರಲಿಲ್ಲ. ಸಾಮಾಜಿಕ ಅಂತರವೂ ಇರಲಿಲ್ಲ. ಬೆಂಗಳೂರು ನಗರ ಸೇರಿದಂತೆ ರಾಜ್ಯದ ಬಹತೇಕ ಕಡೆ ನಡೆದ ಪ್ರತಿಭಟನೆಯಲ್ಲಿ ಕಂಡುಬಂದ ಅವಾಂತರವಿದು.

ನಗರದ ಬಹುತೇಕ ಕಡೆ ಪ್ರತಿಭಟನೆಗಳಲ್ಲಿ ಕೊರೊನಾ ಬಗ್ಗೆ ಯಾರೂ ಕ್ಯಾರೇ ಎನ್ನಲಿಲ್ಲ. ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಲೇ ಇವೆ. ಸಾವಿನ ಸಂಖ್ಯೆ ಕೂಡ ಹೆಚ್ಚುತ್ತಲೇ ಇದೆ. ಆದರೆ ಜನಕ್ಕೆ ಮಾತ್ರ ಇದರ ಬಗ್ಗೆ ಭೀತಿಯೇ ಇರಲಿಲ್ಲ.

ಭೂಸುಧಾರಣೆ, ಎಪಿಎಂಸಿ ಕಾಯ್ದೆ ವಿರೋಸಿ ಬೆಂಗಳೂರು, ಮೈಸೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಮಹಾನಗರಗಳು ಸೇರಿದಂತೆ ತಾಲ್ಲೂಕು ಮಟ್ಟಗಳಲ್ಲಿ ರೈತರು, ದಲಿತ, ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಆದರೆ ಕೋವಿಡ್ 19 ಸಂಬಂಧ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು ಅಷ್ಟಾಗಿ ಕಂಡುಬರಲಿಲ್ಲ. ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ನಾಯಕರು, ಕಾರ್ಯಕರ್ತರು, ಮುಖಕ್ಕೆ ಮಾಸ್ಕ್ ಧರಿಸಿದ್ದು ಹೊರತುಪಡಿಸಿದರೆ ಸಾಮಾಜಿಕ ಅಂತರವೇ ಇರಲಿಲ್ಲ.

ಇತ್ತ ರೈತ ಸಂಘಟನೆಗಳು ಟೌನ್‍ಹಾಲ್ ಬಳಿ ನಡೆಸಿದ ಪ್ರತಿಭಟನೆ, ರ್ಯಾಲಿಯಲ್ಲಿ ಇದೇ ದೃಶ್ಯ ಕಂಡುಬಂತು. ರ್ಯಾಲಿಯಲ್ಲಿದ್ದ ಕಾರ್ಯಕರ್ತರ ಮುಖದಲ್ಲಿ ಮಾಸ್ಕ್ ಇತ್ತೆ ಹೊರತು ಸಾಮಾಜಿಕ ಅಂತರವಿರಲಿಲ್ಲ.

ಎಲ್ಲೆಡೆ ನಡೆದ ಪ್ರತಿಭಟನೆಗಳಲ್ಲೂ ಇದೇ ಪರಿಸ್ಥಿತಿ ಇತ್ತು. ರಾಜ್ಯದಲ್ಲಿ ಪ್ರತಿದಿನ 10 ಸಾವಿರದಷ್ಟು ಕೊರೊನಾ ಪ್ರಕರಣಗಳು ದಾಖಲಾಗುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆರೋಗ್ಯ ಇಲಾಖೆ ಜಾಗೃತಿ ಮೂಡಿಸುತ್ತಲೇ ಇದೆ. ಆದರೆ ಜನರು ಮಾತ್ರ ಇದಾವುದಕ್ಕೂ ಕ್ಯಾರೇ ಎನ್ನದೆ ತಮ್ಮ ಪಾಡಿಗೆ ತಾವು ತೋಚಿದ್ದನ್ನು ಮಾಡುತ್ತಲೇ ಇದ್ದಾರೆ.

Facebook Comments

Sri Raghav

Admin